ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣಪನನ್ನು ಕೂರಿಸಲು ಪಾಲಿಕೆಯಿಂದ ಏಕಗವಾಕ್ಷಿ ಅನುಮತಿ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 3: ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳು ಒಂದೇ ಸೂರಿನಡಿಯಲ್ಲಿ ದೊರೆಯುವಂತೆ ಮಾಡಲು ಏಕಗವಾಕ್ಷಿ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೂಚನೆ ನೀಡಿದ್ದಾರೆ.

ಅಗ್ನಿಶಾಮಕ, ಬೆಸ್ಕಾಂ, ಬಿಬಿಎಂಪಿ, ಪೊಲೀಸ್ ಇಲಾಖೆ, ಬಿಡಿಎ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಸೇವೆ ಒಂದೇ ಸೂರಿನಡಿ ದೊರೆಯುವಂತಾಗಬೇಕು, ಈಗಾಗಲೇ ಬಿಡಿಎ, ಬಿಬಿಎಂಪಿ, ಅಗ್ನಿಶಾಮಕ ಇನ್ನಿತರೆ ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡ ಸಮ್ವಯ ಸಮಿತಿ ಈಗಾಗಲೇ ರಚನೆಯಾಗಿದೆ.

ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!

ಸರ್ಕಾರಿ ಕೆಲಸಗಳನ್ನು ನಡೆಸಲು ಈ ಸಮಿತಿಯಲ್ಲಿ ಚರ್ಚೆ ನಡೆಸಲಾಗುತ್ತದೆ. ಆದರೆ ಒಂದೇ ಕಡೆ ಎಲ್ಲ ಬಗೆಯ ಅನುಮತಿಗಳನ್ನು ಪಡೆಯುವ ವ್ಯವಸ್ಥೆ ಲಭ್ಯವಿರಲಿಲ್ಲ, ಇಲಾಖೆಯ ಕಾಮಗಾರಿ ಹಾಗೂ ಸಾರ್ವಜನಿಕರು ವಿವಿಧ ಅನುಮತಿಗಳನ್ನು ಪಡೆಯಲು ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ. ಪರಮೇಶ್ವರ ಅವರು ಸ್ವತಃ ಆದೇಶ ಹೊರಡಿಸಿ ಸೂಚನೆ ನೀಡಿದ್ದಾರೆ.

Single window system for Ganesh idol installation permission

ರಸ್ತೆ ಕಾಮಗಾರಿ, ಸರ್ಕಾರಿ ಕಾರ್ಯಕ್ರಮಗಳ ಆಯೋಜನೆ, ಚರಂಡಿ ದುರಸ್ತಿ ಇತರೆ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಚಟುವಟಿಕೆಗಳಿಗೆ ಅನುಮತಿ ಪಡೆಯಬೇಕಾಗುತ್ತದೆ. ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ನಡೆಸುವ ಸಭೆ, ಉತ್ಸವ ಸಮಾರಂಭಗಳಿಗೆ ಅನುಮತಿ ಪಡೆಯಲು ಇದು ನೆರವಾಲಿದೆ.

ಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮ

ಗಣೇಶೋತ್ಸವಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದರೆ ಅವರ ವಿರುದ್ಧ ಕಠಣ ಕ್ರಮ ಕೈಗೊಳ್ಳುವುದಾಗಿ ಬೆಸ್ಕಾಂ ತಿಳಿಸಿದೆ. ವಿವಿಧ ಬಡಾವಣೆಗಳಲ್ಲಿ ನಾಗರಿಕರು ಗಣಪತಿನ್ನು ಪ್ರತಿಷ್ಠಾಪಿಸುತ್ತಾರೆ ಇವರ ಪೈಕಿ ಹಲವು ಮಂದಿ ಬೆಳಕಿನ ವ್ಯವಸ್ಥೆಗಾಗಿನೇರವಾಗಿ ವಿದ್ಯುತ್ ಲೈನ್ ಗಳಿಗೆ ವೈರ್ ಜೋಡಿಸಿ ಕರೆಂಟ್ ಪಡೆಯುತ್ತಿರುವುದು ಬೆಸ್ಕಾಂ ಗಮನಕ್ಕೆ ಬಂದಿದೆ.

ನಿಮ್ಮ ಏರಿಯಾ ಗಣೇಶ 5 ಅಡಿಗಿಂತ ಹೆಚ್ಚು ಎತ್ತರ ಇರೋಹಾಗಿಲ್ಲನಿಮ್ಮ ಏರಿಯಾ ಗಣೇಶ 5 ಅಡಿಗಿಂತ ಹೆಚ್ಚು ಎತ್ತರ ಇರೋಹಾಗಿಲ್ಲ

ಗಣೇಶೋತ್ಸವವನ್ನು ಸುರಕ್ಷಿತವಾಗಿ ಆಚರಿಸಬೇಕು, ಬೆಳಕಿನ ವ್ಯವಸ್ಥೆ ಹಾಗೂ ಕಾರ್ಯಕ್ರಮ ಆಯೋಜನೆಗೆ ಅಧಿಕೃತ ವಿದ್ಯುತ್ ಪಡೆದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಇದು ಸಾರ್ವಜನಿಕರು ಹಾಗೂ ಸಂಸ್ಥೆ ಇಬ್ಬರಿಗೂ ಒಳಿತಾಗಿರುವರಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಗಣೇಶೋತ್ಸವ ಸಮಿತಿಗಳು ಸಂಸ್ಥೆಯ ಸ್ಥಳೀಯ ಕಚೇಋಇಗಳನ್ನು ಸಂಪರ್ಕಿಸಬಹುದು.

English summary
Deputy chief minister Dr.G. Parameshwara has issued direction to implement single window system in BBMP for issuance of Ganesha idol installation permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X