ಮರ ಕಡಿಯುವಾಗ ನಾಗರ ಹಾವು ಸಾವು, ಪೊಲೀಸರಿಗೆ ದೂರು!

Posted By:
Subscribe to Oneindia Kannada

ಬೆಂಗಳೂರು, ಜುಲೈ 28 : ಬೆಂಗಳೂರಿನ ಯಶವಂತಪುರದ ಸಮೀಪದ ಮುತ್ಯಾಲಮ್ಮ ದೇವಾಲಯದಲ್ಲಿ ಮರ ಕತ್ತರಿಸುವ ವೇಳೆ ನಾಗರಹಾವು ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದೆ. ಈ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೇವಾಲಯದ ಧರ್ಮದರ್ಶಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಮುತ್ಯಾಲಮ್ಮ ದೇವಾಲಯದ ವಾರ್ಷಿಕೋತ್ಸವಕ್ಕೆ ಯಂತ್ರದ ಸಹಾಯದಿಂದ ಆಲದ ಮರ ಕತ್ತರಿಸಲಾಗುತ್ತಿತ್ತು. ವೇಳೆ ಮರದಲ್ಲಿದ್ದ ದೈವ ಸ್ವರೂಪಿ ನಾಗರಹಾವು ಮೂರು ತುಂಡುಗಳಾಗಿದೆ. ದೇವಾಲಯದಲ್ಲೇ ಇದ್ದ ಹಾವು ಸಾವನ್ನಪ್ಪಿದ್ದರಿಂದ ಭಕ್ತರು ಆತಂಕಗೊಂಡಿದ್ದಾರೆ. [ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!]

Snake killed during chop down a tree, complaint filed

ಸ್ಥಳೀಯ ಅರಣ್ಯಾಧಿಕಾರಿಗಳಾದ ಶಿವರಾಮ ಎಂಬುವವರು ಜಾಲಹಳ್ಳಿ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ದೇವಾಲಯದ ಧರ್ಮದರ್ಶಿ ವಾಸುದೇವ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.

ದೇವಾಲಯದ ಧರ್ಮದರ್ಶಿ ವಾಸುದೇವ ಅವರು ಜೆ.ಪಿ.ಪಾರ್ಕ್ ವಾರ್ಡ್‌ ಬಿಬಿಎಂಪಿ ಸದಸ್ಯೆ (ಕಾಂಗ್ರೆಸ್)
ಮಮತಾ ಅವರ ಪತಿ. ವಾಸುದೇವ ಅವರು ಸ್ಥಳೀಯ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಮರ ಕಡಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. [30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್]

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಸುದೇವ ಅವರು, 'ಇದು ರಾಜಕೀಯ ಪ್ರೇರಿತವಾದ ವಿವಾದ. ಅರಣ್ಯ ಇಲಾಖೆಗೆ ನಾನು ಮರದ ರೆಂಬೆ ಕತ್ತರಿಸಲು ಮಾತ್ರ ಹೇಳಿದ್ದೆ' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಹಾವು ಸತ್ತ ವಿಚಾರ ಈಗ ಪೊಲೀಸ್ ಠಾಣೆಯಲ್ಲಿದೆ. [ಹಾವು ರಕ್ಷಿಸಲು ಹೋಗಿ ಅಪಘಾತ, ವೃದ್ಧ ದಂಪತಿ ಸಾವು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A snake residing in a temple was allegedly killed when workers tried to chop down a tree in order to build a temple. The incident was reported near Muthyalamma temple Yeshwantpur, Bengaluru.
Please Wait while comments are loading...