ನಮ್ಮ ಬೆಂಗಳೂರು ಪ್ರಶಸ್ತಿಗೆ ಭಾಜನರಾದ 6 ಮಂದಿ ಸಾಧಕರು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 13: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುತ್ತಾ ಬಂದಿರುವ 'ನಮ್ಮ ಬೆಂಗಳೂರು ಪ್ರತಿಷ್ಠಾನ', ಪ್ರತಿ ವರ್ಷದಂತೆ ಈ ವರ್ಷವೂ ಆರು ಮಂದಿ ಬೆಂಗಳೂರಿಗರನ್ನು ಸನ್ಮಾನಿಸಿದೆ. 2016ರ ನಮ್ಮ ಬೆಂಗಳೂರು ಪ್ರಶಸ್ತಿ ಭಾಜನರಾದವರ ವಿವರ ಇಲ್ಲಿದೆ.

ಅಂತಿಮವಾಗಿ ಪ್ರಶಸ್ತಿ ಗೆದ್ದ 6 ಮಂದಿ ಸಾಧಕರು:
* ಡಾ.ಟಿ.ವಿ.ರಾಮಚಂದ್ರ, ಕೆರೆ ಅಭಿವೃದ್ಧಿ
* ಗೀತಾ ಮೆನನ್, ಸ್ತ್ರೀ ಜಾಗೃತಿ ಸಮಿತಿ
* ಜಗನ್ನಾಥರಾವ್, ಬಿಬಿಎಂಪಿಯ ಅರಣ್ಯ ವಿಭಾಗ
* ಧನ್ಯಾ ರಾಜೇಂದ್ರನ್, ಪತ್ರಕರ್ತೆ
* ಜಾಸ್ಮಿನ್ ಪತೇಜಾ, ಸಾಮಾಜಿಕ ಕಾರ್ಯಕರ್ತೆ
* ಹರ್ಷಲ್ ಮಿತ್ತಲ್, ಸಾಫ್ಟ್ ವೇರ್ ತಂತ್ರಜ್ಞ

Namma Bengaluru


ಐದು ವಿಭಾಗಗಳಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಹೆಸರುಗಳು:

ಸರ್ಕಾರಿ ಸೇವೆ: ಸರ್ಕಾರಿ ಸೇವಾ ವಿಭಾಗದಲ್ಲಿ ಕೋರಮಂಗಲ ಠಾಣೆ ಇನ್ಸ್‍ಪೆಕ್ಟರ್ ಆರ್.ಎಂ.ಅಜಯ್, ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಕಾರಿ ದೀಪಕ್ ಭಾಜ್‍ಪಯ್, ಬೊಮ್ಮನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್, ಎಚ್‍ಎಸ್‍ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ದನ್, ಬಿಬಿಎಂಪಿಯ ಅರಣ್ಯ ವಿಭಾಗದ ಜಗನ್ನಾಥರಾವ್, ಮಿಂಟೋ ಆಸ್ಪತ್ರೆ ನಿರ್ದೇಶಕ ತ್ಯಾಮಗೊಂಡ್ಲು ಕೃಷ್ಣಮೂರ್ತಿ ರಮೇಶ್ ಮತ್ತು ಬೆಂಗಳೂರು ನಗರ ಜಿಲ್ಲಾಕಾರಿ ವಿ.ಶಂಕರ್ ಅವರು ಹೆಸರು ಅಂತಿಮ ಪಟ್ಟಿಯಲ್ಲಿವೆ.

ಸಾರ್ವಜನಿಕ ಉದ್ದಿಮೆ ವಿಭಾಗ: ಅಜಂತಾ ಚಂದನ್, ಅಶೋಕ್ ಗಿರಿ, ಜಾಸ್ಮಿನ್, ಜಯರಾಂ ಎಚ್.ಆರ್., ರೋಷಿಣಿ ಮುಖರ್ಷಿ, ಶ್ರದ್ಧಾ ಶರ್ಮ, ಸುನಿಲ್ ಶರವಣ, ಶ್ರೀಕೃಷ್ ಮತ್ತು ವಿದ್ಯಾ, ವಿಜಯರಾಜ್ ಸಿಸೋಡಿಯಾ ಅವರುಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಮಾಧ್ಯಮ ವಿಭಾಗ: ಚೇತನ್ ಆರ್., ಧನ್ಯಾ ರಾಜೇಂದ್ರನ್, ಕೀರ್ತಿ ಪ್ರಸಾದ್, ನಿರಂಜನ್ ಕಾಗೇರಿ, ಶ್ರೀಲೋಕ್ ಎಂ.ಎಲ್., ಸೋಮಣ್ಣ ಮಾಚಿಮಾಡ ಮತ್ತು ಯತೀಶ್ ಕುಮಾರ್.

ವರ್ಷದ ಶ್ರೇಷ್ಠ ನಾಗರಿಕರ ಪ್ರಶಸ್ತಿ: ಡಾ.ಟಿ.ವಿ.ರಾಮಚಂದ್ರ, ಡಾ.ವಿಜಯಲಕ್ಷ್ಮಿ ದೇಶಮಾನೆ, ಗೀತಾ ಮೆನನ್, ಸುರೇಶ್ ಮೀನ, ಎಚ್.ಜಿ.ಸುಶೀಲಮ್ಮ ಮತ್ತು ವಿ.ಎಸ್.ಬಸವರಾಜ್.

ವರ್ಷದ ಉದಯೋನ್ಮುಖ ತಾರೆ: ಐಶ್ವರ್ಯ ಬಿ.ಎಸ್., ಐಶ್ವರ್ಯ ಕೆ.ಮೂರ್ತಿ, ಅಮಿತ್ ಅಮರನಾಥ್, ಹರ್ಷಲ್ ಮಿತ್ತಲ್, ಕಿರಣ್ ಎ., ನಿರಂಜನ್ ಮುಕುಂದನ್ ಮತ್ತು ಶಾಶ್ವತ್ ವೇಲ್.(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Six citizens received the Namma Bengaluru Awards on Sunday, the flagship award of the Namma Bengaluru Foundation which recognises contributions towards the betterment of the city.
Please Wait while comments are loading...