ಬೆಂಗಳೂರು: ಮಲಗಿದ್ದ ಮಹಿಳೆಯ ಕೆನ್ನೆ ಕಚ್ಚಿ ಯುವಕ ಪರಾರಿ

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಆಗಸ್ಟ್ 27: ಮಹಿಳೆಯರ ಮೇಲೆ ದೌರ್ಜನ್ಯ ಬೆಂಗಳೂರಿಗೆ ಹೊಸ ಪ್ರಕರಣವಲ್ಲ. ಆದರೆ ಇದು ಕೊಂಚ ವಿಚಿತ್ರ, ವಿಲಕ್ಷಣ.

ಮನೆಯಲ್ಲಿ ಮಹಿಳೆ ಮಲಗಿದ್ದ ವೇಳೆ ಒಳ ಪ್ರವೇಶ ಮಾಡಿದ ಅದೇ ಅಪಾರ್ಟ್ ಮೆಂಟ್ ನಿವಾಸಿ ಮಹಿಳೆಯ ಕೆನ್ನೆಗೆ ರಕ್ತ ಬರುವ ರೀತಿ ಕಚ್ಚಿ ಕಾಲು ಕಿತ್ತಿದ್ದಾನೆ. ಬೆಂಗಳೂರಿನ ಎಚ್ ಎಲ್ ಪೊಲೀಸರು ಹುಡುಕಾಟ ಆರೋಪಿಗೆ ಹುಡುಕಾಟ ಮುಂದುವರಿಸಿದ್ದಾರೆ.[ಹುಡುಗಿಯರಿಗೆ ಕಾಟ ಕೊಡುತ್ತಿದ್ದ ಪೋಲಿ ಮಂಗಣ್ಣ ಸಿಕ್ಕಿಬಿದ್ದ!]

bengaluru

ಆಗಸ್ಟ್‌ 25 ರಂದೇ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗಾಯಾಳು ಮಹಿಳೆ ಡಾರ್ಜಿಲಿಂಗ್‌ ಮೂಲದವಳು. ಗಂಡನಿಂದ ವಿಚ್ಛೇದಿತ ಮಹಿಳೆ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ 5 ವರ್ಷಗಳಿಂದ ವಾಸವಾಗಿದ್ದರು. ಮಹಿಳೆಯೊಂದಿಗೆ ಆಕೆಯ ಸಹೋದರಿ ವಾಸ ಮಾಡುತ್ತಿದ್ದಳು.[ಸಿಲಿಕಾನ್ ಸಿಟಿ ಬೆಂಗಳೂರು ಪುರುಷರಿಗೂ ಸೇಫ್ ಅಲ್ಲ]

ಕೆನ್ನೆ ಕಚ್ಚಿ ಪರಾರಿಯಾದವನನ್ನು ಶಿರಸಿ ಮೂಲದ ಸುನಿಲ್‌ ಎಂದು ಹೇಳಲಾಗಿದ್ದು ಆತ ಸಹ ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ. ಮಹಿಳೆ ಈ ಸಂಬಂಧ ಎಚ್‌ಎಎಲ್‌ ಪೊಲೀಸರಿಗೆ ದೂರು ನೀಡಿದ್ದು ಮಹಿಳಾ ದೌರ್ಜನ್ಯದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru: A weird incident has taken place at one of the apartments in near HAL airport, Bengaluru. A Darjeeling woman was harassed by a man on 25 August 2016. Sunil from Sirsi bit Darjeeling origin woman's cheek and escaped from the site.
Please Wait while comments are loading...