ಒಳ್ಳೆ ಕಾಮಿಡಿ ಕಣ್ರಿ; ರಾಹುಲ್ ಬಂದಿಲ್ವಂತೆ, ಅದ್ಕೆ ಕೈಗೆ ಜೈ ಅಂದ್ರಂತೆ

Posted By:
Subscribe to Oneindia Kannada

ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಬಿಜೆಪಿ ಸೋಲಿಗೆ ಏನು ಕಾರಣ ಎಂದು ಪಟ್ಟಿ ಮಾಡಲು ಮುಂದಾದರೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಒಳ್ಳೊಳ್ಳೆ ಕಾಮಿಡಿ ಪೋಸ್ಟ್ ಗಳು ಬರುತ್ತಲಿವೆ. ರಾಹುಲ್ ಗಾಂಧಿ ಬಂದಿದ್ರೆ ಬಿಜೆಪಿ ಗೆಲುವು ಎನ್ನುವುದು ಒಂದಾಗಿದೆ. ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ಆಡಳಿತರೂಢ ಕಾಂಗ್ರೆಸ್ ಪಕ್ಷದ ಪರ ಜನರ ಒಲಿವು ಮೂಡಿದ್ದು, ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ನಂಜನಗೂಡಿನಿಂದ ಕಳಲೆ ಕೇಶವಮೂರ್ತಿ ಹಾಗೂ ಗುಂಡ್ಲುಪೇಟೆಯಿಂದ ಚೊಚ್ಚಲ ಬಾರಿಗೆ ಡಾ. ಮೋಹನ್ ಕುಮಾರಿ ಅಲಿಯಾಸ್ ಗೀತಾ ಮಹದೇವ ಪ್ರಸಾದ್ ಅವರು ಜಯಭೇರಿ ಬಾರಿಸಿದ್ದಾರೆ. [ಉಪ ಚುನಾವಣೆ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?]

ಹೀಗೊಂದು ವಾಟ್ಸಪ್ ಸಂದೇಶ:

'ಸಿದ್ದರಾಮಯ್ಯ ಇರುವವರೆಗೂ ನಾನು ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಪತ್ರಕರ್ತರ ಮುಂದೆ ಶ್ರೀನಿವಾಸ್ ಪ್ರಸಾದ್ ಹೇಳಿದ್ದರು.

ಅವರ ಮಾತನ್ನು ಉಳಿಸುವುದಕ್ಕೋಸ್ಕರ ನಂಜನಗೂಡು ಮತದಾರರು ನೀವು ಅತ್ತ ಕಡೆ ತಲೆ ಹಾಕಿಯೂ ಮಲಗಬೇಡಿರಿ ಎಂದು ಮನೆಗೆ ಕಳುಹಿಸಿದರು. Laughing

ಮತ್ತೊಂದು ಹೀಗಿದೆ:


ದನದ ಕೊಟ್ಟಿಗೆಯಲ್ಲಿ ಸುರೇಶ್

ದನದ ಕೊಟ್ಟಿಗೆಯಲ್ಲಿ ಸುರೇಶ್

ದನದ ಕೊಟ್ಟಿಗೆಯಲ್ಲಿ ಸುರೇಶ್ ಕುಮಾರ್ ಅವರು ಗೋಮೂತ್ರೆ ಸೇವಿಸಲಿಲ್ಲವೇ? ಅವರನ್ನು ಮುಂದಿನ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ ಎಂದು ರಾಕೇಶ್ ಶೆಟ್ಟಿ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.

ದಿನೇಶ್ ಫುಲ್ ಖುಷ್

ಕೆ ಪಿ ಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರ್ಯಕರ್ತರೊಡನೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಒತ್ತಿದ್ದೆಲ್ಲ ಕಾಂಗ್ರೆಸಿಗೆ ವೋಟ್

ಇದೆಲ್ಲ ಇವಿಎಂ ತಂತ್ರ ಕಣ್ರಿ ಯಾವುದೇ ಬಟನ್ ಒತ್ತಿದರೂ ಕಾಂಗ್ರೆಸಿಗೆ ಮತ ಬೀಳುತ್ತಿತ್ತಂತೆ.. ಇವಿಎಂ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಹೀಗೊಂದು ಚುಚ್ಚು ನುಡಿ

ಕಾಂಗ್ರೆಸ್ ವಿಜಯೋತ್ಸವ

ಕರ್ನಾಟಕದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ, ವಿಜಯೋತ್ಸವ ಆಚರಿಸುತ್ತಿರುವ ಕಾಂಗ್ರೆಸ್ಸಿಗರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Social Media reacts to Congress victory By Poll Election Nanjangud, Gundlupet
Please Wait while comments are loading...