ಅ.29ಕ್ಕೆ ಸಾಫ್ಟ್ ವೇರ್ ಉದ್ಯೋಗಿ ವಿಶ್ವೇಶರ ಸಂಗೀತ ಸಂಕಲನ ಬಿಡುಗಡೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 26: ಕಾರ್ಪೋರೇಟ್ ಕ್ಷೇತ್ರದಲ್ಲಿದ್ದವರು ತಮ್ಮ ಹವ್ಯಾಸ, ಆಸಕ್ತಿಗಳನ್ನೆಲ್ಲ ಮೂಲೆಗೆ ಹಾಕಬೇಕು ಎಂಬ ಮಾತಿದೆ. ಆ ಕೆಲಸದ ಒತ್ತಡದಲ್ಲಿ ಇವಕ್ಕೆಲ್ಲ ಸಮಯ ನೀಡುವುದೂ ಅಸಾಧ್ಯವೇ. ಆದರೆ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ವಿಶ್ವೇಶ್ ಭಟ್ ಸಂಗೀತ, ನಟನೆ, ಕಾರ್ಟೋನ್ ಮುಂತಾಗಿ ವಿವಿಧ ಕಲಾಪ್ರಕಾರಗಳಲ್ಲಿ ಗುರುತಿಸಿಕೊಂಡು ಕನ್ನಡ ಕಲಾಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

ಸಂಗೀತವನ್ನೇ ಉಸಿರಾಡುತ್ತಿರುವ ಸಾಫ್ಟ್ ವೇರ್ ಉದ್ಯೋಗಿ ವಿಶ್ವೇಶ ಭಟ್

ಅಹ್ಮದಾಬಾದ್, ಕಾನ್ಪುರ, ಬೋಧಗಯಾ ಸೇರಿದಂತೆ ಹಲವೆಡೆಗಳಲ್ಲಿ ಲೇಸರ್ ಶೋ ನೀಡಿರುವ ವಿಶ್ವೇಶ್ ಭಟ್, ಇದೀಗ ದೇಶದಾದ್ಯಂತ ಅವರು ನೀಡಿದ ಸಂಗೀತ ಮತ್ತು ಬೆಳಕು ಪ್ರದರ್ಶನಗಳ ಸಂಕಲನದ ಸೀಡಿಯನ್ನು ಹೊರತರುತ್ತಿದ್ದಾರೆ.

Software employee Vishwasha Bhat's compilation of light and music shows releasing on Oct 29th

ಅಕ್ಟೋಬರ್ 29, ಭಾನುವಾರದಂದು ಬೆಂಗಳೂರಿನ ಬನ್ನೆರುಘಟ್ಟ ರಸ್ತೆಯ ಕೃಷ್ಣ ಆರ್ಕೆಡ್ ಬಳಿಯ ವಾತ್ಸಲ್ಯ ಡೆಂಟಲ್ ಇನ್ಕುಬೇಶನ್ ಸೆಂಟರ್ ನಲ್ಲಿ ಸಂಜೆ 5 ಗಂಟೆಗೆ ಈ ಸಂಕಲನ ಬಿಡುಗಡೆಯಾಗಲಿದೆ.

ಅಹ್ಮದಾಬಾದ್, ಕಾನ್ಪುರ, ಬೋಧಗಯಾ, ಬಿಹಾರ್, ಸೋಮನಾಥ್ ದೇವಾಲಯ ಗುಜರಾತ್, ಕದ್ರಿ ಪಾರ್ಕ್ ಮಂಗಳೂರಿನಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುವ, ಸಂಗೀತ ಕಾರಂಜಿ ಮತ್ತು ಲೇಸರ್ ಶೋಗಳ ಹಿಂದಿರುವ ರೂವಾರಿ ಉಡುಪಿ ಮೂಲದ ವಿಶ್ವೇಶ ಭಟ್!

Software employee Vishwasha Bhat's compilation of light and music shows releasing on Oct 29th

ಹಲವು ಕಿರುಚಿತ್ರ ಮತ್ತು ಜಾಹೀರಾತುಗಳಿಗೆ ಸಂಗೀತ ಸಂಯೋಜನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡದ ಹಲವು ಪ್ರತಿಷ್ಠಿತ ಪತ್ರಿಕೆಗಳಿಗೆ ವ್ಯಗ್ಯಚಿತ್ರಗಳನ್ನೂ ಬರೆದುಕೊಟ್ಟಿದ್ದಾರೆ. ಕನ್ನಡ ಸಂಗೀತ ಕ್ಷೇತ್ರಕ್ಕೆ ಹಲವು ಆಲ್ಬಂ ಗಳನ್ನೂ ನೀಡಿದ ಕೀರ್ತಿ ಇವರದು.

ಕರ್ನಾಟಕ್ ಮತ್ತು ಹಿಂದೂಸ್ತಾನಿ ಸಂಗೀತಗಳಲ್ಲಿ ಪರಿಣಿತಿ ಪಡೆದ ವಿಶ್ವೇಶ ಭಟ್ ಅವರ ಸಂಕಲನದ ಬಿಡುಗಡೆಗೆ ಎಲ್ಲ ಸಹೃದಯ ಸಂಗೀತ ಪ್ರೇಮಿಗಳಿಗೆ ಆಹ್ವಾನವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Software employee Vishwash Bhat from Udupi, resides in Bengaluru is coming up with the compilation of his compositions from various sound and light shows and musical fountains across India on Oct 29th at 5 PM in VATSALYA Dental Incubation center 3rd floor, Krishna arcade, above HDFC Bank, Hulimavu, Bannerghatta Road, Bangalore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ