ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಂತ್ರಿಕ ಸಮಸ್ಯೆಯಿಂದ ಆರು ಬೋಗಿ ಮೆಟ್ರೋ ಸಂಚಾರ ರದ್ದು

By Nayana
|
Google Oneindia Kannada News

ಬೆಂಗಳೂರು, ಜು.9: ತಾಂತ್ರಿಕ ಸಮಸ್ಯೆಯಿಂದಾಗಿ ಆರು ಬೋಗಿಯ ನಮ್ಮ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿದೆ. ಸಂಜೆ ವೇಳೆಗೆ ಸಮಸ್ಯೆ ಬಗೆಹರಿಸುವುದಾಗಿ ಬಿಎಂಆರ್‌ಸಿಲ್‌ ತಿಳಿಸಿದೆ.

ಆರು ಬೋಗಿಯ ಮೆಟ್ರೋ ಸಂಚಾರ ಸ್ಥಗಿತಗೊಂಡಿರುವ ಕಾರಣ ನಾಯಂಡಹಳ್ಳಿ- ಬೈಯಪ್ಪನಹಳ್ಳಿ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ದಟ್ಟಣೆ ನಿರ್ವಹಣೆಗಾಗಿ 3.5 ನಿಮಿಷಕ್ಕೊಂದು ರೈಲು ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈಗ ಆರು ಗಂಟೆ ನಂತರ ಆರು ಬೋಗಿ ಮೆಟ್ರೋ ಸಂಚರಿಸಬಹುದು ಎಂದು ಹೇಳಿದೆ.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

ಆರು ಬೋಗಿಯ ಮೆಟ್ರೋ ರೈಲು ನೇರಳೆ ಮಾರ್ಗದಲ್ಲಿ ಈಗಾಗಲೇ ಸಂಚಾರ ಆರಂಭಿಸಿದೆ. ಕೇವಲ ಪೀಕ್‌ ಅವಧಿಯಲ್ಲಿ ಮಾತ್ರ ಮೆಟ್ರೋ ಸಂಚಾರ ಮಾಡುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿತ್ತು. ಆದರೆ ಇದೀಗ ಪ್ರಯಾಣಿಕರಿಂದ ಭಾರಿ ಬೇಡಿಕೆ ಕೇಳಿಬಂದಿರುವುದರಿಂದ ರೈಲು ಸೇವೆಯನ್ನು ಒಂದು ಗಂಟೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.

Six coach metro service cancelled due to technical error

ಮೈಸೂರು ರಸ್ತೆ ನಿಲ್ದಾಣದಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರಿಗೆ ಆರು ಬೋಗಿ ಮೆಟ್ರೋ ಸೇವೆ ದೊರೆಯುತ್ತಿರಲಿಲ್ಲ. ಸಂಜೆ 5 ಗಂಟೆ ಬಳಿಕ ಮಾತ್ರ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಪೂರ್ಣ ಮಾರ್ಗದಲ್ಲಿ ಸಂಚಾರ ನಡೆಸಲಾಗುತ್ತಿತ್ತು. ಈಗ ವೇಳಾಪಟ್ಟಿ ಬದಲಿಸಿರುವ ನಿಗಮ, ಬೆಳಗ್ಗೆ ಎರಡು ಟ್ರಿಪ್‌ ನಡೆಸಲು ತೀರ್ಮಾನಿಸಿದೆ.

English summary
Due to technical issues six coach of metro service was cancelled on Monday. To clear passengers rush, BMRCL increased in regular metro service frequency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X