ಮಿಸೆಸ್ ಇಂಡಿಯಾ 2017ಗೆ ಕರ್ನಾಟಕದ 6 ಜನ ಸುಂದರಿಯರು

Posted By: Ramesh
Subscribe to Oneindia Kannada

ಬೆಂಗಳೂರು, ಜನವರಿ 23 : ಬ್ರಿಗೇಡ್ ಗೇಟ್ ವೇಯ ಒರಾಯನ್ ಮಾಲ್ ನಲ್ಲಿ ಯೋಜಿಸಲಾಗಿದ್ದ ಮಿಸೆಸ್ ಇಂಡಿಯಾ ಕರ್ನಾಟಕ 2017'ರ ಸ್ಪರ್ಧೆಗೆ ಕರ್ನಾಟಕದ ಆರು ಜನ ಸುಂದರಿಯರು ಆಯ್ಕೆಯಾಗಿದ್ದಾರೆ.

ಮಿಸೆಸ್ ಇಂಡಿಯಾ ಕರ್ನಾಟಕ 2017ರ ಪ್ರತಿ ಮೂವರು ವಿಜೇತರು ಮತ್ತು ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2017ರ ವಿಜೇತರು ಮಿಸೆಸ್ ಇಂಡಿಯಾ 2017ರಲ್ಲಿ ಸ್ಪರ್ಧಿಸಲಿದ್ದಾರೆ.

ವಿವಾಹಿತರಾಗಿದ್ದೂ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಬಯಕೆಯುಳ್ಳ ಗೃಹಿಣಿಯರಿಗಾಗಿ 'ಮಿಸೆಸ್ ಇಂಡಿಯಾ-ಕರ್ನಾಟಕ-2017' ಸೌಂದರ್ಯ ಸ್ಪರ್ಧೆಯ ಆಡಿಷನ್ ಆಯೋಜಿಸಲಾಗಿತ್ತು.

ಸ್ಪರ್ಧೆಯ ಫೈನಲ್ಸ್ ಬರೀ ಕ್ಯಾಟ್ ವಾಕ್ ಗೆ ಸೀಮಿತವಾಗಿಲ್ಲದೆ ಈಸಿ ಲೆಝ್ ಡ್ಯಾನ್ಸ್ ಟ್ರೂಪ್, ಡಿ-ನಾಟ್ ತಂಡ ಮತ್ತು ಕ್ರಿಯೇಟಿವ್ ಡ್ಯಾನ್ಸ್ ತಂಡಗಳ ನೃತ್ಯ ಪ್ರೇಕ್ಷಕರನ್ನು ರಂಜಿಸಿತು.

ವಿವಾಹಿತ ಸ್ತ್ರೀಯರಿಗೆ ತಮ್ಮ ಸೌಂದರ್ಯ, ಪ್ರತಿಭೆ, ಗ್ಲಾಮರ್ ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿತ್ತು. ಈ 'ಮಿಸೆಸ್ ಇಂಡಿಯಾ-ಕರ್ನಾಟಕ 2017'ಸ್ಪರ್ಧೆಯನ್ನು ಒರಾಯನ್ ಮಾಲ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು 22ರಿಂದ 40, 40ರಿಂದ 60 ಮತ್ತು 60ಪ್ಲಸ್ ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆಗಳಿದ್ದವು. ಈ ಎಲ್ಲಾ ವಿಭಾಗಗಳಲ್ಲಿ ವಿಜೇತರ ಪೊಟ್ಟಿ ಇಲ್ಲಿದೆ.

ಈ ಶೀರ್ಷಿಕೆ ಅಡಿಯಲ್ಲಿ ನಡೆದ ಸ್ಪರ್ಧೆಗಳು

ಈ ಶೀರ್ಷಿಕೆ ಅಡಿಯಲ್ಲಿ ನಡೆದ ಸ್ಪರ್ಧೆಗಳು

ಮಿಸೆಸ್ ಹೆಲ್ದಿ, ಬೆಸ್ಟ್ ಐಸ್, ಬೆಸ್ಟ್ ಸ್ಮೈಲ್, ಬೆಸ್ಟ್ ಸ್ಕಿನ್, ಮಿಸೆಸ್ ಪರ್ಸನಾಲಿಟಿ, ಮಿಸೆಸ್ ಗ್ಲಾಮರ್, ಬೆಸ್ಟ್ ಹೇರ್, ಮಿಸೆಸ್ ಇಂಟಲೆಕ್ಚುಯಲ್, ಮಿಸೆಸ್ ಫೋಟೊಜೆನಿಕ್, ಮಿಸೆಸ್ ದಿವಾ, ಬೆಸ್ಟ್ ವಾಕ್, ಮಿಸೆಸ್ ಇನ್ನರ್ ಬ್ಯೂಟಿ ಎಂದು ಹೆಸರುಗಳನ್ನು ನೀಡಲಾಯಿತು.

22-40 ವರ್ಷದ ವಿಭಾಗದ ಗ್ರಾಂಡ್ ಫೈನಲಿಸ್ಟ್

22-40 ವರ್ಷದ ವಿಭಾಗದ ಗ್ರಾಂಡ್ ಫೈನಲಿಸ್ಟ್

ಮಿಸೆಸ್ ಇಂಡಿಯಾ ಕರ್ನಾಟಕ 2017-ಡಾ.ಶೃತಿ ಗೌಡ
ಮಿಸೆಸ್ ಇಂಡಿಯಾ ಕರ್ನಾಟಕ ಮೊದಲ ರನ್ನರ್ ಅಪ್- ತೃಪ್ತಿ ಅರವಿಂದ್
ಮಿಸೆಸ್ ಇಂಡಿಯಾ ಕರ್ನಾಟಕ 2ನೇ ರನ್ನರ್ ಅಪ್- ಸ್ನೇಹಾ ನಾಗ್ಪಾಲ್

40-60ವರ್ಷದ ವಿಭಾಗದ ಗ್ರಾಂಡ್ ಫೈನಲಿಸ್ಟ್

40-60ವರ್ಷದ ವಿಭಾಗದ ಗ್ರಾಂಡ್ ಫೈನಲಿಸ್ಟ್

ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2017-ಅರುಣಾ ಸಿಂಗ್
ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಮೊದಲ ರನ್ನರ್ ಅಪ್- ಮನಿಶಾ ಭಟ್
ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2ನೇ ರನ್ನರ್ ಅಪ್- ಸ್ನಿಗ್ಧಾ

60ಕ್ಕಿಂತ ಮೇಲ್ಪಟ್ಟವರ ವಿಭಾಗ

60ಕ್ಕಿಂತ ಮೇಲ್ಪಟ್ಟವರ ವಿಭಾಗ

ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2017- ಪ್ರಮೀಳಾ ಪ್ರಕಾಶ್
ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಮೊದಲ ರನ್ನರ್ ಅಪ್- ಶ್ರದ್ಧಾ ಗುಪ್ತಾ

ಬೆಸ್ಟ್ ಶೀರ್ಷಿಕೆ ವಿಜೇತರು

ಬೆಸ್ಟ್ ಶೀರ್ಷಿಕೆ ವಿಜೇತರು

ಫೋಟೋಜೆನಿಕ್-ಸ್ನೇಹಾ ನಾಗ್ಪಾಲ್, ದಿವಾ-ನಿವೇದಿತಾ ಮುತಾಲಿಕ್, ಗ್ಲಾಮರಸ್-ಡಾ.ಶೃತಿ ಗೌಡ, ಇನ್ಸ್ಪಿರೇಷನಲ್-ಅರುಣಾ ಸಿಂಗ್, ಬೆಸ್ಟ್ ವಾಕ್-ವೀಣಾ ಸಿಂಗ್, ಬೆಸ್ಟ್ ಸ್ಮೈಲ್-ಪಲ್ಲವಿ ಉತ್ಕಷರ್, ಇನ್ನರ್ ಬ್ಯೂಟಿ-ತೃಪ್ತಿ ಅರವಿಂದ್, ಬ್ಯೂಟಿಫುಲ್ ಐಸ್-ಚೈತ್ರಾ ರಾವ್, ಇಂಟೆಲೆಕ್ಚುಯಲ್-ಪ್ರೀತಿ ಶ್ರೀನಿವಾಸ್.

 ಮತ್ತಷ್ಟು ಶೀರ್ಷಿಕೆ ವಿಜೇತರು

ಮತ್ತಷ್ಟು ಶೀರ್ಷಿಕೆ ವಿಜೇತರು

ಬೆಸ್ಟ್ ಪರ್ಫಾಮರ್-ನಂದಿನಿ ವಿನೋದ್, ಟ್ಯಾಲೆಂಟ್ ಕ್ವೀನ್- ಪವಿತ್ರಾ ಗಿಲ್ಬಟರ್, ಫಿಟ್ನೆಸ್ ಕ್ವೀನ್- ಮನಿಶಾ ಭಟ್, ಕಂಜೆನಿಯಾಲಿಟಿ-ದೀಪಾ ವೆಂಕಟೇಶ್, ಕ್ರಿಯೇಟಿವ್ ಕ್ವೀನ್-ಸೀಮಾ ಅಲಂ, ಬ್ಯೂಟಿಫುಲ್ ಹೇರ್-ರೆಬೆಕಾ ಸಿಂಗ್, ವಿವೇಷಿಯಸ್-ಸ್ನಿಗ್ಧಾ, ಎಂಟರ್ಟೈನ್ಮೆಂಟ್-ಇಂದ್ರಾಣಿ ಮೇಧಿ, ಬಾಡಿ ಬ್ಯೂಟಿಫುಲ್
ಗ್ಲೋಯಿಂಗ್ ಸ್ಕಿನ್-ಧೃತಿ ಸಂತೋಷ್

ಸ್ಪರ್ಧಿಗಳಿಂದ ಅಭಿನಂದನೆ ಮಾತುಗಳು

ಸ್ಪರ್ಧಿಗಳಿಂದ ಅಭಿನಂದನೆ ಮಾತುಗಳು

ಸಮಾಜದ ವಿವಿಧ ವಲಯಗಳ ಮಹಿಳೆಯರು ತಮ್ಮ ಬಹುಮುಖತೆ ಮತ್ತು ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು. ವಿವಾಹಿತ ಮಹಿಳೆಯರಿಗೆ ವಿಶ್ವದಲ್ಲಿ ಭಿನ್ನತೆ ಸಾಧಿಸಲು ಅವಕಾಶ ನೀಡಿದ್ದಕ್ಕಾಗಿ ಅವರು ಈ ಕಾರ್ಯಕ್ರಮದ ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Six women from Karnataka qualify for Mrs India 2017. Mrs India Karnataka 2017 held in Orion Mall Bengaluru. Hundreds of contestants from different parts of the state had participated in the event that was dedicated to honour the married women.
Please Wait while comments are loading...