ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ:ಏ.15ರಿಂದ ಆರು ಬೋಗಿ ರೈಲು ಸಂಚಾರ ಆರಂಭ

|
Google Oneindia Kannada News

Recommended Video

ನಮ್ಮ ಮೆಟ್ರೋ : ಏ.15ರಿಂದ ಆರು ಬೋಗಿ ರೈಲು ಸಂಚಾರ ಆರಂಭ | Oneindia Kannada

ಬೆಂಗಳೂರು, ಏಪ್ರಿಲ್ 03: ನಮ್ಮ ಮೆಟ್ರೋಗೆ ಸೇರ್ಪಡೆಯಾಗಿರುವ ಆರು ಬೋಗಿಯ ರೈಲಿಗೆ ರಿಸರ್ಚ್ ಸ್ಟಾಂಡರ್ಡ್ ಆರ್ಗನೈಸೇಶನ್ ನಿಂದ ಆರ್ ಡಿಎಸ್ಓ ಪ್ರಮಾಣ ಪತ್ರ ಲಭ್ಯವಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಹೆಚ್ಚುವರಿ ಬೋಗಿಯ ರೈಲು ವಾಣಿಜ್ಯ ಸಂಚಾರಕ್ಕೆ ಆರ್ಗ ಸುಗಮವಾದಂತಾಗಿದೆ. ಇನ್ನು ರೈಲ್ವೆ ಸುರಕ್ಷತಾ ಆಯೋಗದ ಪ್ರಮಾಣ ಪತ್ರ ಪಡೆಯುವುದು ಬಾಕಿ ಇದೆ. ಏ.15ಕ್ಕೆ ಆರು ಬೋಗಿ ರೈಲು ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆ ಇದೆ.

ನಮ್ಮ ಮೆಟ್ರೋ: ಏಪ್ರಿಲ್ ಮೂರನೇ ವಾರದಲ್ಲಿ 6 ಬೋಗಿ ರೈಲು ನಮ್ಮ ಮೆಟ್ರೋ: ಏಪ್ರಿಲ್ ಮೂರನೇ ವಾರದಲ್ಲಿ 6 ಬೋಗಿ ರೈಲು

ಬಿಇಎಂಎಲ್ ನಿಂದ ಪಡೆದ ಮೂರು ಬೋಗಿ ಗಳನ್ನು ಬೈಯ್ಯಪ್ಪನಹಳ್ಳಿ ಡಿಪೊದಲ್ಲಿ ಮೂರು ಬೋಗಿಯ ರೈಲಿಗೆ ಜೋಡಿಸಿ ಆರು ಬೋಗಿಯ ರೈಲಾಗಿ ಪರಿವರ್ತಿಸಲಾಗಿದೆ.ರೈಲಿನ ಮುಂಭಾಗದಲ್ಲಿ ಲೋಕೊ ಪೈಲೆಟ್ ಕೂರುವ ಜಾಗದಲ್ಲಿ ಇರುವ ಉಪಕರಣಗಳಿಗೆ ಸುಮಾರು 80 ತಂತ್ರಾಂಶಗಳನ್ನು ಅಳವಡಿಸಲಾಗಿದೆ.

Six coach metro is ready for commercial trip

ಇದಾದ ಬಳಿಕ ಎಸಿ, ಆಸನಗಳು, ಚೈನ್, ಚಕ್ರ ಮೊದಲಾದ ಬಿಡಿಭಾಗಗಳ ಪರಿಶೀಲನೆ ನಡೆಸಲಾಗಿದೆ. ರೈಲು ಚಲಿಸುವಾಗ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸುವ ಸಿಗ್ನಲಿಂಗ್ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಂಪರ್ಕ ನೀಡಲಾಗಿದೆ. ಬಳಿಕ ಡಿಪೋದಲ್ಲಿರುವ ಹಳಿಯಲ್ಲೇ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ.

2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಏ.15ಕ್ಕೆ ಆರು ಬೋಗಿ ರೈಲನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ನಿಯಮ ಪ್ರಕಾರ ಮೆಟ್ರೋ ರೈಲು ಎತ್ತರಿಸಿದ ಮಾರ್ಗದಲ್ಲಿ ಕನಿಷ್ಠ 500 ಕಿ.ಮೀ ದೂರ ಚಲಿಸಿ ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸಬೇಕಿದೆ. ಬಿಇಎಂಎಲ್ ನಲ್ಲಿ ಉಳಿದ 147 ಬೋಗಿಗಳು ತಯಾರಾಗುತ್ತಿದೆ.

English summary
Six coach Namma metro train will resume it's service from April 15th. RDSO issued certificate for the new design.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X