ಸಿಗ್ನಲ್ ರಹಿತ ಸಿಲ್ಕ್‌ಬೋರ್ಡ್ ಜಂಕ್ಷನ್‌ಗೆ ಬಿಎಂಆರ್ ಸಿಎಲ್ ಸಿದ್ಧತೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದ್ದು, 133 ಕೋಟಿ ರೂ. ವೆಚ್ಚದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಲೂಪ್ ಮತ್ತು ರ‍್ಯಾಂಪ್ ನಿರ್ಮಾಣಕ್ಕೆ ಸಜ್ಜಾಗಿದೆ.

ಬಿಡಿಎ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಈ ಯೋಜನೆಯನ್ನು ಬಿಎಂಆರ್ ಸಿಎಲ್ ಕೈಗೆತ್ತಿಕೊಳ್ಳುತ್ತಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ 2.84 ಕಿ.ಮೀ ಲೂಪ್ ಮತ್ತು ರ‍್ಯಾಂಪ್ ನಿರ್ಮಾಣವಾಗಲಿದೆ. ಈ ಕುರಿತು ಮಾ.27ರಂದು ಟೆಂಡರ್ ಆಹ್ವಾನಿಸಿರುವ ಬಿಎಂಆರ್ ಸಿಎಲ್ 27ತಿಂಗಳೊಳಗಾಗಿ ಯೋಜನೆ ಪೂರ್ಣಗೊಳಿಸುವ ಗಡುವಿನ ಷರತ್ತು ವಿಧಿಸಿದೆ.

ನಮ್ಮ ಮೆಟ್ರೋ:ಏ.15ರಿಂದ ಆರು ಬೋಗಿ ರೈಲು ಸಂಚಾರ ಆರಂಭ

ಒಂದೇ ಸಿಗ್ನಲ್: ಸಿಲ್ಕ್ ಬೋರ್ಡ್‌ನಲ್ಲಿ ಅಂತ್ಯವಾಗಲಿರುವ ರೋಡ್ ಕಂ ರೈಲ್ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವಂತೆ ಹೊಸದಾಗಿ ಲೂಪ್ ಮತ್ತು ರ‍್ಯಾಂಪ್ ನಿರ್ಮಾಣವಾಗಲಿದೆ. ಸಿಲ್ಕ್ ಬೋರ್ಡ್ ಕಚೇರಿ ಎದುರಿನಿಂದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಗೆ ಬೃಹತ್ ಲೂಪ್ ನಿರ್ಮಾಣವಾಗಲಿದೆ. ಅದೇ ರೀತಿ ಹೊರ ವರ್ತುಲ ರಸ್ತೆಯಿಂದ ಜಯದೇವ ಆಸ್ಪತ್ರೆ ಜಂಕ್ಷನ್ ಕಡೆಗೆ ರ‍್ಯಾಂಪ್ ನಿರ್ಮಾಣವಾಗಲಿದೆ.

Silk Board junction will be signal free

ಇದರಿಂಧಾಗಿ ರಾಗಿಗುಡ್ಡದಿಂದ ವಾಹನವೊಂದು ರೋಡ್ ಕಂ ರೈಲ್ ಮೇಲ್ಸೇತುವೆ ಹತ್ತಿದರೆ ಸಿಗ್ನಲ್ ರಹಿತವಾಗಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಅಥವಾ ಹೊರ ವರ್ತುಲ ರಸ್ತೆ ಸೇರಬಹುದು.

ಜತೆಗೆ ಹೊರವರ್ತುಲ ರಸ್ತೆಯಿಂದ ಜಯದೇವ ಮತ್ತು ರಾಗಿಗುಡ್ಡ ಕಡೆಗೆ ರೋಡ್ ಕಂ ರೈಲ್ ಮೇಲ್ಸೇತುವೆ ಹತ್ತಲು ರಾಂಪ್ ನಿರ್ಮಾಣವಾಗಲಿದೆ. ಹೀಗಾಗಿ ಸಿಲ್ಕ್ ಬೋರ್ಡ್ ನಲ್ಲಿ ಕೇವಲ ಒಂದೇ ಒಂದು ಸಿಗ್ನಲ್ ಇರಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ರೋಡ್ ಕಂ ರೈಲ್ ಮೇಲ್ಸೇತುವೆ: ನಮ್ಮ ಮೆಟ್ರೋ 2ನೇ ಹಂತದಲ್ಲಿ ನಿರ್ಮಾಣವಾಗಲಿರುವ ಆರ್ ವಿ ರಸ್ತೆ ಬೊಮ್ಮಸಂದ್ರ ಮೆಟ್ರೋ ಮಾರ್ಗದಲ್ಲಿ, ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೂ (3,271 ಕಿ.ಮೀ) ರೋಡ್ ಕಂ ರೈಲ್ ಮೇಲ್ಸೇತುವೆ ನಿರ್ಮಾಣವಾಗಲಿದೆ. ಇದಕ್ಕೆ 798 ಕೋಟಿ ರೂ. ವೆಚ್ಚವಾಗಲಿದೆ. ಜೈಪುರ ಮೆಟ್ರೋ ಬಳಿಕ ಇಂತಹ ಡಬಲ್ ಮಾರ್ಗ ಹೊಂದಿರುವ ನಗರವಾಗಿ ರಾಜಧಾನಿ ಗುರುತಿಸಿಕೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If all goes as per BMRCL's plan, Silk Board Junction will become signal free in Two to Three years.Silk Board interchange station that will be made such that the junction infamous for bottlenecks will be made signal free. he 17-km Outer Ring Road (ORR) metro line that was proposed to be an extended part of the second phase of metro project connects Silk Board junction with KR Puram but also connects the RV Road-Bommasandra line at Silk Board junction and Whitefield-Kengeri line at KR Puram.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ