ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲು ಜನರಿಗೆ 'ನಿಯತ್' ತೋರಿಸಿ ಎಂದು ಮೋದಿಗೆ ಸಿದ್ದು ತಾಕೀತು

|
Google Oneindia Kannada News

ಬೆಂಗಳೂರು , ಜನವರಿ 15: ಬಿಜೆಪಿ ಶಾಸಕರು ಗುರುಗ್ರಾಮಕ್ಕೆ ತೆರಳಿ ಠಿಕಾಣಿ ಹೂಡಿರುವುದು ಮತ್ತು ಕಾಂಗ್ರೆಸ್‌ನ ಕೆಲವು ಶಾಸಕರು ಮುಂಬೈಗೆ ತೆರಳುವ ಸಮ್ಮಿಶ್ರ ಸರ್ಕಾರಕ್ಕೆ ಸಂಚಕಾರ ತರುವ ಭೀತಿ ಮೂಡಿಸಿದೆ.

ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಕೈಹಾಕುವ ಮೂಲಕ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಮಾರ್ಗದಲ್ಲಿ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಎಚ್.ಡಿ.ಕುಮಾರಸ್ವಾಮಿ ಸಂಪುಟದ ನಾಲ್ವರು ಸಚಿವರ ರಾಜೀನಾಮೆ? ಎಚ್.ಡಿ.ಕುಮಾರಸ್ವಾಮಿ ಸಂಪುಟದ ನಾಲ್ವರು ಸಚಿವರ ರಾಜೀನಾಮೆ?

ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರವಾಗಿ ಹರಿಹಾಯುತ್ತಿರುವ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಟ್ವಿಟ್ಟರ್‌ನಲ್ಲಿ ಪ್ರಧಾನಿ ಅವರ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ.

Siddaramaiah tweet against Narendra Modi BJP Karnataka twitter reaction operation kamala

ಮೋದಿ ಅವರನ್ನು ವ್ಯಂಗ್ಯವಾಡಿರುವ ಸಿದ್ದರಾಮಯ್ಯ, 'ಸಾಫ್ ನಿಯತ್, ಸಹಿ ವಿಕಾಸ್' (ಸ್ವಚ್ಛ ಉದ್ದೇಶ, ಸೂಕ್ತ ಅಭಿವೃದ್ಧಿ) ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ಲೇವಡಿ ಮಾಡಿದ್ದಾರೆ.

ಮಿಸ್ಟರ್ ಸಾಫ್ ನಿಯತ್ ನರೇಂದ್ರ ಮೋದಿ,
'ನಿಮ್ಮ ನಾಚಿಕೆಗೇಡಿನ ರಾಜ್ಯ ಬಿಜೆಪಿ ನಾಯಕರು ಪ್ರಜಾಪ್ರಭುತ್ವದೆಡೆಗಿನ 'ಸ್ವಚ್ಛ ಉದ್ದೇಶ'ದತ್ತ ನಡೆದಿರುವ ಸರ್ಕಾರವನ್ನು ಅಸ್ತಿರಗೊಳಿಸಲು ಅವಕಾಶ ನೀಡುತ್ತಿದ್ದೀರಾ?

ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್

ನಿಮ್ಮ ಪ್ರಚಾರ ಘೋಷವಾಕ್ಯಗಳು ನಿಮ್ಮ ವಾಸ್ತವವಾದ 'ನಿಯತ್' ಮತ್ತು ನಿಮ್ಮ 'ಸಹಿ ವಿಕಾಸ್'ಗಳು ರೆಸಾರ್ಟ್‌ಗಳನ್ನು ಅಭಿವೃದ್ಧಿಪಡಿಸುವುದರ ಆಚೆ ಹೋಗಬೇಕು.

ಮೊದಲು ನಿಮ್ಮ ನಿಯತ್‌ಅನ್ನು ಜನರಿಗೆ ತೋರಿಸಿ' ಎಂದು ಸಿದ್ದರಾಮಯ್ಯ, ಮೋದಿ ಅವರತ್ತ ವಾಗ್ದಾಳಿ ನಡೆಸಿದ್ದಾರೆ.

Operation ಕಮಲ ಯಶಸ್ಸಾಗಲು ಸಾಧ್ಯವಿಲ್ಲ ಅನ್ನೋದಿಕ್ಕೆ ಇಲ್ಲಿವೆ 4 ಕಾರಣಗಳುOperation ಕಮಲ ಯಶಸ್ಸಾಗಲು ಸಾಧ್ಯವಿಲ್ಲ ಅನ್ನೋದಿಕ್ಕೆ ಇಲ್ಲಿವೆ 4 ಕಾರಣಗಳು

ಇದಕ್ಕೆ ಅಷ್ಟೇ ಖಾರವಾದ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿಯ ಐಟಿ ಘಟಕ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಕರ್ನಾಟಕದ ಜನರು ತಿರಸ್ಕರಿಸಿದ ಬಳಿಕವೂ ಸರ್ಕಾರ ರಚನೆ ಮಾಡಿರುವುದು ನಾಚಿಕೆಗೇಡಿನ ಸಂಗತಿ.

ಒಡೆದುಹೋದ ಸರ್ಕಾರದ ಫಲಿತಾಂಶವೇ ನಿಮ್ಮ ಅಪವಿತ್ರ ಮೈತ್ರಿಯಲ್ಲಿ ಇರುವ ಸ್ವಚ್ಛತೆ ಮತ್ತು ಅಭಿವೃದ್ಧಿಯ ಕೊರತೆ.

ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ನಿಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಮತ್ತು ಮೋದಿ ಅವರನ್ನು ದೂಷಿಸುವುದನ್ನು ನಿಲ್ಲಿಸಿ. ನಿಮ್ಮ ದುರಾಶೆಯೇ ಕುಮಾರಸ್ವಾಮಿ ಸರ್ಕಾರವನ್ನು ದುರ್ಬಲಗೊಳಿಸಿದೆ ಎಂದು ಅದು ಆರೋಪಿಸಿದೆ.

English summary
Former Chief Minister Siddaramaiah criticised Narendra Modi accusing indirectly supporting operation kamala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X