ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ರೈಲು ಏಕಮುಖ ಸಂಚಾರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ.

ನವೆಂಬರ್ ಕೊನೆಯ ವಾರದಲ್ಲಿ 6 ಬೋಗಿಗಳ ಮೂರನೇ ರೈಲು ಸಂಚಾರ ನವೆಂಬರ್ ಕೊನೆಯ ವಾರದಲ್ಲಿ 6 ಬೋಗಿಗಳ ಮೂರನೇ ರೈಲು ಸಂಚಾರ

ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ ಬಳಿ ಬಿರುಕು ಬಿಟ್ಟಿದೆ. ಆದರೆ ಪಿಲ್ಲರ್ ಬಿರುಕು ಬಿಟ್ಟಿಲ್ಲ, ಕಾಂಕ್ರೀಟ್ ಕಾಂಕ್ರೀಟ್ ಭೀಮ್‌ನಲ್ಲಿ ಹನಿ ಕೋಂಬ್ ಸಮಸ್ಯೆ ಉಂಟಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Small break in namma metro pillar in bengaluru

ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್ ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರಗಿದೆ. ಹೀಗಾಗಿ ಸದ್ಯ ಅದಕ್ಕೆ ಕಬ್ಬಿಣದ ಸ್ಲೈಡರ್ ಸಪೋರ್ಟ್ ಕೊಡಲಾಗಿದೆ. ಈಗಾಘಲೇ ಹಲವು ಬಾರಿ ಮೆಟ್ರೋ ಹಾಗೂ ಮೆಟ್ರೋ ಹಳಿಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು, ಇದೆಲ್ಲಾ ಸಾಮಾನ್ಯ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಆದರೆ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿದೆ.

ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ

ಪ್ರತಿನಿತ್ಯ ಸಾವಿರಾರು ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಅಲ್ಲದೇ ಪಿಲ್ಲರ್ ಕೆಳಗಡೆಯೂ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಹೀಗಾಗಿ ಆತಂಕ ಉಂಟಾಗಿದ್ದು, ಯಾವುದೇ ರೀತಿಯ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ಬಿಎಂಆರ್ ಸಿ ಎಲ್ ನವರು ತಿಳಿಸಿದ್ದಾರೆ.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

ಮೆಟ್ರೋ ಸಂಚರಿಸಲು ಎತ್ತರಿಸಿದಂತಹ ಮಾರ್ಗದಲ್ಲಿ ಕೊರತೆ ಕಂಡುಬಂದಿದೆ. ಸ್ಲೈಡರ್ ಸರಿದಿದ್ದು, ಜಾಯಿಂಟ್ ಮಾಡಲು ಬಳಸಿದ ಕಬ್ಬಿಣದ ತುಂಡುಗಳು ಕಳಚಿಕೊಂಡಿವೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಎಂಜಿನಿಯರ್ ಗಳು ತಪಾಸಣೆ ನಡೆಸುತ್ತಿದ್ದಾರೆ.

English summary
Small breaks Found in Namma metro pillar in bengaluru, so many trains are interrupted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X