ಗೌರಿ ಲಂಕೇಶ್‌ ಹತ್ಯೆ: ಓರ್ವ ಶಾರ್ಪ್ ಶೂಟರ್ ಬಂಧನ

Posted By:
Subscribe to Oneindia Kannada
   ಗೌರಿ ಲಂಕೇಶ್‌ ಹತ್ಯೆ: ಓರ್ವ ಶಾರ್ಪ್ ಶೂಟರ್ ಬಂಧನ | Oneindia Kannada

   ಬೆಂಗಳೂರು, ಡಿಸೆಂಬರ್ 6: ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿಪೂಜಾರಿ ಗ್ಯಾಂಗ್ ನ ಶಾರ್ಪ್ ಶೂಟರ್ ತಾಹೀರ್ ಹುಸೇನ್‌ ಅಲಿಯಾಸ್ ಅನೂಪ್‌ ಗೌಡನನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದುಕೊಂಡಿದೆ.

   ಗೌರಿ ಹತ್ಯೆ : ನಕ್ಸಲರ ಈಮೇಲ್ - ಪತ್ರಗಳ ಬೆನ್ನು ಹತ್ತಿದ ಪೊಲೀಸ್

   ರಾಜ್ಯದಲ್ಲಿ ನಾಡಪಿಸ್ತೂಲ್ ಮಾರಾಟ ಮಾಡುತ್ತಿದ್ದ ಆರೋಪದಡಿ ಅನೂಪ್‌ ಗೌಡನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ 7.65 ಎಂ.ಎಂನ ನಾಡಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳು ಪತ್ತೆಯಾಗಿವೆ.

   'ಗೌರಿ ಹತ್ಯೆಯಾಗಿ 3 ತಿಂಗಳಾದರೂ ಹಂತಕರ ಸುಳಿವಿಲ್ಲ'

   ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಇದೇ ಮಾದರಿಯ ಪಿಸ್ತೂಲ್ ಬಳಕೆಯಾಗಿತ್ತು. ಈ ಕಾರಣದಿಂದ ಗೌರಿ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಕೂಡ ತಾಹಿರ್ ಹುಸೇನ್‌ನನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸಲಿದೆ

   SIT arrests Sharpshooter in Gauri Lankesh muder case

   ಗೌರಿ ಕೊಲೆಗಡುಕರ ಪತ್ತೆಗೆ ಆಗ್ರಹ, ಬೆಂಗಳೂರಿನಲ್ಲಿ ಪುನಃ ಪ್ರತಿಭಟನೆ

   2017ರ ಫೆಬ್ರವರಿ 2ರಂದು ಬೆಳಗಾವಿ ಪೊಲೀಸರು ತಾಹಿರ್ ಹುಸೇನ್‌ ನನ್ನು ಬಂಧಿಸಿದ್ದರು.ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ. ಇದೀಗ ಮತ್ತೆ ಅಕ್ರಮ ಶಸ್ತ್ರಾಸ್ತ್ರಗಳ ಸಮೇತ ಸಿಕ್ಕಿಬಿದ್ದಿದ್ದಾನೆ.

   ಸೆ.5ರ ಮಂಗಳವಾರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಎಸ್‌ಐಟಿ ರಚನೆ ಮಾಡಿದೆ. ಆರೋಪಿಗಳ ಪತ್ತೆಗೆ ಎಸ್ ಐಟಿ ತಂಡ ಕಾರ್ಯಚರಣೆ ನಡೆಸಿದೆ. ಆದರೆ, ಇದುವರೆಗೆ ಯಾವುದೇ ಖಚಿತ ಮಾಹಿತಿಗಳು ದೊರೆತಿಲ್ಲ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Special Investigation Team (SIT) arrests Sharpshooter Tahir Hussain alias Anup Gowda in journalist Gauri Lankesh muder case.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ