ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಂಗಿತ್ತು ಸೋಂಪುರ ಗ್ರಾಮ ಹೇಗಾಯ್ತು ಗೊತ್ತಾ

By Rajendra
|
Google Oneindia Kannada News

ಬೆಂಗಳೂರು, ಮಾ.21: ಸರ್ಕಾರಿ ಹಾಗೂ ಖಾಸಗಿ ಅಭಿವೃದ್ಧಿ ಯೋಜನೆಗಳಲ್ಲಿ ರೈತರು ಮತ್ತು ಸಾಮಾನ್ಯ ಜನರು ಭೂಮಿ, ಆಶ್ರಯಕ್ಕಾಗಿರುವ ಸೂರನ್ನು ಕಳೆದುಕೊಳ್ಳುವುದು ಸಹಜ. ಅವರಿಗೆ ಪರಿಹಾರವೆಂದು ಅಷ್ಟಿಷ್ಟು ಹಣವನ್ನು ನೀಡಿ ಕೈತೊಳೆದುಕೊಳ್ಳುವುದು ರೂಢಿಯಾಗಿ ಬಿಟ್ಟಿದೆ.

ಆದರೆ, ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ಯೋಜನೆಗಾಗಿ ಭೂಮಿ ಕೊಟ್ಟವರಿಗೆ ಈ ಯಾವುದೇ ಭಯ ಇಲ್ಲ. ಯಾಕೆಂದರೆ ಇವರಿಗೆಲ್ಲಾ ಊಹೆಗಿಂತ ಹೆಚ್ಚಾಗಿ ನೈಸ್, ಕಾಂಕ್ರೀಟ್ ಮನೆಗಳನ್ನು ಸೋಂಪುರ ಗ್ರಾಮದಲ್ಲಿ ಕಟ್ಟಿಕೊಟ್ಟಿದೆ.

ಭೂಮಿ ಕೊಟ್ಟವರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಪರಿಹಾರ ಧನ ನೀಡಿ ಮನೆಗೊಬ್ಬರಿಗಂತೆ ಸಂಸ್ಥೆಯಲ್ಲಿ ಉದ್ಯೋಗ ಒದಗಿಸಲಾಗಿದೆ. ಜೊತೆಗೆ ಮನೆ ಕೊಟ್ಟವರ ಹಿಂದಿನ ಮನೆಯ ಎರಡು ಪಟ್ಟು ಹೆಚ್ಚಿನ ಅಳತೆಯಲ್ಲಿ ಸುಸಜ್ಜಿತ ಮನೆಗಳನ್ನು ಕಟ್ಟಿಕೊಡಲಾಗಿದೆ. ಇದರ ಜೊತೆಗೆ ಇವುಗಳ ಉಸ್ತುವಾರಿಯನ್ನು ನೈಸ್ ಸಂಸ್ಥೆಯೇ ನೋಡಿಕೊಳ್ಳುತ್ತಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನಗರದ ಮನೆಗಳಂತೆ ವಿಶಾಲವಾದ ಹಾಲ್, ದೊಡ್ಡದಾದ ಬೆಡ್ ರೂಂಗಳು, ಅಚ್ಚುಕಟ್ಟಾದ ಅಡುಗೆಮನೆ, ದೇವರ ಮನೆ, ಸ್ನಾನದ ಕೋಣೆ ಹೀಗೆ ಎಲ್ಲಾ ಸೌಲಭ್ಯಗಳನ್ನು ಸೋಂಪುರದ ನಿವಾಸಿಗಳಿಗೆ ನೀಡಲಾಗಿದೆ.

ಇನ್ನು ಈ ಮನೆಗಳ ನಿರ್ಮಾಣದ ವೆಚ್ಚವೆಲ್ಲಾ ನೈಸ್ ಸಂಸ್ಥೆಯದ್ದು. ಈ ಮನೆಗಳನ್ನು ಮನೆಯ ಯಜಮಾನನ ಬದಲಾಗಿ ಆತನ ಪತ್ನಿಯ ಹೆಸರಲ್ಲಿ ನೋಂದಾವಣಿ ಮಾಡಿಸಲಾಗಿದೆ. ಇದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತೆ ಅಂತಾರೆ ನೈಸ್ ಸಂಸ್ಥೆ ಅಧಿಕಾರಿಗಳು.

Somapura: From village dwellings

ಇಪ್ಪತ್ತಮೂರಕ್ಕಿಂತಲೂ ಹೆಚ್ಚು ಮನೆಗಳಿದ್ದ ಈ ಹಳ್ಳಿಯನ್ನು ಈಗ ಸಂಪೂರ್ಣವಾಗಿ ನವೀಕರಿಸಲಾಗಿದೆ. ಇನ್ನು ಇದರ ಪಕ್ಕದ ವರಾಹಸಂದ್ರ ಹಳ್ಳಿಯಲ್ಲಿ ವಿಜಯನಗರ ಕಾಲದ ನಂದಿ ದೇವಾಲಯವಿತ್ತು. ಆ ದೇವಾಲಯವನ್ನು ಅದೇ ಸ್ಥಳದಲ್ಲಿ ಹೊಸ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇನ್ನು ಇದರ ಪೂಜೆಗಾಗಿ ಒಂದು ಅರ್ಚಕರ ಕುಟುಂಬಕ್ಕೆ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ಈ ನವೀಕರಿಸಲಾಗಿರುವ ಹಳ್ಳಿಯಲ್ಲಿ ವಿದ್ಯುತ್, ಒಳಚರಂಡಿ, ಕುಡಿಯುವ ನೀರಿಗಾಗಿ ಬೃಹತ್ತಾದ ಟ್ಯಾಂಕ್, ಕೇಬಲ್ ಕನೆಕ್ಷನ್, ಟಾರ್ ರಸ್ತೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಜನರಿಗೆ ನೀಡಲಾಗಿದೆ.

ಒಟ್ಟು 143 ಹಳ್ಳಿಗಳು, 246 ಕೆರೆಗಳು, 26 ದೇವಾಲಯಗಳು, ಪ್ರಾಥಮಿಕ ಶಾಲೆಗಳು, ಹಳ್ಳಿಗೊಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜೊತೆಗೆ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಯೋಜನೆ ನೈಸ್ ಸಂಸ್ಥೆಗಿದೆ. (ಒನ್ಇಂಡಿಯಾ ಕನ್ನಡ)

English summary
Imagine a 'village' with brand new concrete homes on well tarred roads, complete with vitrified tiles, spacious living room with sleek wooden entertainment cabinets, plush sofa sets, television, comfortable bedrooms, attached toilets with stainless steel fittings...Somapura is the first of the 143 villages enroute the BMIC that has been ‘rehabilitated’ by the Nandi Infrastructure Corridor Enterprise (NICE) Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X