ಹುತಾತ್ಮ ಯೋಧರ ಸ್ಮರಣೆ ಬದಲು ಕಾಂಗ್ರೆಸ್ ತುತ್ತೂರಿ, ಏನ್ರೀ ಸಿಎಂ ಇದೆಲ್ಲ?

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 17: ಯುದ್ಧದ ಸ್ಮರಣೆಯಲ್ಲಿ ನಡೆದ ಕಾರ್ಯಕ್ರಮವು ರಾಜಕೀಯ ಸಮಾರಂಭದಂತೆ ಆಗಿದ್ದಕ್ಕೆ ಬೆಂಗಳೂರಿನಲ್ಲಿ ಭಾರತೀಯ ಸೇನೆ ಹಾಗೂ ವಾಯು ದಳದ ನಿವೃತ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿರುವ ಹಳೆ ಸ್ಮಾರಕವನ್ನು ಮಂಗಳವಾರ ಮತ್ತೆ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ನಿವೃತ್ತ ಸೇನಾ ಯೋಧರನ್ನು ಆಹ್ವಾನಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಆಹ್ವಾನಿತರಾಗಿದ್ದರು.

ಕಾರ್ಯಕ್ರಮವು ಒಂದು ಗಂಟೆ ತಡವಾಗಿದ್ದರಿಂದ ನಿವೃತ್ತ ಸೇನಾ ಯೋಧರು ಮುಜುಗರಕ್ಕೀಡಾದರು. ನಿವೃತ್ತ ಕರ್ನಲ್ ಕೆಡಿ ಶೆಲ್ಲಿ ಎಎನ್ ಐ ಸುದ್ದಿ ಮಾಧ್ಯಮದ ಜತೆ ಮಾತನಾಡಿ, ಹಲವರು ದೂರದ ಊರುಗಳಿಂದ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಬಂದಿದ್ದರು. ಯುದ್ಧ ಸ್ಮರಣೆ ಅಥವಾ ಹುತಾತ್ಮರ ಅಂತ್ಯಕ್ರಿಯೆ ನಮ್ಮ ಪಾಲಿಗೆ ತುಂಬ ಪವಿತ್ರವಾದದ್ದು ಎಂದಿದ್ದಾರೆ.[ಬಡೇರಿಯಾ ಬಂಧನಕ್ಕೂ, ರಾಜ್ಯಸರ್ಕಾರಕ್ಕೂ ಸಂಬಂಧವಿಲ್ಲ-ಸಿದ್ದರಾಮಯ್ಯ]

Siddaramiah insults defence veterans, keeps them waiting for an hour

ಬೆಳಗ್ಗೆ ಹತ್ತು ಮೂವತ್ತಕ್ಕೆ ಕಾರ್ಯಕ್ರಮ ಇತ್ತು ನಮಗೆ ಮಾಹಿತಿ ಇತ್ತು. ಅದರ ಪ್ರಕಾರ ಇಲ್ಲಿದ್ದೆವು. ವೇದಿಕೆ ಮೇಲೆ ಮಾತನಾಡಲು ಆರಂಭಿಸಿದ ಸ್ಥಳೀಯ ಮುಖಂಡರು ಸರಕಾರದ ಯೋಜನೆಗಳು, ಚಟುವಟಿಕೆ ಬಗ್ಗೆ ಮಾತನಾಡಲು ಆರಂಭಿಸಿದಾಗ ಮದ್ರಾಸ್ ರೆಜಿಮೆಂಟ್ ನ ಹವಾಲ್ದಾರರಾಗಿದ್ದ ಗುಮ್ಕಾರ್ ಅವರಿಗೆ ತೀರಾ ಸಿಟ್ಟು ಬಂತು. ಅಂಥ ವಿಚಾರ ಹೇಳೋಕೆ ಇಂಥ ವೇದಿಕೆ ಬೇಕೆ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅದೇನು ಸಮಯ ತಿಳಿಸಿದ್ದರೋ ಅವರು ಮಧಾಹ್ನ ಹನ್ನೆರಡರ ಹೊತ್ತಿಗೆ ಬಂದರು. ಅವರ ಜತೆ ಬಾಡಿಗಾರ್ಡ್ ಗಳು, ಸ್ಥಳೀಯ ಮುಖಂಡರು ಬಂದರು. ಯುದ್ಧ ಸ್ಮರಣೆ ಬಗ್ಗೆಗಾಗಲೀ ಅಥವಾ ಹುತಾತ್ಮ ಯೋಧರ ಬಗ್ಗೆಯಾಗಲೀ ಏನೂ ಮಾತನಾಡಲಿಲ್ಲ. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಏನೇನೂ ಗೊತ್ತಿರಲಿಲ್ಲ ಅನ್ನಿಸುವಂತಿತ್ತು ಸ್ಥಿತಿ ಎಂದು ಶೆಲ್ಲಿ ಹೇಳಿದ್ದಾರೆ.[ಓದುಗರು ಕೇಳಿರುವ ಪ್ರಶ್ನೆಗಳಿಗೆ ರಮ್ಯಾ ಉತ್ತರಿಸುವರೆ?]

ಯುದ್ಧ ಸ್ಮಾರಕಕ್ಕೆ ನಾನು ಗೌರವ ನೀಡಲಿಲ್ಲವೇ? ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ನಿವೃತ್ತ ಯೋಧರು, ಕಾರ್ಯಕ್ರಮದ ಉದ್ದೇಶವೇ ಮೂಲೆಗುಂಪಾಗಿದ್ದಕ್ಕೆ ಅಸಮಾಧಾನ ತೋಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The oldest war memorial at Brigade Road here was to be re-inaugurated Tuesday for which veterans were invited and Chief Minister Siddaramiah was invited as the chief guest. Indian Army and Air Force veterans have expressed their dejection, saying that they felt insulted when a function related to war memorial, turned into a political event.
Please Wait while comments are loading...