ಬೆಂಗಳೂರು ರೈಲ್ವೆ ನಿಲ್ದಾಣದಲ್ಲೇ ಸಿಗಲಿದೆ ಓಲಾ ಕ್ಯಾಬ್

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 08 : ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಶೀಘ್ರದಲ್ಲೇ ಓಲಾ ಕ್ಯಾಬ್‌ಗಳು ಸಂಚಾರ ಆರಂಭಿಸಲಿವೆ. ರೈಲ್ವೆ ನಿಲ್ದಾಣದಿಂದ ಓಲಾ ಕ್ಯಾಬ್ ಸಂಚಾರ ಆರಂಭಿಸುವ ಕುರಿತು ಮಾತುಕತೆ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಸೇವೆಗಿಂತ ಓಲಾ ಟ್ಯಾಕ್ಸಿ ಸೇವೆಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದ್ದರಿಂದ, ಭಾರತೀಯ ರೈಲ್ವೆ ನಿಲ್ದಾಣದಲ್ಲಿ ಓಲಾ ಸೇವೆಗೆ ಸ್ಥಳವಕಾಶ ನೀಡಲಿದ್ದು, ಪ್ರಯಾಣಿಕರು ನಿಲ್ದಾಣದಿಂದಲೇ ಓಲಾ ಟ್ಯಾಕ್ಸಿ ಮೂಲಕ ಸಂಚಾರ ನಡೆಸಬಹುದಾಗಿದೆ.[ಬೆಂಗಳೂರು : ಪ್ರೀಪೇಯ್ಡ್ ಟ್ಯಾಕ್ಸಿ ದರಗಳು ಹೆಚ್ಚಳ]

Soon you can get Ola cab in Krantivira Sangolli Rayanna railway station

ಭಾರತೀಯ ರೈಲ್ವೆ ಜೊತೆಗೆ ಓಲಾ ಟ್ಯಾಕ್ಸಿ ಸೇವೆ ಆರಂಭಿಸುವ ಕುರಿತು ಮೊದಲ ಸುತ್ತಿನ ಮಾತುಕತೆ ನಡೆಸಿದೆ. ಮಾತುಕತೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇನ್ನೊಂದು ತಿಂಗಳಿನಲ್ಲಿ ಸೇವೆ ಆರಂಭವಾಗುವ ನಿರೀಕ್ಷೆ ಇದೆ. ಪ್ರಯಾಣಿಕರು ಮೊಬೈಲ್ ಮೂಲಕ ಟ್ಯಾಕ್ಸಿ ಬುಕ್ ಮಾಡಿಕೊಂಡು ಅಥವ ನಿಲ್ದಾಣಕ್ಕೆ ನೇರವಾಗಿ ತೆರಳಿ ಕ್ಯಾಬ್ ಸೇವೆ ಪಡೆಯಬಹುದು.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಎರಡು ಟ್ಯಾಕ್ಸಿ ಕಂಪನಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸದ್ಯ ಸೇವೆಯನ್ನು ನೀಡುತ್ತಿವೆ. ಇವುಗಳು ರೈಲ್ವೆಗೆ ಪಾವತಿ ಮಾಡುವ ಹಣಕ್ಕಿಂತ ಹೆಚ್ಚಿನ ಹಣವನ್ನು ಓಲಾ ಪಾವತಿಸಲಿದೆ. ರೈಲ್ವೆಯೂ ಸೇವೆ ಆರಂಭಿಸಲು ಸಮ್ಮತಿ ಸೂಚಿಸಿದೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಟ್ಯಾಕ್ಸಿ ದರ ಹೆಚ್ಚಳ ಮಾಡಲಾಗಿತ್ತು : ಟ್ಯಾಕ್ಸಿ ಚಾಲಕರ ಬೇಡಿಕೆಗೆ ಸ್ಪಂದಿಸಿದ್ದ ಸಾರಿಗೆ ಇಲಾಖೆ ಬೆಂಗಳೂರು ರೈಲ್ವೆ ನಿಲ್ದಾಣಗಳ ಬಳಿಯ ಪ್ರೀಪೇಯ್ಡ್ ಟ್ಯಾಕ್ಸಿದರವನ್ನು ಹೆಚ್ಚಳ ಮಾಡಿ 2015ರ ಜುಲೈನಲ್ಲಿ ಆದೇಶ ಹೊರಡಿಸಿತ್ತು. ನೂತನ ದರದ ಅನ್ವಯ ಬೆಂಗಳೂರು ಸೆಂಟ್ರಲ್ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಬಳಿಯ ಪ್ರೀಪೇಯ್ಡ್ ಟ್ಯಾಕ್ಸಿಗಳ ಸೇವೆಯನ್ನು ಪಡೆಯಲು 4 ಕಿ.ಮೀ.ಗಳ ವರೆಗೆ ಕನಿಷ್ಠ ಪ್ರಯಾಣದರ 65 ರೂ.ಗಳನ್ನು ಪಾವತಿ ಮಾಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Railway Division has decided to permit Ola cab to run its services at the Krantivira Sangolli Rayanna railway station.
Please Wait while comments are loading...