ಬಾಹ್ಯಾಕಾಶ ವಿಜ್ಞಾನಿ ಡಾ ಯು ಆರ್ ರಾವ್ : ನಡೆದುಬಂದ ದಾರಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 24: 'ನನಗೆ ಇದು ಮರಣೋತ್ತರವಾಗಿ ಸಿಗಬಹುದು ಅಂದುಕೊಂಡಿದ್ದೆ...' ಇದು ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ಯು. ಆರ್. ರಾವ್(85), ಕಳೆದ ಜನವರಿಯಲ್ಲಿ(2017) ತಮಗೆ ಪದ್ಮವಿಭೂಷಣ ಪ್ರಶಸ್ತಿ ಬಂದಾಗ ನೀಡಿದ್ದ ಪ್ರತಿಕ್ರಿಯೆ!

ಮಹಾನ್ ವ್ಯಕ್ತಿಗಳಿಗೆ ತಮ್ಮ ಸಾವಿನ ಸೂಚನೆ ಮುಂಚಿತವಾಗಿಯೇ ಸಿಕ್ಕುತ್ತೆ ಎಂಬ ಮಾತಿಗೆ ಇದು ಪುರಾವೆಯಾ? ಏನೋ ಗೊತ್ತಿಲ್ಲ, ಆದರೆ ಕನ್ನಡನಾಡು ಬಾಹ್ಯಾಕಾಶ ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಲ್ಲಿ ನಿಸ್ಸಂದೇಹವಾಗಿ ಯು.ಆರ್. ರಾವ್ (ಮಾರ್ಚ್ 10, 1932- ಜುಲೈ 24, 2017) ಸಹ ಒಬ್ಬರು.

Space scientist, former ISRO chief Prof. U R Rao's brief profile

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು (ಜುಲೈ 24) ಬೆಳಗ್ಗಿನ ಜಾವ 2.55 ರ ಸುಮಾರಿಗೆ ಬೆಂಗಳೂರಿನ ಇಂದಿರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾರು. ಅವರ ಸಂಕ್ಷಿಪ್ತ ವ್ಯಕ್ತಿಚಿತ್ರಣ ಇಲ್ಲಿದೆ. ಉಡುಪಿ ರಾಮಚಂದ್ರ ರಾವ್ ಎಂಬುದು ಅವರ ಪೂರ್ಣ ಹೆಸರು. ಆದರೆ ವಿಶ್ವದಾದ್ಯಂತ ಅವರು ಪ್ರಸಿದ್ಧರಾಗಿದ್ದೇ ಯು.ಆರ್.ರಾವ್ ಎಂಬ ಹೆಸರಿನಿಂದ.

ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್ ನಿಧನ

* ಮಾರ್ಚ್ 10, 1932 ರಲ್ಲಿ ಉಡುಪಿ ಜಿಲ್ಲೆಯ ಮಾರ್ಪಳ್ಳಿಯ ಕೃಷಿಕ ಕುಟುಂಬದಲ್ಲಿ ಜನನ.
* ತಂದೆ ಲಕ್ಷ್ಮೀನಾರಾಯಣರಾವ್, ತಾಯಿ ಕೃಷ್ಣವೇಣಿಯಮ್ಮ
* ಉಡುಪಿ, ಅನಂತಪುರ, ಮದ್ರಾಸ್, ಬನಾರಸ್ ಗಳಲ್ಲಿ ವಿದ್ಯಾಭ್ಯಾಸ.
* 1952 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ, 1954ರಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ.
* ಪತ್ನಿ ಯಶೋಧ ರಾವ್‌, ಪುತ್ರ ಮಧನ್‌ ರಾವ್‌, ಪುತ್ರಿ ಮಾಲಾ ರಾವ್‌.
* ವಿಕ್ರಂ ಸಾರಾಭಾಯಿ ಅವರ ಮಾರ್ಗದರ್ಶನದಲ್ಲಿ ವಿಶ್ವವಿಕಿರಣಗಳ ಬಗೆಗೆ ಮಾಡಿದ ಸಂಶೋಧನಾತ್ಮಕ ಅಧ್ಯಯನಕ್ಕೆ 1960 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ.
* ನಂತರ ಅಮೆರಿಕದ ಮೆಸಾಚುಸೆಟ್ಸ್ ಉನ್ನತ ವ್ಯಾಸಂಗ. ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ಸೇವೆ.
* ತಿರುವನಂತಪುರದ ಇಂಡಿಯನ್ ಇನ್ಸ್ ಟಿಟ್ಯೂಟ್ ಫಾರ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ(ಐಐಎಸ್ ಟಿ)ಯ ಉಪಕುಲಪತಿಯಾಗಿಯೂ ಕಾರ್ಯನಿರವಹಿಸಿದ್ದರು.
*ಅಹಮದಾಬಾದ್ ನ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯ ಮತ್ತು ಬೆಂಗಳೂರಿನ ನೆಹರೂ ಪ್ಲಾನೆಟೆರಿಯಂ ನ ಅಧ್ಯಕ್ಷರೂ ಆಗಿದ್ದರು.
* ಇಸ್ರೋದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, 1985 ರಲ್ಲಿ ಇಸ್ರೋ ಅಧ್ಯಕ್ಷರಾಗಿ ಆಯ್ಕೆ.
* ಪಿಎಸ್ ಎಲ್ ವಿ, ಎಎಸ್ ಎಲ್ ವಿ, ಜಿಎಸ್ ಎಲ್ ವಿಗಳ ಯಶಸ್ವೀ ಉಡ್ಡಯನದ ಹಿಂದೆ ರಾವ್ ಅವರ ಅವಿರತ ಶ್ರಮವಿದೆ.
* ಭಾರತದ ಮೊದಲ ಉಪಗ್ರಹ ಎಂಬ ಖ್ಯಾತಿ ಗಳಿಸಿದ್ದ'ಆರ್ಯಭಟ' ಉಪಗ್ರಹದ ಹಿಂದೆಯೂ ರಾವ್ ಅವರ ಕನಸಿತ್ತು.
*ಭಾಸ್ಕರ, ಆಯಪಲ್, ರೋಹಿಣಿ, ಇನ್ಸಾಟ್‌-1, ಇನ್ಸಾಟ್‌-2, ಐಆರ್ ಎಸ್‌-1 ಮುಂತಾದ 18 ಉಪಗ್ರಹಗಳ ನಿರ್ಮಾಣದಲ್ಲಿ ರಾವ್ ಮುಖ್ಯ ಮಾರ್ಗದರ್ಶಕರಾಗಿದ್ದರು.

ISRO former chairman 85 year old U R Rao passes away | Oneindia Kannada

ಪ್ರಶಸ್ತಿಗಳು
ಯು ಆರ್ ರಾವ್ ಅವರಿಗೆ ಸಂದ ಪ್ರಶಸ್ತಿಗಳ ಪಟ್ಟಿ ದೊಡ್ಡದಿದೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.
* 1975 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.ಭಾರತದ ಮೊದಲ ಉಪಗ್ರಹ ಎಂಬ ಖ್ಯಾತಿ ಗಳಿಸಿದ್ದ'ಆರ್ಯಭಟ'
* 1975 ಹರಿ ಓಂ ವಿಕ್ರಮ ಸಾರಾಭಾಯಿ ಪ್ರಶಸ್ತಿ
* 1976 ರಲ್ಲಿ ಪದ್ಮಭೂಷಣ ಪ್ರಶಸ್ತಿ
* 1983 ರಲ್ಲಿ ಮತ್ತೊಮ್ಮೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
* 1994 ರಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ
* 2001 ರಲ್ಲಿ ನಾಡೋಜ ಪ್ರಶಸ್ತಿ
* 2002 ಸರ್ ಎಂ ವಿಶ್ವೇಶ್ವರಯ್ಯ ಮೆಮೋರಿಯಲ್ ಪ್ರಶಸ್ತಿ
* 2004 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ
* 2017 ರಲ್ಲಿ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ
*2013 ರಲ್ಲಿ ವಾಷಿಂಗ್ಟನ್ ನ ಸೊಸೈಟಿ ಆಫ್ ಸೆಟಲೈಟ್ ಪ್ರೊಫೆಷನಲ್ಸ್ ಇಂಟರ್ನ್ಯಾಷನಲ್ ವತಿಯಿಂದ ಕೊಡಮಾಡುವ 'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್' ಗೌರವಕ್ಕೂ ಪಾತ್ರರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Professor U R Rao renowned space scientist passed away at Bengaluru today. He was 85. Rao the former ISRO chief and the man behind India's first satellite Aryabhatta passed away at around 2.30 am on Monday. He was admitted to hospital with a heart ailment earlier this month. The former Isro chief was serving as the chairman of the governing council of the physical research laboratory and the chancellor of the Indian Institute of Science and Technology at Thiruvananthapuram. Here is his brief profile.
Please Wait while comments are loading...