ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ ನೆರವು ಪಡೆವ ಮನೆಗಳಿಗೆ ಸೋಲಾರ್ ಕಡ್ಡಾಯ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಬಿಬಿಎಂಪಿಯಿಂದ ಮನೆಗಳ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯ ಪಡೆಯುವವರು ತಮ್ಮ ಮನೆಗೆ ಕಡ್ಡಾಯವಾಗಿ ಸೋಲಾರ್ ಅಳವಡಿಸಿಕೊಳ್ಳಬೇಕೆಂದು ಬಿಬಿಎಂಪಿ ತಿಳಿಸಿದೆ. ಒಂದು ವೇಳೆ ಸೋಲಾರ್ ಅಳವಡಿಸದಿದ್ದರೆ ಬಿಬಿಎಂಪಿ ಕಠಿಣ ಕ್ರಮ ಜರುಗಿಸಲಿದೆ.

ವಿದ್ಯುತ್ ಉಳಿತಾಯಕ್ಕೆ ಮುಂದಾಗಿರುವ ಬಿಬಿಎಂಪಿ ಈಗಾಗಲೇ 4 ಲಕ್ಷ ಹೈ ಮಾಸ್ಟ್ ಬೀದಿದೀಪಗಳನ್ನು ಎಲ್ಇಡಿ ದೀಪಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ. ಅದಕ್ಕಾಗಿ ಯೋಜನೆ ರೂಪಿಸಿ, ಟೆಂಡರ್ ಆಹ್ವಾನಿಸಲಾಗುತ್ತಿದೆ. ಅದರ ಜತೆಗೆ ಬಿಬಿಎಂಪಿ ಅನುದಾನದಲ್ಲಿ ಮನೆ ನಿರ್ಮಿಸುವರು ಕೂಡ ಸೋಲಾರ್ ಅಳವಡಿಕೆ ಮಾಡುವುದನ್ನು ಕಡ್ಡಾಗೊಳಿಸಲಾಗುತ್ತಿದೆ.

ಒಂಟಿ ಮನೆ ಯೋಜನೆ: ಪ್ರತಿ ವರ್ಷ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಮನೆ ನಿರ್ಮಿಸಿಕೊಳ್ಳಲು ಬಿಬಿಎಂಪಿ 4 ಲಕ್ಷ ರೂ ಅನುದಾನ ನೀಡುತ್ತದೆ. ಆಯಾ ವಾರ್ಡ್ ನ ಸದಸ್ಯರು ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಬೇಕು. ಈ ವರ್ಷದಿಂದ ಒಂಟಿ ಮನೆ ನಿರ್ಮಿಸುವವರು ಮನೆಯಲ್ಲಿ ವಿದ್ಯುತ್ ಸೌಲಭ್ಯಕ್ಕಾಗಿ ಅಓಲಾರ್ ಅಳವಡಿಕೆ ಮಾಡಿಕೊಳ್ಳಬೇಕಾಗುತ್ತದೆ.ಸೋಲಾರ್ ಅಳವಡಿಕೆಗಾಗಿ ಬಿಬಿಎಂಪಿಯಿಂದ ಹೆಚ್ಚುವರಿ 1 ಲಕ್ಷ ರೂ ಅನುದಾನ ನೀಡಲು ನಿರ್ಧರಿಸಿದೆ.

Solar power compulsory for BBMP grant Houses

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಪ್ರಸ್ತಾವನೆ ಸಲ್ಲಿಸಿದೆ. ಸೋಲಾರ್ ಶಕ್ತಿ ಬಳಕೆಗೆ ಉತ್ತೇಜನ ನೀಡುವ ಸಂಬಂಧ ಒಂಟಿ ಮನೆ ಅಡಿಯಲ್ಲಿ ನಿರ್ಮಾಣಗೊಳ್ಳುವ ಸೋಲಾರ್ ವ್ಯವಸ್ಥೆ ಅಳವಡಿಕೆಗೆ ಹೆಚ್ಚುವರಿ1 ಲಕ್ಷ ರೂ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ.

English summary
Solar power compulsory for BBMP grant houses. For this purpose BBMP will give extra 1 Lakh rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X