ಪ್ರಕಾಶ್ ರೈ ವಿರುದ್ಧ ಇನ್ನೂ ನಿಂತಿಲ್ಲ ಟ್ರೋಲ್ ಸಮರ

Posted By:
Subscribe to Oneindia Kannada
   ಪ್ರಕಾಶ್ ವಿರುದ್ಧ ಟ್ರೊಲ್ ಸಮಾರಾ ಇನ್ನು ನಿಂತಿಲ್ಲ | Oneindia Kannada

   ಬೆಂಗಳೂರು, ನವೆಂಬರ್ 24: ಹೇಳಿ ಕೇಳಿ ಇದು ಟ್ರೋಲ್ ಕಾಲ. ಈ ಟ್ರೋಲ್ ಹೈಕ್ಳನ್ನ ಎದುರು ಹಾಕ್ಕೊಂಡ್ರೆ ಕೇಳ್ಬೇಕಾ? ತಮ್ಮ ವೈಯಕ್ತಿಕ ವಿಷಯಗಳನ್ನೆಲ್ಲ ಟ್ರೋಲ್ ಮಾಡಿದ್ದಾರೆಂದು ಆರೋಪಿಸಿ ನಟ ಪ್ರಕಾಶ್ ರೈ ಅವರು ನ.23 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಟ್ರೋಲ್ ಗೂಂಡಾಗಿರಿಯನ್ನು ಹತ್ತಿಕ್ಕೋ ಯತ್ನಕ್ಕೇನೋ ಕೈಹಾಕಿದ್ದರು.

   ಟ್ರೋಲ್ ಕಡಿವಾಣಕ್ಕೆ ಹೊರಟ ರೈ ವಿರುದ್ಧವೇ ಶುರುವಾಯ್ತು ಟ್ರೋಲ್!

   ಆದರೆ ಟ್ರೋಲ್ ಕಡಿವಾಣಕ್ಕೆ ಹೊರಟ ಅವರ ನಡೆಯೇ ಮತ್ತಷ್ಟು ಟ್ರೋಲ್ ಗೆ ಅವಕಾಶ ಮಾಡಿಕೊಟ್ಟ ಹಾಗಾಗಿದೆ. ನಿನ್ನೆ ಪತ್ರಿಕಾಗೋಷ್ಠಿ ಆರಂಭವಾಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾದ ಟ್ರೋಲ್ ಗಗಳು ಇಂದೂ ಮುಂದುವರಿದಿದೆ. ಅದೇನು ನಿಲ್ಲುವ ಹಾಗೂ ಕಾಣುತ್ತಿಲ್ಲ!

   ಟ್ರೋಲ್ ಗೂಂಡಾಗಿರಿ ವಿರುದ್ಧ ಸಿಡಿದೆದ್ದ ರೈ, ಸಿಂಹಗೆ ನೋಟಿಸ್

   ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಪ್ರಕಾಶ್ ರೈ ಅವರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಹಾಗೆ ವೆಬ್ ಸೈಟ್ ವೊಂದರಲ್ಲಿ ಬಂದಿದ್ದ ವ್ಯಂಗ್ಯ ಸುದ್ದಿಯನ್ನು ರೀಟ್ವೀಟ್ ಮಾಡಿದ್ದರು. ಆದ್ದರಿಂದ ಪ್ರತಾಪ್ ಸಿಂಹ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಟ್ರೋಲ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಪ್ರಕಾಶ್ ರೈ ನಿನ್ನೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಲ್ಲದೆ, ಈಗಾಗಲೇ ಅವರಿಗೆ ನೋಟಿಸ್ ಸಹ ಕಳಿಸಿದ್ದಾಗಿ ತಿಳಿಸಿದ್ದರು.

   ಪ್ರಕಾಶ್ ರೈ ಲೀಗಲ್ ನೋಟಿಸ್ ಗೆ ಉತ್ತರ ಕೊಟ್ಟ ಸಿಂಹ

   ಆದರೆ ಟ್ರೋಲ್ ಮಾಡುವವರ ವಿರುದ್ಧವೆಲ್ಲ ಲೀಗಲ್ ನೋಟೀಸ್ ಕಳಿಸೋದು ಸರಿನಾ ಎಂಬ ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಮಾಧ್ಯಗಳಲ್ಲಿ ಹೆಚ್ಚಿನ ಜನ ಪ್ರಕಾಶ್ ರೈ ಅವರನ್ನೇ ತಪ್ಪಿತಸ್ಥರನ್ನಾಗಿ ಮಾಡುತ್ತಿದ್ದಾರೆ.

   ರೈ ಎಷ್ಟು ಕನ್ನಡಾಭಿಮಾನಿ?

   ಈತ ಎಷ್ಟು ಕನ್ನಡ ಅಭಿಮಾನಿ ಅಂದ್ರೆ ಕಾವೇರಿ ನೀರಿನ ಬಗ್ಗೆ ಕೇಳಿದ್ರೆ ನಾನು ಕಲಾವಿದ ರಾಜಕೀಯ ವಿಷಯ ಕೇಳಬೇಡಿ ಎಂದು ಮೈಕು ಎಸೆದು ರಣಹೇಡಿಯಂತೆ ಓಡಿದ ವ್ಯಕ್ತಿ, ಈಗ ಇಡೀ ದೇಶದ ರಾಜಕೀಯ ಇವನ ತಲೆ ಮೇಲೆ ಕೂತಿರುವ ಹಾಗೆ ಮಾತನಾಡುತ್ತಾನ. ಯಾರ biscuit ತಿಂದು ಈ ಆಟ? ಎಂದು ಸ್ವದೇಶಿ ಪ್ರಶಾಂತ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ವಾಕ್ ಸ್ವಾತಂತ್ರ್ಯ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾ?

   ಹೌದು ಪ್ರಕಾಶ್ ರೈ, ನೀವು ಮೋದಿ, ಬಿಜೆಪಿ, ಆರ್ ಎಸ್ ಎಸ್ ಅನ್ನು ಬೈದರೆ ಪರವಾಗಿಲ್ಲ. ಆದರೆ ಜನರು ಈ ಬಗ್ಗೆ ನಿಮ್ಮ ವಿರುದ್ಧ ಕೇಸು ಹಾಕಿದರೆ ಆಗ ನಿಮಗೆ ವಾಕ್ ಸ್ವಾತಂತ್ರ್ಯದ ನೆನಪಾಗುತ್ತದೆ. ವಾಕ್ ಸ್ವಾತಂತ್ರ್ಯ ಅನ್ನೋದು ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾ ಎಂದು ಮೃತ್ಯಂಜಯ್ ಸಿಂಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ದಯವಿಟ್ಟು ಈ ಎಲ್ಲದರಿಂದ ದೂರವಿರಿ

   ಪ್ರಕಾಶ್, ಇದೆಲ್ಲದರಿಂದ ದೂರ ಇರೀ, ಕಾವೇರಿ ಬಗ್ಗೆ ಕೇಳಿದಾಗ ಹೇಳಿದ್ರಲ್ಲ ಆ ಥರಾ. ಇಲ್ಲಾಂದ್ರೆ ಇರುವ ಫಿಲಂ ಮಾರ್ಕೆಟ್ ಕೂಡ ಕಳ್ಕೊತೀರ. ನಿಮ್ಮಿಷ್ಟ ಕರಿಯರ್ ಬೇಕೋ ಅಥವಾ ಮಾತಾಡೋದು ಬೇಕು ಆರಿಸ್ಕೊಳ್ಳಿ ಎಂದು ಇಂಡಿಯನ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ಉದಾಸಿನವೇ ಮದ್ದು!

   ದಯವಿಟ್ಟು ಅವರನ್ನು ಉದಾಸೀನದಿಂದ ಕಾಣಿ. ಅವರ ಬಗ್ಗೆ ಟ್ವೀಟ್ ಮಾಡುತ್ತ ನೀವೇ ಅವರ ಮಹತ್ವವನ್ನು ಹೆಚ್ಚಿಸುತ್ತಿದ್ದೀರಿ. ಅವರು ಅದಕ್ಕೆ ಅರ್ಹರಲ್ಲ. ಅವರೊಬ್ಬರ ಉತ್ತಮ ನಟರಿರಬಹುದು. ಆದರೆ ಕಾಲಬದಲಾದಂತೆ ಅವರು ಬಹಳವೇ ಬದಲಾಗಿದ್ದಾರೆ ಎಂದು ಅನುಶಾ ಜೆ. ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   People are still trolling Prakash Raj for his statement against trolls in social media. He has addressed media in a press conference in Bengaluru Press club, and announced his decision to start a campaign called 'Just Asking' to controll Trolls on social media. And also blames Mysuru Kodagu MP Pratap Simha for speaking about Prakash Rai's personal life.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ