ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕದಲ್ಲಿ ಮುಸ್ಲಿಂ ಎಂದು ಭಾವಿಸಿ ಸಿಖ್ ವ್ಯಕ್ತಿಗೆ ನಿಂದನೆ

ಮುಸ್ಲಿಂ ಎಂದು ಭಾವಿಸಿ ಭಾರತ ಮೂಲದ ಸಿಖ್ ಸಮುದಾಯದ ವಿದ್ಯಾರ್ಥಿಯೊಬ್ಬನನ್ನು ನಿಂದಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

By Prithviraj
|
Google Oneindia Kannada News

ಬೋಸ್ಟನ್, ನವೆಂಬರ್, 21: ಇಲ್ಲಿಯ ಪ್ರತಿಷ್ಠಿತ ಹಾರ್ವಡ್ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿಖ್ ಸಮುದಾಯದ 22 ವರ್ಷದ ವಿದ್ಯಾರ್ಥಿಯೊಬ್ಬನನ್ನು ಮುಸ್ಲಿಂ ಎಂದು ಭಾವಿಸಿ ನಿಂದಿಸಿರುವ ಘಟನೆ ನಡೆದಿದೆ.

ವಿದ್ಯಾರ್ಥಿಯು ಕಾಲೇಜು ಸಮೀಪದಲ್ಲೇ ಇದ್ದ ಅಂಗಂಡಿಯೊಂದರಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ವಿದ್ಯಾರ್ಥಿಯನ್ನು ನಿಂದಿಸಲಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲವು ಸಾಧಿಸಿದ ನಂತರ ಅಮೆರಿಕದಾದ್ಯಂತ 200ಕ್ಕೂ ಹೆಚ್ಚು ಜನಾಂಗೀಯ ದ್ವೇಷದ ಹಲ್ಲೆಗಳು ನಡೆದಿವೆ ಎಂದು ವರದಿಗಳು ಪ್ರಕಟವಾಗಿವೆ.

Sikh youth mistaken for Muslim, abused at US store

ಭಾರತ ಮೂಲದ ಹರ್ಮನ್ ಸಿಂಗ್ ಎಂಬ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಇಲ್ಲಿಯ ಮಸ್ಸಾಚುಟ್ಸ್, ಕೇಂಬ್ರಿಡ್ಜ್ ಪ್ರದೇಶದಲ್ಲಿರುವ ಸೂಪರ್ ಮಾರ್ಕೆಟ್ ವೊಂದರಲ್ಲಿ ಶಾಪಿಂಗ್ ಮಾಡುತ್ತಾ ತಾಯಿಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದ.

ಈ ವೇಳೆ ವ್ಯಕ್ತಿಯೊಬ್ಬ ಬಂದು "ನೋಡು ಅವನು ಮುಸ್ಲಿಂನಂತೆ ಕಾಣುತ್ತಾನೆ" ಎಂದು ಸ್ಟೋರ್ ನಿರ್ವಾಹಕನಿಗೆ ತಿಳಿಸಿದ್ದಾನೆ.

ಅಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ, ಸ್ಟೋರ್ ನಲ್ಲಿ ವಸ್ತುಗಳನ್ನು ಕೊಳ್ಳಲು ಹೋದ ಕಡೆ ಎಲ್ಲಾ ವಿದ್ಯಾರ್ಥಿಯನ್ನು ಹಿಂಬಾಲಿಸಿದ್ದಾನೆ. "ನಿನ್ನ ಮೇಲೆ ಅನುಮಾನ ಮೂಡುತ್ತಿದೆ, ನೀನು ಯಾರು, ಎಲ್ಲಿಂದ ಬಂದಿರುವೆ ಇಲ್ಲಿ ಏನು ಮಾಡುತ್ತಿರುವೆ" ಎಂದು ನನ್ನನ್ನು ಅಧಿಕಾರ ಧ್ವನಿಯಲ್ಲಿ ಪ್ರಶ್ನಿಸಿದ್ದಾನೆ.

ಅಷ್ಟೇ ಅಲ್ಲದೆ "ನಿನ್ನಿಂದ ದೂರವಿದ್ದು ಮಾತನಾಡುವುದು ಒಳ್ಳೆಯದು" ಎಂದು ಆ ವ್ಯಕ್ತಿ ನನ್ನಿಂದ ಎರಡು ಮೂರು ಇಂಚುಗಳಷ್ಟು ದೂರ ನಿಂತು ಮಾತನಾಡಿ ನನ್ನನ್ನು ಶಂಕೆಯಿಂದ ನೋಡಿ ನಿಂದಿಸಿದ್ದಾನೆ.

ನನ್ನ ಜತೆ ಆ ವ್ಯಕ್ತಿ ಮಾತನಾಡುತ್ತಿದ್ದ ಸಂಭಾಷಣೆಯನ್ನು ನನ್ನ ತಾಯಿಯೂ ಸಹ ಫೋನ್ ನಲ್ಲಿ ಕೇಳಿಸಿಕೊಳ್ಳುತ್ತಿದ್ದರು. ಕೂಡಲೇ ಆ ಶಾಪ್ ಬಿಟ್ಟು ಹೊರಹೋಗುವಂತೆ ಸೂಚಿಸಿದ್ದರು, ಎಂದು ಹಲ್ಲೆಗೊಳಗಾದ ಹರ್ಮನ್ ಸಿಂಗ್ ಇಲ್ಲಿಯ ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

English summary
A 22-year-old Sikh, studying at the prestigious Harvard Law School, was allegedly abused and harassed at a store near the campus by a man who mistook him for a Muslim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X