ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೂರುಗಳ ಸುರಿಮಳೆ: ಬಿಎಂಟಿಸಿ ಆ್ಯಪ್ ಮೇಲ್ದರ್ಜೆಗೇರಿಸಲು ಚಿಂತನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಪ್ರಯಾಣಿಕರಿಂದ ದೂರುಗಳ ಸುರಿಮಾಲೆಯನ್ನು ಎದುರಿಸಿದ ಬೆಂಗಳೂರು ಮಹನಗರ ಸಾರಿಗೆ ಸಂಸ್ಥೆಯು ಕೊನೆಗೂ ತನ್ನ ಮೊಬೈಲ್ ಅಪ್ಲಿಕೇಷನ್‌ ನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ.

ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ಗಳ ಸಂಚಾರ ಕುರಿತ ಆ ಕ್ಷಣದ ಮಾಹಿತಿಯನ್ನು ಅಪ್ಲಿಕೇಷನ್ ಮೂಲಕ ಹಂಚಿಕೆ ಮಾಡುವ ಉದ್ದೇಶ ಹೊಂದಿರುವ ಸಾಫ್ಟ್ ವೇರ್ ತೀರ ಕೆಳದರ್ಜೆಯಲ್ಲಿದೆ ಎನ್ನವು ದೂರಿನ ಹಿನ್ನೆಲೆಯಲ್ಲಿ ಬಿಎಂಟಿಸಿ ಈ ಕ್ರಮಕ್ಕೆ ಮುಂದಾಗಿದೆ.

ಬಿಎಂಟಿಸಿಗಿಂತ ಆ್ಯಪ್ ಸೇವೆ ನಿಧಾನಗತಿ: ಪ್ರಯಾಣಿಕರಿಗೆ ತೊಂದರೆ ಬಿಎಂಟಿಸಿಗಿಂತ ಆ್ಯಪ್ ಸೇವೆ ನಿಧಾನಗತಿ: ಪ್ರಯಾಣಿಕರಿಗೆ ತೊಂದರೆ

2016ರಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ ಬಿಎಂಟಿಸಿಯ ಅಪ್ಲಿಕೇಷನ್ ನಿಂದ ಗ್ರಾಹಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು.

Snags prompt BMTC to revamp app

ಸುಮಾರು 6400 ಕ್ಕೂ ಹೆಚ್ಚು ಬಸ್ ಗಳ ಸಂಚಾರದ ಮಾಹಿತಿಯನ್ನು ಪ್ರಯಾಣಿಕರಿಗೆ ಹಂಚಿಕೆ ಮಾಡಬೇಕಿದ್ದ ಈ ಸಾಫ್ಟ್‌ವೇರ್ ನಲ್ಲಿ ತಾಂತ್ರಿಕ ಕಾರಣಗಳಿಂದ ಬಸ್ ಗಳ ಚಲನ ವಲನಗಳ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿರುವ ಬಳಿಕ ಅಪ್ಲಿಕೇಷನ್ ಮೇಲ್ದರ್ಜೆಗೇರಿಸಲು ಮುಂದಾಗಿದೆ.

ಪ್ರಯಾಣಿಕರಿಗೆ ಬಸ್‌ಗಳ ಸಂಚಾರದ ನಿಖರ ಮಾಹಿತಿ ನೀಡುವ ಸಲುವಾಗಿ ಬಿಎಂಟಿಸಿ ಎರಡು ವರ್ಷಗಳ ಹಿಂದೆ ಬಳಕೆಗೆ ನೀಡಿದ್ದ ಆ್ಯಪ್ ತಾಂತ್ರಿಕ ಕಾರಣಗಳಿಂದ ಸದ್ಬಳಕೆ ಆಗುತ್ತಿಲ್ಲವಾದ್ದರಿಂದ ಬಿಎಂಟಿಸಿ ಯೋಜನೆ ವಿಲವಾಗಿದೆ. ಬಿಎಂಟಿಸಿ ಬಳಕೆಗೆ ನೀಡಿರುವ ಆ್ಯಪ್ ತುಂಬಾ ನಿಧಾನಗತಿಯಲ್ಲಿ ಮಾಹಿತಿ ನೀಡುತ್ತದೆ.

ಇಷ್ಟೆಲ್ಲದರ ನಡುವೆಯೂ ಬಿಎಂಟಿಸಿ 6,440 ಬಸ್‌ಗಳಿಗೆ ಜಿಪಿಎಸ್ ಉಪಕರಣ ಅಳವಡಿಸಿ, ಪ್ರಯಾಣಿಕರಿಗೆ ಓಪನ್ ಟ್ರಾನ್ಸಿಟ್ ಡೇಟಾ ಮೂಲಕ ರಿಯಲ್ ಟೈಮ್ ಮಾಹಿತಿ ನೀಡುವುದಾಗಿ ಹೇಳುತ್ತಿದೆ. ಓಪನ್ ಟ್ರಾನ್ಸಿಟ್ ಡೇಟಾ ಪದ್ಧತಿ ಲಂಡನ್‌ನಂತಹ ವಿದೇಶದ ನಗರಗಳಲ್ಲಿ ಬಳಕೆಯಲ್ಲಿದ್ದು, ಬಿಎಂಟಿಸಿ ಕೂಡ ಇದೇ ಮಾದರಿಯ ಸೇವೆಯ ಉದ್ದೇಶದಿಂದ ಓಪನ್ ಟ್ರಾನ್ಸಿಟ್ ಡೇಟಾ ಒದಗಿಸುವ ಆ್ಯಪ್ ಬಿಡುಗಡೆ ಮಾಡಿತ್ತು.

ಟ್ರಾಫಿ, ಯೊರೈಡ್ ಹಾಗೂ ಐ-ಕಮ್ಯೂಟ್‌ನಂತಹ ಸ್ಟಾರ್ಟಪ್ ಕಂಪನಿಗಳು ರಿಯಲ್ ಟೈಮ್ ಜರ್ನಿ ಬಗೆಗೆ ಮಾಹಿತಿ ವಿನಿಯಮ ಮಾಡಿಕೊಳ್ಳುವ ಸ್‌ಟಾವೇರ್ ಅಭಿವೃದ್ಧಿಪಡಿಸುತ್ತಿದ್ದು, ಬಿಎಂಟಿಸಿ ಓಪನ್ ಟ್ರಾನ್ಸಿಟ್ ಡೇಟಾ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿವೆ.

English summary
Flooded with complaints of technical glitches from passengers, the Bangalore Metropolitan Transport Corporation (BMTC) has decided to upgrade its mobile application. The app, commuters say, isn’t helpful in tracking buses real time and lacks several features that are provided by cab aggregators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X