ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ ಬೆಂಗಳೂರಲ್ಲಿ ಪಾರ್ಕಿಂಗ್ ಫೀ ವ್ಯವಸ್ಥೆ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 07 : ನಗರದಲ್ಲಿ ನೀರು, ವಿದ್ಯುತ್, ಗ್ಯಾಸ್, ರೇಷನ್ ಬಿಲ್, ಮನೆ ಬಾಡಿಗೆ ಹೀಗೆ ಎಲ್ಲದಕ್ಕೂ ಹಣ ನೀಡುತ್ತಾ ಹೈರಾಣ ಆಗಿದ್ದೀರಾ?...ಇದೀಗ ಬಿಲ್ ಪಾವತಿಗಳ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ ಬರಮಾಡಿಕೊಳ್ಳಿ.

ಏನಪ್ಪಾ ಅಂದ್ರೆ ನೀವು ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಅಂದರೆ ಪಾರ್ಕಿಂಗ್ ಗೆ ಬಿಲ್ ಪಾವತಿ ಮಾಡಬೇಕು. ಇಲ್ಲದಿದ್ದರೆ ನಿಮಗೆ ವಾಹನ ನಿಲ್ಲಿಸಲು ಸ್ಥಳಾವಕಾಶ ದೊರೆಯುವುದೇ ಇಲ್ಲ. ನೀವು ಅಧಿಕಾರಿಗಳನ್ನು ಯಾಮಾರಿಸಿ ವಾಹನ ನಿಲ್ಲಿಸಿ ಹೋದರೂ ಬಿಲ್ ಪೇ ಮಾಡದೆ ವಾಹನ ತೆಗೆಯಲಾಗದು.[ಪಾರ್ಕಿಂಗ್ ಪ್ರಾಬ್ಲಂಗೆ ಪರಿಹಾರ ಹುಡುಕಿದ ನಾರಾಯಣ ಭಟ್ಟರು]

Soon, pay for parking in Bengaluru

ಈ ವ್ಯವಸ್ಥೆಯನ್ನು ಸುಮಾರು ವರ್ಷಗಳ ಹಿಂದೆಯೇ ಬಿಬಿಎಂಪಿ ಜಾರಿಗೆ ತಂದಿತ್ತು. ಆದರೆ ಇದು ಸರಿಯಾಗಿ ಕಾರ್ಯರೂಪಕ್ಕೆ ಬಾರದೆ ಅರ್ಧದಲ್ಲೇ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಇದೀಗ ಬಿಬಿಎಂಪಿ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರೀಕ್ ಜೊತೆ ಸೇರಿ ಮತ್ತೆ ಅಕ್ಟೋಬರ್ ನಿಂದ ಪುನಃ ಈ ವ್ಯವಸ್ಥೆ ಜಾರಿಗೆ ತರಲು ನಿರ್ಧಾರ ತೆಗೆದುಕೊಂಡಿದೆ.

ಈಗಾಗಲೇ 85 ರಸ್ತೆಗಳನ್ನು A,B,C ಎಂದು ವಿಭಾಗಿಸಲಾಗಿದ್ದು ಈ ವ್ಯವಸ್ಥೆ ಜಾರಿಗೆ ತರಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈ ಬಿಲ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಒಂದು ಗಂಟೆಗೆ ಕಾರುಗಳಿಗೆ 30 ರೂ, ಬೈಕ್, ಸೈಕಲ್ ಇನ್ನಿತರ ಸಣ್ಣ ವಾಹನಗಳಿಗೆ 15 ರೂ ನೀಡಬೇಕಾಗುತ್ತದೆ.

'ಈ ವ್ಯವಸ್ಥೆಯನ್ನು ತಂತ್ರಜ್ಞಾನಭರಿತವಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಇದರ ಕುಂದು ಕೊರತೆಯ ಕುರಿತಾಗಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಏರ್ಪಡಿಸಿಕೊಳ್ಳಲು ಮೊಬೈಲ್ ಆಪ್ ಜಾರಿ ಮಾಡಲಾಗುವುದು. ಜೊತೆಗೆ ಸಿಸಿಟಿವಿ ಕ್ಯಾಮರ ಅಳವಡಿಸಲಾಗುವುದು.

ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕವೂ ಬಿಲ್ ಪಾವತಿಸಲು ಅನುಕೂಲ ಮಾಡಿಕೊಡುವುದರ ಜೊತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಸುವ್ಯವಸ್ಥೆ ತರಲು ಪ್ರಯತ್ನ ಮಾಡಲಾಗುವುದು' ಎಂದು ಡೈರೆಕ್ಟರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್ ಪೋರ್ಟ್ ನ ಕಮೀಷನರ್ ವಿ. ಮಂಜುಳಾ ತಿಳಿಸಿದರು.

English summary
BBMP is reintroducing Pay Parking system from October month.Parking fee for car 30 rs and 15 rs for motorcycle other small vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X