ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಾಜಿನಗರ ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕ ಸೇತುವೆ

By Nayana
|
Google Oneindia Kannada News

ಬೆಂಗಳೂರು, ಮೇ 24: ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಬಿಎಂಪಿಯು ಶಿವಾಜಿನಗರ ಮೆಟ್ರೋ ನಿಲ್ದಾಣದಿಂದ ಸಮೀಪದ ರಸೆಲ್ ಮಾರುಕಟ್ಟೆ ಮತ್ತು ಬಸ್ ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಸ್ಕೈವಾಕ್ ನಿರ್ಮಿಸಲು ಯೋಜನೆ ರೂಪಿಸಿದೆ.

ಗೊಟ್ಟಿಗೆರೆ-ನಾಗವಾರ ಮೆಟ್ರೋ ಮಾರ್ಗದಲ್ಲಿ ಸಿವಾಜಿನಗರ ಬಳಿ ಸುರಂಗ ನಿಲ್ದಾಣ ನಿರ್ಮಾಣವಾಗಲಿದೆ. ಮೆಟ್ರೋ ರೈಲುಗಳಲ್ಲಿ ಬರುವ ಪ್ರಯಾಣಿಕರು ನೇರವಾಗಿ ಬಸ್ ನಿಲ್ದಾಣ ಮತ್ತು ರಸೆಲ್ ಮಾರುಕಟ್ಟೆಗೆ ತೆರಳಲು ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸಲು ಪಾಲಿಕೆ ಉದ್ದೇಶಿಸಿದೆ.

ಕೆಇಆರ್‌ಸಿಯ ರಿಯಾಯಿತಿ ವಿದ್ಯುತ್ ನಿರ್ಣಯದಿಂದ ಮೆಟ್ರೋ ನಿರಾಳಕೆಇಆರ್‌ಸಿಯ ರಿಯಾಯಿತಿ ವಿದ್ಯುತ್ ನಿರ್ಣಯದಿಂದ ಮೆಟ್ರೋ ನಿರಾಳ

ಈ ಸ್ಕೈವಾಕ್‌ನಲ್ಲೂ ವ್ಯಾಪಾರಕ್ಕೆ ಅನುವು ಮಾಡಿಕೊಡಲು ಚಿಂತನೆ ನಡೆಸಲಾಗಿದೆ. ಇದರಿಂದ ಪ್ರಯಾಣಿಕರು ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಅಲ್ಲದೇ ಸುತ್ತಮುತ್ತಲ ರಸ್ತೆಗಳಲ್ಲಿ ಪಾದಚಾರಿಗಳ ಓಡಾಟದಿಂದಾಗುವ ಸಂಚಾರ ದಟ್ಟಣೆಯೂ ತಪ್ಪಲಿದೆ.

Sky walk connectivity between Shivajinagar metro and Russell market

ಸ್ಕೈವಾಕ್ ವಿನ್ಯಾಸವನ್ನೂ ರೂಪಿಸಲಾಗಿದೆ, ಯುರೋಪ್ ರಾಷ್ಟ್ರಗಳಲ್ಲಿ ಇಂಥ ಸ್ಕೈವಾಕ್ ನಿರ್ಮಿಸಲಾಗಿದೆ. ಹಾಗೆಯೇ ಕಲಾಸಿಪಾಳ್ಯದಲ್ಲಿ ನಿರ್ಮಿಸುತ್ತಿರುವ ಬಿಎಂಟಿಸಿಯ ನಿಲ್ದಾಣದಿಂದ ಮೂರನೇ ಮಹಡಿಯಿಂದ ನೇರವಾಗಿ ಮೆಟ್ರೋಗೆ ಸಂಪರ್ಕ ಕಲ್ಪಿಸುವ ಸ್ಕೈವಾಕ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಬಿ.ಎಂ. ವಿಜಯಶಂಕರ್ ತಿಳಿಸಿದ್ದಾರೆ.

English summary
BBMP is planning to construct sky walk bridge between Shivajinagar metro station and Russell market with shopping facility in the proposed sky walk. So that the structure of the sky walk will be moderated, BBMP officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X