ಪೊಲೀಸರ ಮುಷ್ಕರ ಬೆಂಬಲಿಸಿ ಬೆಂಗಳೂರಲ್ಲಿ ಸಹಿಸಂಗ್ರಹ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜೂ, 2 : ಸರಕಾರದ ಅಣತಿಯನ್ನು ಧಿಕ್ಕರಿಸಿ ಜೂನ್ 4ರಂದು ತಮ್ಮ ಹಕ್ಕಿಗಾಗಿ ಮುಷ್ಕರ ಹೂಡುತ್ತಿರುವ ಕರ್ನಾಟಕದ ಪೊಲೀಸ್ ಸಿಬ್ಬಂದಿ ಪರವಾಗಿ ಬೆಂಗಳೂರಿನಲ್ಲಿ ಗುರುವಾರ ನಾನಾ ಸಂಘಟನೆಗಳಿಂದ ಸಹಿ ಸಂಗ್ರಹ ಮಾಡಲಾಯಿತು.

ವಿಶ್ವ ವಾಹನ ಚಾಲಕರ ಮಹಾ ಒಕ್ಕೂಟದ ರಾಜ್ಯದ 105 ಶಾಖೆಗಳಿಂದ, ಖಾಸಗಿ ಹಾಗೂ ಸರಕಾರಿ ವಾಹನ ಚಾಲಕರಿಂದ 1 ಲಕ್ಷ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಗುರುವಾರ ಬೆಳಿಗ್ಗೆ 10.30ಕ್ಕೆ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ಸುಮಾರು 3 ದಶಕಗಳ ಕಾಲದಿಂದ ನ್ಯಾಯಯುತ, ಸಂವಿಧಾನಬದ್ಧ ಹಕ್ಕುಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಗಿದೆ. ಸುಮಾರು 28 ಸಾವಿರ ಪೊಲೀಸ್ ಹುದ್ದೆಗಳು ಖಾಲಿಯಿದ್ದು, ಹೊಸ ನೇಮಕಾತಿ ಮಾಡಿಕೊಳ್ಳದೆ, ಇರುವ ಪೊಲೀಸ್ ಸಿಬ್ಬಂದಿಯಿಂದಲೇ ದುಡಿಸಿಕೊಳ್ಳುತ್ತಿರುವುದು ಅಮಾನವೀಯ ಕೃತ್ಯವಾಗಿದೆ ಎಂಬ ಆಕ್ರೋಶ ಈ ಸಂದರ್ಭದಲ್ಲಿ ವ್ಯಕ್ತವಾಯಿತು. [ಶಶಿಧರ್ ಬಂಧನದಿಂದ ಪೊಲೀಸರ ಪ್ರತಿಭಟನೆಗೆ ಹಿನ್ನಡೆ?]

Signature collection in support of police protest

ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ

* ಗಲಾಟೆ, ಘರ್ಷಣೆಯ ಸಂದರ್ಭದಲ್ಲಿ ಸಾವನ್ನಪ್ಪಿದ ಕಾರ್ಯನಿರತ ಪೊಲೀಸರ ಕುಟುಂಬಕ್ಕೆ ಕನಿಷ್ಠ ಒಂದು ಕೋಟಿ ರೂ. ಪರಿಹಾರ ನೀಡುವುದು. ಅಲ್ಲದೇ ಗಾಯಗೊಂಡ ಪೊಲೀಸರಿಗೆ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸುವುದು.

* ವರ್ಗಾವಣೆ ಕೌನ್ಸಿಲಿಂಗ್ ಮೂಲಕ ಮಾತ್ರ ಮಾಡುವುದು ಹಾಗೂ ಪೊಲೀಸರಿಗೆ ವಾರಕ್ಕೊಮ್ಮೆ ಕಡ್ಡಾಯ ರಜೆ ನೀಡುವುದು.

* ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಪೊಲೀಸರಿಗೂ ಮನೆ ನಿರ್ಮಿಸಿಕೊಡಬೇಕು. [ಪ್ರತಿಭಟನೆಗೆ ಮುಂದಾದ ಪೊಲೀಸರ 31 ಬೇಡಿಕೆಗಳು]

* ಪೊಲೀಸರ ಮೇಲೆ ಮೇಲಾಧಿಕಾರಿಗಳ ಕಿರುಕುಳ, ದೌರ್ಜನ್ಯಕ್ಕೆ ಕಡಿವಾಣ ಬೀಳಬೇಕು.

* ಪೊಲೀಸರಿಗೆ ವೇತನ ಪರಿಷ್ಕರಣೆ, ಹೊರರಾಜ್ಯಗಳ ಪೊಲೀಸರ ವೇತನ, ಭತ್ಯೆ ಇತ್ಯಾದಿ ಸೌಲಭ್ಯಗಳಿಗೆ ಒತ್ತಾಯ.

* ದುಡಿಮೆಯ ಸಮಯವನ್ನು 8 ಗಂಟೆಗೆ ಸೀಮಿತಗೊಳಿಸಿ ಹೆಚ್ಚುವರಿ ಅವಧಿಗೆ ಹೆಚ್ಚುವರಿ ಭತ್ಯೆ ನಿಗದಿಪಡಿಸುವುದು.

* ಪೊಲೀಸರಿಗೆ ವಸತಿಗೃಹ ನಿರ್ಮಾಣದ ಜೊತೆಗೆ ಹಳೆಯ ಕಟ್ಟಡಗಳನ್ನು ನವೀಕರಿಸಬೇಕು.

* ವಾರಕ್ಕೊಮ್ಮೆಯಾದರೂ ಕರ್ತವ್ಯನಿರತ ಪೊಲೀಸರಿಗೆ ಆರೋಗ್ಯ ತಪಾಸಣೆ ನಡೆಸಬೇಕು. [ಪೊಲೀಸರ ಸಮಸ್ಯೆಗೆ ಕಿವಿಗೊಡಿ, ಸರ್ಕಾರಕ್ಕೆ ಆಪ್ ಸಲಹೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka police is resorting to protest on June 4, Saturday demanding pay (salary) hike and other amenities. In support of protest by police various organizations are collecting signatures in Bengaluru.
Please Wait while comments are loading...