ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂದಿನಂತೆ ಆರು ಬೋಗಿ ಮೆಟ್ರೋ ಸಂಚಾರ ಆರಂಭ

By Nayana
|
Google Oneindia Kannada News

ಬೆಂಗಳೂರು, ಜು.10: ತಾಂತ್ರಿಕ ದೋಷದಿಂದಾಗಿ ಸೋಮವಾರ ಬೆಳಗ್ಗೆ ಆರು ಬೋಗಿಯ ಮೆಟ್ರೋ ಸಂಚಾರ ಸ್ಥಗತಿಗೊಂಡಿತ್ತು, ಮಂಗಳವಾರ ಎಂದಿನಂತೆ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಆರುಬೋಗಿ ಮೆಟ್ರೋ ಸಂಚಾರ ಆರಂಭಿಸಿ ಒಂದು ತಿಂಗಳು ಕಳೆಯುವುದರೊಳಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸೋಮವಾರ ಬೆಳಗ್ಗೆ ವೇಳಾಪಟ್ಟಿಯಲ್ಲಿರುವಂತೆ 8 ಗಂಟೆಯಿಂದ 12 ಗಂಟೆಯವರೆಗೆ ಆರು ಬೋಗಿ ಮೆಟ್ರೋದ ಕಾರ್ಯಾಚರಣೆ ನಡೆಯಬೇಕಿತ್ತು. ಆದರೆ ರೈಲು ಡಿಪೊದಿಂದ ಹೊರಡುವಾಗಲೇ ದೋಷ ಕಾಣಿಸಿಕೊಂಡಿತು.

ತಾಂತ್ರಿಕ ಸಮಸ್ಯೆಯಿಂದ ಆರು ಬೋಗಿ ಮೆಟ್ರೋ ಸಂಚಾರ ರದ್ದು ತಾಂತ್ರಿಕ ಸಮಸ್ಯೆಯಿಂದ ಆರು ಬೋಗಿ ಮೆಟ್ರೋ ಸಂಚಾರ ರದ್ದು

ಸಮಯ ಇದ್ದಿದ್ದರಿಂದ ದೋಷ ಸರಿಪಡಿಸಲು ಪ್ರಯತ್ನಿಸಲಾಯಿತು. ಆದರೂ ರೈಲಿನ ಯಂತ್ರಗಳಲ್ಲಿ ದೊಡ್ಡ ಮಟ್ಟದ ಸಮಸ್ಯೆ ಹಾಗೂ ಸಿಗ್ನಲಿಂಗ್‌ ಸಮಸ್ಯೆ ಕೂಡ ಕಾಣಿಸಿಕೊಂಡಿದ್ದರಿಂದ ದುರಸ್ತಿ ಮಾಡಲು ಹೆಚ್ಚು ಕಾಲ ಬೇಕಾಯಿತು.

Six coach metro resumes after technical error

ಸಂಜೆ ವೇಳಾಪಟ್ಟಿಯಂತೆ 5.34ಕ್ಕೆ ಬೈಯಪ್ಪನಹಳ್ಳಿಯಿಂದ ಹೊರಟ ಆರು ಬೋಗಿ ರೈಲು ಪೂರ್ಣ ಮಾರ್ಗದಲ್ಲಿ ಎರಡು ಟ್ರಿಪ್‌ನ ಸೇವೆ ನೀಡಿತು. ಬೆಳಗ್ಗೆ ಕಚೇರಿಗೆ ಒತ್ತಡದಲ್ಲಿ ಪ್ರಯಾಣಿಸುತ್ತಿದ್ದವರು ಸಂಜೆಯೂ ಇದೇ ಗತಿ ಎಂದುಕೊಂಡವರು ನಿಟ್ಟುಸಿರು ಬಿಟ್ಟರು.

ಮೆಟ್ರೋದಲ್ಲಿ ಪ್ರತಿ ದಿನ ಸರಾಸರಿ 3.60 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಬೆಳಗ್ಗೆ 8ರಿಂದ 10 ಗಂಟೆಯ ಅವಧಿಯಲ್ಲಿ ದಟ್ಟಣೆ ಹೆಚ್ಚಿರುತ್ತದೆ. ಅದರಲ್ಲೂ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಪ್ರಯಾಣಿಕರು ಸಾಲಿನಲ್ಲಿ ನಿಂತರೂ ದಟ್ಟಣೆಯಿಂದಾಗಿ ಒಂದು ರೈಲನ್ನು ಬಿಟ್ಟು ಮುಂದೆ ಬರುವ ರೈಲಿಗಾಗಿ ಕಾಯಬೇಕಾಗುತ್ತದೆ. ಸೋಮವಾರ ರೈಲು ಬಾರದಿರುವುದರಿಂದ ಇದೇ ಸಮಸ್ಯೆಯಾಯಿತು.

English summary
Six coach of Namma Metro service has resumed after technical error on Monday evening. Commuters were expressed relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X