ಮೆಟ್ರೋ ಸುರಂಗ ಮಾರ್ಗದಲ್ಲಿ ಕಾಣಿಸಿಕೊಂಡ ಹೊಗೆ

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್ 27: ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಮೆಟ್ರೋ ಸುರಂಗ ಮಾರ್ಗದಲ್ಲಿ ಹೊಗೆ ಕಾಣಿಸಿಕೊಂಡಿದ್ದು ಸಂಚಾರ ಬಂದ್ ಮಾಡಲಾಗಿದೆ. ವಿಧಾನ ಸೌಧ ಮತ್ತು ಕಬ್ಬನ್ ಪಾರ್ಕ್ ನಡುವಿನ ಮಾರ್ಗದಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಬಿಎಂಆರ್ ಸಿ ಎಲ್ ನ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಪರೀಶಿಲನೆ ನಡೆಸುತ್ತಿದ್ದಾರೆ. ಶನಿವಾರ ಬೆಳಗ್ಗೆ ಕಾಣಿಸಿಕೊಂಡ ಹೊಗೆ ಕೆಲ ಕಾಲ ಸಿಬ್ಬಂದಿ ಮತ್ತು ನಾಗರಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು.[ಮಹಿಳೆಯರು, ಹಿರಿಯ ನಾಗರಿಕರ ನೆರವಿಗೆ ನಿಂತ ನಮ್ಮ ಮೆಟ್ರೋ]

metro

Must Read : ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ

ಭೂಕುಸಿತ ಉಂಟಾಗಿತ್ತು:
ಆಗಸ್ಟ್ 20 ರಂದು ಬೆಂಗಳೂರಿನ ಕೆಜಿ ರಸ್ತೆ ಬಳಿ ಭೂಕುಸಿತ ಉಂಟಾಗಿದೆ. ಕೆಜಿ ರಸ್ತೆಯ ಅಡಿಗಾಸ್ ಹೋಟೆಲ್ ಬಳಿ 10 ಅಡಿ ಆಳಕ್ಕೆ ಭೂಮಿ ಕುಸಿದಿತ್ತು. ಮೆಟ್ರೋ ಸುರಂಗ ಮಾರ್ಗ ಹಾದುಹೋದ ಸಮೀಪವೇ ಭೂಕುಸಿತ ಉಂಟಾಗಿತ್ತು. ತಕ್ಷಣ ಕಾರ್ಯನಿರತರಾದ ಅಧಿಕಾರಿಗಳು ಭೂ ಕುಸಿತವಾದ ಜಾಗವನ್ನು ಕಾಂಕ್ರಿಟ್ ಬಳಸಿ ತುಂಬಿದ್ದರು.[ನಮ್ಮ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Smoke appears at Namma Metro tunnel, Bengaluru between Cubbon Park and Vidhana Soudha station on August 27, Saturday morning 11.30.
Please Wait while comments are loading...