ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಹೊಸ ವರ್ಷದ ಪಾರ್ಟಿಗಳು ಇಂದಿರಾನಗರ, ಕೋರಮಂಗಲಕ್ಕೆ ಶಿಫ್ಟ್

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಡಿಸೆಂಬರ್ 29: ಹೊಸ ವರ್ಷಾಚರಣೆ ಸಂಭ್ರಮ ಬೆಂಗಳೂರಿನ ಎಂಜಿ ರಸ್ತೆ ಹಾಗೂ ಬ್ರಿಗೆಡ್ ರಸ್ತೆಯಲ್ಲಿ ಮಾತ್ರ ಕೇಂದ್ರೀಕೃತಗೊಳ್ಳುವರಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಬೆಂಗಳೂರು ಪೊಲೀಸರು ಇದೀಗ ಇತರೆ ಪ್ರದೇಶಗಳಿಗೆ ರಾತ್ರಿ ಪಾರ್ಟಿಗಳನ್ನು ಸ್ಥಳಾಂತರಗೊಳಿಸಲು ಪ್ರಯತ್ನ ಆರಂಭಿಸಿದ್ದಾರೆ.

  ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ 15 ಸಾವಿರ ಪೊಲೀಸರ ಪಹರೆ!

  ಎಂಜಿ ರಸ್ತೆ ಹಾಗೂ ಬ್ರಿಗೆಡ್ ರಸ್ತೆಗೆ ಬದಲಾಗಿ ಕೋರಮಂಗಲ ಎಚ್ ಎಸ್ ಆರ್ ಲೇಔಟ್ ಹಾಗೂ ಇಂದಿರಾನಗರದಂತಹ ಪ್ರದೇಶಗಳಲ್ಲೂ ಈ ರೀತಿಯ ಪಾರ್ಟಿ ಹಬ್ ಗಳನ್ನಾಗಿ ಪರಿವರ್ತಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಕುರಿತಂತೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗುರುವಾರ ಕೋರಮಂಗಲದಲ್ಲಿ ಸಭೆ ನಡೆಸಿದ್ದು, ಬೆಂಗಳೂರಿನ ಎಲ್ಲ ಪಬ್ ಹಾಗೂ ಬಾರ್ ಗಳ ಮಾಲೀಕರೊಂದಿಗೆ ಚರ್ಚಿಸಿದ್ದಾರೆ.

  Similar MG road parties in Koramangala and Indira nagar

  ಕೇವಲ ಬ್ರಿಗೆಡ್ ರಸ್ತೆ ಹಾಗೂ ಎಂಜಿ ರಸ್ತೆಯಲ್ಲಿ ಪಾರ್ಟಿಗಳನ್ನು ಆಯೋಜಿಸುವುದರಿಂದ ಹೆಚ್ಚು ಜನಸಂದಣಿ ಉಂಟಾಗುತ್ತದೆ. ಇದರಿಂದ ಸಂಭ್ರಮಾಚರಣೆ ಕೂಡ ಸಮರ್ಪಕವಾಗುವುದಿಲ್ಲ ಅದೇ ರೀತಿ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಯಲ್ಲಿ ಇಂದಿರಾನಗರ ಹಾಗೂ ಕೋರಮಂಗಲ ದಂತಹ ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚು ಪಾರ್ಟಿಗಳನ್ನು ಆಯೋಜಿಸುವುದರಿಂದ ಎಂಜಿ ರಸ್ತೆಯಲ್ಲಿ ಉಂಟಾಗುವ ಜನಸಂದಣಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬಹುದು. ಈ ನಿಟ್ಟಿನಲ್ಲಿ ಬಾರ್ ಹಾಗೂ ಪಬ್ ಮಾಲೀಕರ ನೆರವನ್ನು ಕೋರಲಾಗಿದೆ.

  ಡಿಸೆಂಬರ್ 31 ರಂದು ಚರ್ಚ್ ಸ್ಟ್ರೀಟ್ ಅರ್ಧ ಓಪನ್!

  ಇದೇ ವೇಳೆ ಎಂಜಿ ರಸ್ತೆ, ಬ್ರಿಗೆಡ್ ರಸ್ತೆ ಸೇರಿದಂತೆ ಪ್ರದೇಶಗಳಲ್ಲಿ ಆಯೋಜಿಸುವ ಹೊಸ ವರ್ಷ ಆಚರಣೆ ಪಾರ್ಟಿಗಳ ಸಂದರ್ಭದಲ್ಲಿ ಸಿಸಿಟಿವಿ ಅಳವಡಿಸುವುದು ಕಡ್ಡಾಯ ಎಂದು ಪಬ್ ಹಾಗೂ ಬಾರ್ ಗಳ ಮಾಲೀಕರಿಗೆ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.

  ಮಹಾತ್ಮಾ ಗಾಂಧಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಮೇಲಿನ ಹೊಸ ವರ್ಷಾಚರಣೆ ಪಾರ್ಟಿಗಳ ಜನ ಸಂದಣಿ ತಪ್ಪಿಸುವ ನಿಟ್ಟಿನಲ್ಲಿ ಗುರುವಾರವಷ್ಟೇ ಕೋರಮಂಗಲದಲ್ಲಿ ಸಭೆ ನಡೆಸಿದ್ದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶುಕ್ರವಾರ ಇಂದಿರಾನಗರ ಪ್ರದೇಶದಲ್ಲೂ ಬಾರ್ ಮತ್ತು ಪಬ್ ಗಳ ಪಾಲೀಕರ ಜತೆಗೆ ಸಭೆ ನಡೆಸಲಿದ್ದಾರೆ.

  ಎಂ ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ನಡೆಯುವ ವರ್ಣ ರಂಜಿತ ಪಾರ್ಟಿಗಳನ್ನು ಇತರೆ ಪ್ರದೇಶಗಳಲ್ಲೂ ಆಯೋಜಿಸುವುದರಿಂದ ಎಂಜಿ ರಸ್ತೆಗೆ ಹೆಚ್ಚು ಜನರು ಬರುವುದನ್ನು ತಪ್ಪಿಸಬಹುದು. ಇದರಿಂದ ವಾಣಿಜ್ಯದ ದೃಷ್ಟಿಯಿಂದಲೂ ಬೇರೆ ಪ್ರದೇಶಗಳಿಗೆ ಅನುಕೂಲವಾಗುತ್ತದೆ ಎಂಬುದು ಪೊಲೀಸ್ ಇಲಾಖೆಯ ಚಿಂತನೆಯಾಗಿದೆ.

  ಆದರೆ ಇಂದಿರಾನಗರ, ಕೋರಮಂಗಲ ಪ್ರದೇಶ ಮತ್ತು ಎಚ್ ಎಸ್ ಆರ್ ಲೇಔಟ್ ನಲ್ಲಿ ರಾತ್ರಿ ಪಾರ್ಟಿಗಳನ್ನು ಆಯೋಜಿಸಲು ಪೊಲೀಸರು ತೆಗೆದುಕೊಂಡಿರುವ ಕ್ರಮಕ್ಕೆ ಸ್ಥಳೀಯ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ.
  ಈಗಾಗಲೇ ಸಾಕಷ್ಟು ವಾಣಿಜ್ಯೀಕರಣಗೊಂಡಿರುವ ಜನವಸತಿ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿ ದೆ ಹೊಸ ವರ್ಷಾಚರಣೆಯ ಪಾರ್ಟಿಗಳನ್ನೂ ಕೂಡ ಇಂದಿರಾನಗರದಂತಹ ಜನವಸತಿ ಪ್ರದೇಶಗಳಲ್ಲಿ ಆಯೋಜಿಸುವುದರಿಂದ ಜನಸಾಮಾನ್ಯರ ನೆಮ್ಮದಿಗೆ ಭಂಗ ಉಂಟಾಗುತ್ತದೆ ಎನ್ನುವುದು ನಾಗರಿಕರ ವಿರೋಧಕ್ಕೆ ಕಾರಣವಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Bengaluru police have trying to shift new year parties from MG road anf Brigade road to Koramangala anfd Indiranagar as part of maintain the law and order in the city on December 31st night.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more