ಬೇಸಿಗೆ ನೀರಿನ ಸಮಸ್ಯೆ ನಿವಾರಣೆಗೆ ರು.622 ಕೋಟಿ ಕ್ರಿಯಾಯೋಜನೆ ರೆಡಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 8: ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 622 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಬುಧವಾರ ಸದನಕ್ಕೆ ತಿಳಿಸಿದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಗೋವಿಂದ ಕಾರಜೋಳ ಅವರು ಎತ್ತಿದ ಕುಡಿಯುವ ನೀರಿನ ಸಮಸ್ಯೆ ಪ್ರಶ್ನೆ ಸದನದಲ್ಲಿ ಮಾರ್ದನಿಸಿತು. ಅರವಿಂದ ಬೆಲ್ಲದ್, ಸಿ.ಟಿ.ರವಿ ಸೇರಿದಂತೆ ಹಲವಾರು ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡರು. ಈ ವೇಳೆಯಲ್ಲಿ ಮಾತನಾಡಿದ ಎಚ್.ಕೆ. ಪಾಟೀಲ್. ಫೆಬ್ರವರಿ ತಿಂಗಳಿನಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರಲಿದ್ದು, ತುರ್ತು ಕುಡಿಯು ನೀರನ್ನು ಒದಗಿಲಸು ಎಲ್ಲಾ ಜಲಮೂಲಗಳನ್ನು ಗುರುತಿಸಲಾಗಿದೆ ಎಂದರು.[ಜಲಾಶಯಗಳು ಖಾಲಿ ಖಾಲಿ ಎದುರಾಗಲಿದೆ ನೀರಿನ ಸಮಸ್ಯೆ]

Solve the water problem in summer time Rs .622 crore Action plan is ready H.K.Patil

ನದಿ, ಜಲಾಶಯ, ಕಾಲುವೆ. ಕೆರೆ ನೀರನ್ನು ಉಪಯೋಗಿಸಿಕೊಂಡು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಿದ್ದಪಡಿಸಲಾಗಿದೆ. ಕೆಲವೆಡೆ ಕೊಳವೆ ಬಾವಿ, ಕೈ ಪಂಪುಗಲು ಮತ್ತು ಟ್ಯಾಂಕರ್ ಗಳ ಮೂಲಕ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಹಾಸನ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ವಿಜಯಪುರ, ದಾವಣಗೆರೆ ತಾಲೂಕುಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಶಾಸಕರ ಮುಂದಾಳತ್ವದಲ್ಲಿ ಟಾಸ್ಕ್ ಫೋರ್ಸ್ ಗಳಿಗೆ ಅನುದಾನ ನೀಡಿ ಮೊದಲ ಹಂತದಲ್ಲಿ 6,930 ಗ್ರಾಮಗಳನ್ನು ಗುರುತಿನಿ ನೀರು ಒದಗಿಸುವುದು. ಎರಡನೇ ಹಂತದಲ್ಲಿ 7,390 ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.[ತುಂಗಭದ್ರಾ ಡ್ಯಾಂನಿಂದ ಪಾವಗಡ ತಾಲೂಕಿಗೆ ನೀರು]

Solve the water problem in summer time Rs .622 crore Action plan is ready H.K.Patil

ಇನ್ನು ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋದರೆ ದುರಸ್ತಿ ಮಾಡಿಸಲು ತಾಲೂಕಿಗೆ ಒಂದರಂತೆ ಸಂಚಾರಿ ದುರಸ್ತೆ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಕೆಲವು ಕಡೆ ಶುದ್ಧ ಕುಡಿಯು ನಿಡಿನ ಘಟಕಗಳು ಕೆಟ್ಟು ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಬೇಸಿಗೆಯಲ್ಲಿ ನೀರು ಪೂರೈಸಲು ಇವುಗಳ ಪಾತ್ರ ಮುಖ್ಯ ಎಂದು ಪಾಟೀಲ್ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Solve the water problem in summer time Rs .622 crore Action plan is ready says Rural Development and Panchayat Raj Minister H.K.Patil in assembly.
Please Wait while comments are loading...