ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಹತ್ಯೆ ಶಂಕಿತನ ಮಂಪರು ಪರೀಕ್ಷೆ ಕುರಿತು ಎಸ್‌ಐಟಿಯಿಂದ ಪತ್ರ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 15: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿರುವ ಕಾರಣ ಪರೀಕ್ಷೆಯ ದಿನಾಂಕ ನಿಗದಿ ಮಾಡಲು ಎಸ್‌ಐಟಿಯು ಗುಜರಾತ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪತ್ರ ಬರೆದಿದೆ.

ಪರೀಕ್ಷೆಯ ವಿಧಾನ, ದಿನ, ಎಷ್ಟು ಸಮಯದಲ್ಲಿ ಪರೀಕ್ಷೆ ಮುಗಿಯುತ್ತದೆ, ಆರೋಪಿಯನ್ನು ಮಂಪರು ಪರೀಕ್ಷೆಗೆ ಯಾವ ರೀತಿ ತಯಾರು ಮಾಡಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡುವಂತೆ ಎಸ್‌ಐಟಿಯು ಗುಜರಾತ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಬರೆದಿದೆ.

ಗೌರಿ ಹತ್ಯೆ ಪ್ರಕರಣ: ಆರೋಪಿ ನವೀನ್ ಕುಮಾರ್ ಗೆ ಮಂಪರು ಪರೀಕ್ಷೆಗೌರಿ ಹತ್ಯೆ ಪ್ರಕರಣ: ಆರೋಪಿ ನವೀನ್ ಕುಮಾರ್ ಗೆ ಮಂಪರು ಪರೀಕ್ಷೆ

ಗುಜರಾತ್ ವಿಧಿ ವಿಜ್ಞಾನ ಪ್ರಯೋಗಾಲಯ ಯಾವ ದಿನಾಂಕ ಸೂಚಿಸುತ್ತದೆಯೋ ಆ ದಿನಾಂಕದಂದು ನವೀನ್‌ಕುಮಾರ್‌ಗೆ ಮಂಪರು ಪರೀಕ್ಷೆ ಮಾಡಲಾಗುತ್ತದೆ ಎಂದು ಎಸ್‌ಐಟಿ ಹೇಳಿದೆ.

SIT write letter to Gujrat forensic Science Laboratory about narco analysis test

ಶಂಕಿತ ಆರೋಪಿ ನವೀನ್‌ಕುಮಾರ್ ಪದೇ ಪದೇ ತನ್ನ ಹೇಳಿಕೆ ಬದಲಾಯಿಸುತ್ತಿರುವ ಕಾರಣ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿಯು ನ್ಯಾಯಾಲಯದ ಅನುಮತಿ ಕೋರಿತ್ತು. ಆರೋಪಿ ಸಹ ಮಂಪರು ಪರೀಕ್ಷೆಗೆ ಒಳಪಡಲು ಒಪ್ಪಿಗೆ ಸೂಚಿಸಿದ ಕಾರಣ ನವೀನ್‌ಕುಮಾರ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನವೀನ್‌ಕುಮಾರ್‌ನನ್ನು ಆತನ ವಕೀಲನ ಮುಂದೆ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ನವೀನ್ ಬಂಧನ ಇನ್ನೂ ಒಂದು ವಾರ ತಡವಾಗಿದ್ದರೆ?ನವೀನ್ ಬಂಧನ ಇನ್ನೂ ಒಂದು ವಾರ ತಡವಾಗಿದ್ದರೆ?

English summary
SIT writes letter to Gujrat forensic Science Laboratory seeking information of date to conduct narco analysis testing to Gauri Lankesh murder accused Naveen Kumar. accused will under go test after Gujrat forensic Science Laborator suggest a suitable date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X