ಲಾಂಛನ ಹೊಂದುವ ದೇಶದ ಮೊದಲ ನಗರ ಖ್ಯಾತಿಯಲ್ಲಿ 'ಬೆಂಗಳೂರು'

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 22 : ಪ್ರವಾಸೋದ್ಯಮ ಇಲಾಖೆಯು ಬ್ರ್ಯಾಂಡ್ ಬೆಂಗಳೂರಿಗೊಂದು ಲಾಂಛನ ಹಾಗೂ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಅಪ್ಲಿಕೇಷನ್ ಬಿಡುಗಡೆ ಮಾಡಲು ಮುಂದಾಗಿದೆ.

ಈ ಮೂಲಕ ಬೆಂಗಳೂರು ಇಡೀ ದೇಶ ದಲ್ಲಿಯೇ ಲಾಂಛನ ಹೊಂದುತ್ತಿರುವ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಡಿಕೆ ಶಿವಕುಮಾರ್ ಅವರಿಂದ 'ಬೆಸ್ಕಾಂ ಮಿತ್ರ' ಅಪ್ಲಿಕೇಷನ್ ಬಿಡುಗಡೆ

ಪ್ರಸ್ತುತ ನ್ಯೂಯಾರ್ಕ್, ಪ್ಯಾರೀಸ್, ಹಾಗೂ ಆಮ್ಸ್ಟರ್ ಡ್ಯಾಮ್ ಸೇರಿದಂತೆ ಕೆಲವೇ ನಗರಗಳು ಇಂತಹ ಲಾಂಛನ ಹೊಂದಿದೆ. ಡಿ.24 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲಾಂಛನ ಲೋಕಾರ್ಪಣೆ ಮಾಡಲಿದ್ದಾರೆ.

Silicon city will get Brand logo

ನೂತನವಾಗಿ ವಿನ್ಯಾಸಗೊಳಿಸಿರುವ ಲಾಂಛನ ಹಾಗೂ ಬೆಂಗಳೂರಿನ ಪ್ರವಾಸ ಕೈಗೊಳ್ಳುವವರಿಗೆ ಮಾಹಿತಿ ಮತ್ತು ಸೇವೆ ಒದಗಿಸಲು ಭಾನುವಾರ ಡಿ.24ರಂದು ಅಪ್ಲಿಕೇಷನ್ ಬಿಡುಗಡೆ ಮಾಡಲಾಗುತ್ತಿದೆ.

ಸಮಸ್ಯೆಗೆ ಸ್ಪಂದಿಸಲು ಬಿಬಿಎಂಪಿಯಿಂದ 'Fix My Street' ಅಪ್ಲಿಕೇಷನ್

ವಿಶ್ವಮಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕೈಗಾರಿಕಾ ಇಲಾಖೆಗಳು ಕರ್ನಾಟಕವನ್ನು ಪ್ರತಿನಿಧಿಸುತ್ತವೆ ಹಲವಾರು ಬಾರಿ ಬ್ರ್ಯಾಂಡ್ ಎನ್ನುತ್ತೇವಾದರೂ ನಿರ್ದಿಷ್ಟವಾಗಿ ವಿವರಿಸಲು ಸಾದ್ಯವಾಗುತ್ತಿಲ್ಲ.

ನ್ಯೂಯಾರ್ಕ್ ನಲ್ಲಿ ಈ ರೀತಿ ಲಾಂಛನ ರೂಪಿಸಿ ಅದಕ್ಕೆ ಪೂರಕ ಕಾರ್ಯಕ್ರಮ ರೂಪಿಸಿದ ನಂತರ ಉದ್ಯೋಗ ಅವಕಾಶಗಳು ಹೆಚ್ಚಾಗಿದೆ ಎಂದು ಪ್ರವಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನ ಸ್ಥಳೀಯರಿಗೆ ಹಾಗೂ ಹೊರಗಿನಿಂದ ಬರುವವರಿಗೆ ಇಲ್ಲಿನ ಇತಿಹಾಸ ತಿಳಿಸುವುದರ ಜತೆಗೆ ಆಧುನಿಕ ಬೆಳವಣಿಗೆಗಳ ಪರಿಷಯವೂ ಆಗುವಂತೆ ಲಾಂಛನದಡಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ಸ್ಪರ್ಧೆ ಮೂಲಕ ಲಾಂಛನ ವಿನ್ಯಾಸ: ಬೆಂಗಳೂರು ಲಾಂಛನ ರಚನೆಯಲ್ಲಿ ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲಾಗಿಲ್ಲ. ಅಂತರ್ಜಾಲದಲ್ಲಿ ಸಾರ್ವಜನಿಕರಿಂದ ಸ್ಪರ್ಧೆ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು1,350ಲಾಂಛನಗಳು ಸಲ್ಲಿಕೆಯಾಗಿದ್ದವು.

ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆ, ಚಿತ್ರಕಲಾ ಪರಿಷತ್ ಸೇರಿ ಅನೇಕ ಸಂಸ್ಥೆಗಳ ಸಹಯೋಗದಲ್ಲಿ ಒಂದು ನವೋದಯ ಸಂಸ್ಥೆ ರೂಪಿಸಿದ ಲಾಂಛನವನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬೆಂಗಳೂರು ಎಂದು ಬರೆಯುವ ಜತೆಗೆ ಘೋಷವಾಕ್ಯ ವಿರಲಿದೆ. ಸ್ಪರ್ಧೆಯಲ್ಲಿ ಗೆದ್ದ ಸಂಸ್ಥೆ 5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.

ಪ್ರವಾಸಿಗರಿಗಾಗಿ ಆಪ್-ಏನೇನಿರಲಿದೆ: ಬೆಂಗಳೂರಿಗೆ ಆಗಮಿಸುತ್ತಿರುವ ಪ್ರವಾಸಿಗರಿಗೆ ಎಲ್ಲ ಮಾಹಿತಿ ನೀಡುವ ಮೊಬೈಲ್ ಆಪ್ ಸಿದ್ಧವಾಗಿದೆ. ಅಪ್ಲಿಕೇಷನ್ ನಲ್ಲಿ ಬೆಂಗಳೂರಿನ ಪ್ರವಾಸಿತಾಣಗಳ ಮಾಹಿತಿ ಇರಲಿದೆ. ಕಬ್ಬನ್

ಪಾರ್ಕ್ ಮಾರ್ಗ, ಲಾಲ್ ಬಾಗ್ ಪಥ, ದೇವಸ್ಥಾನ ಪಥ, ಬಬ್ ಪಥ ಹೀಗೆ ಪ್ರವಾಸಿಗರಿಗೆ ಆಸಕ್ತಿ ಇರುವ ವಿಷಯದಲ್ಲಿ ಸಂಚರಿಸಲು ಮಾಹಿತಿ ನೀಡಲಾಗುತ್ತದೆ.

ಅವಶ್ಯಕತೆಯಿದ್ದವರು ಅಪ್ಲಿಕೇನ್ ಮೂಲಕವೇ ಕ್ಯಾಬ್, ಬಸ್ ಬುಕ್ ಮಾಡಿ ಸುತ್ತಾಡಬಹುದು. ಆಸ್ಪತ್ರೆಗಳು, ಮೆಟ್ರೋ ನಿಲ್ದಾಣಗಳು, ಬಿಎಂಟಿಸಿ ಬಸ್ ಸಮಯ ಬೆಂಗಳೂರಿನಲ್ಲಿ ದಿನಪೂರ್ತಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Brand Bengaluru logo and app for tourists to be launched at Bengaluru event on Sunday 24th Dec 2018. The APP will give information about various activities in the city and will include details of eight circuits, including Cubbon park, Lalbagh, pub, food and heritage, IT BT minister Priyanka Kharge said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ