ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸದ ಸಮಸ್ಯೆ, ನಿರುದ್ಯೋಗಕ್ಕೆ ಪರಿಹಾರವೇ ನನ್ನ ಗುರಿ: ಸೌಮ್ಯಾ ರೆಡ್ಡಿ

By Nayana
|
Google Oneindia Kannada News

Recommended Video

Sowmya Reddy Interview : ಕಾಂಗ್ರೆಸ್ ಅಭ್ಯರ್ಥಿ, ಜಯನಗರ ಕ್ಷೇತ್ರ | Oneindia Kannada

ಬೆಂಗಳೂರು, ಮೇ 09: ನಗರದಲ್ಲಿರುವ ಕಸದ ಸಮಸ್ಯೆ, ಟ್ರಾಫಿಕ್, ಮತ್ತು ಉದ್ಯೋಗದ ಸಮಸ್ಯೆಯನ್ನು ಸರಿಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ.ನಾನು ಇದೆಲ್ಲವನ್ನೂ ಸರಿಪಡಿಸುವ ವಿಶ್ವಾಸದಿಂದ ರಾಜಕೀಯಕ್ಕೆ ಕಾಲಿಟ್ಟಿದ್ದೇನೆ ಎಂದು ಜಯನಗರ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆ ಕುರಿತು ಒನ್‌ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಜಯನಗರದ ಸಮಸ್ಯೆಗಳ ಕುರಿತು ವಿವರಿಸಿದ ಅವರು, ಜಯನಗರ ಕಳೆದ 15 ವರ್ಷಗಳ ಹಿಂದೆ ಎಷ್ಟು ಹಸಿರಾಗಿತ್ತು ಆದರೆ ಕಾಲ ಕ್ರಮೇಣ ಬರಡಾಗುತ್ತಿದೆ. ಕಸದ ಸಮಸ್ಯೆ ವಿಪರೀತವಾಗಿದೆ ಹಾಗಾಗಿ ಒಣತ್ಯಾಜ್ಯ ಸಂಸ್ಕರಣ ಘಟಕವನ್ನು ಸ್ಥಾಪಿಸುವ ಅಗತ್ಯವಿದೆ ಎಂದರು.

ಆಂತರಿಕ ಕಚ್ಚಾಟದಲ್ಲೇ ಐದು ವರ್ಷ ಕಳೆದಿತ್ತು ಬಿಜೆಪಿ: ರಾಮಲಿಂಗಾರೆಡ್ಡಿಆಂತರಿಕ ಕಚ್ಚಾಟದಲ್ಲೇ ಐದು ವರ್ಷ ಕಳೆದಿತ್ತು ಬಿಜೆಪಿ: ರಾಮಲಿಂಗಾರೆಡ್ಡಿ

ಸಿದ್ದರಾಮಯ್ಯ ಸರ್ಕಾರ ಜನರಿಗಾಗಿ ಒಳಿತನ್ನೇ ಮಾಡಿದೆ, ಕ್ಷೀರ ಭಾಗ್ಯ, ಅನ್ನಭಾಗ್ಯ ಹೀಗೆ ವಿಶಿಷ್ಟ ಯೋಜನೆಯನ್ನು ಹೊರತಂದಿತ್ತು. ಜನರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎನ್ನುವ ನಂಬಿಕೆ ನನಗಿದೆ. ಇನ್ನು ನಿರುದ್ಯೋಗ ಸಮಸ್ಯೆಯೂ ಅತಿಯಾಗಿದೆ. ಕೌಶಲ್ಯ ಕರ್ನಾಟಕ ಯೋಜನೆ ಮೂಲಕ ಏಳೂವರೆ ಲಕ್ಷ ಮಂದಿ ತರಬೇತಿ ಪಡೆದಿದ್ದಾರೆ. ಹಾಗೆಯೇ ನಿರುದ್ಯೋಗ ಮುಕ್ತ ಜಯನಗರವನ್ನು ನಿರ್ಮಿಸಲು ಪಣತೊಟ್ಟಿದ್ದೇನೆ ಎಂದು ಹೇಳಿದರು.

Sowmya Reddy wsnts to resolve waste management, unemployment issues

ಜಯನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಜತೆಗೆ ಸಾಕಷ್ಟು ಮಂದಿ ಬಾಡಿಗೆ ಮನೆಯಲ್ಲಿದ್ದಾರೆ ಅವರಿಗೆ ಮನೆಗಳನ್ನು ಕಟ್ಟಿಸಿಕೊಡುವ ಕೆಲಸ ಮಾಡಬೇಕಿದೆ. ಒಟ್ಟು 224 ಕ್ಷೇತ್ರಗಳ ಪೈಕಿ ಆರರಿಂದ ಎಂಟು ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರಿದ್ದಾರೆ. ಆದರೆ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರೇ ಮುಂದಿದ್ದಾರೆ. ಮಹಿಳೆಯರನ್ನು ಮುನ್ನೆಲೆಗೆ ತರುವ ಅಗತ್ಯವಿದೆ ಎಂದರು.

2018ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಪುತ್ರಿಯನ್ನು ಜಯನಗರದಿಂದ ಅಖಾಡಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿರುವ ಸೌಮ್ಯ ರೆಡ್ಡಿ ಅವರು ಈಗಾಗಲೇ ಜಯನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸಾಕಷ್ಟು ಮಾಹಿತಿಗಳನ್ನ ಸೌಮ್ಯ ರೆಡ್ಡಿಯವರು ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.

English summary
Jayanagar Congress candidate Sowmya Reddy said in interview with One India Kannada that she wanted to resolve issues like waste management, traffic jam and unemployment in her constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X