ಇಂಗ್ಲಿಷ್-ಕನ್ನಡ ತಂತ್ರಜ್ಞಾನ ಪದವಿವರಣ ಕೋಶ ಬಿಡುಗಡೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 01: ಕಂಪ್ಯೂಟರ್ ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ 300ಕ್ಕೂ ಹೆಚ್ಚು ಇಂಗ್ಲಿಷ್ ಪದಗಳ ಕನ್ನಡ ವಿವರಣೆವುಳ್ಳ ಇಂಗ್ಲಿಷ್-ಕನ್ನಡ ತಂತ್ರಜ್ಞಾನ ಪದವಿವರಣ ಕೋಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದಾರೆ.

ಈ ಆನ್‌ಲೈನ್ ಕೋಶದ ಮುದ್ರಿತ ರೂಪವಾದ 'ಕಂಪ್ಯೂಟರ್ - ತಂತ್ರಜ್ಞಾನ ಪದವಿವರಣ ಕೋಶ'ವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದೆ. ಇದು ಪಿಡಿಎಫ್ ಹಾಗೂ ಆನ್ ಲೈನ್ ನಲ್ಲೂ ಲಭ್ಯವಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಇಜ್ಞಾನ ಟ್ರಸ್ಟ್ ರೂಪಿಸಿರುವ 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ' ಕೃತಿ ಬಿಡುಗಡೆಯಾಗಿದೆ.

ವಿಧಾನಸೌಧದಲ್ಲಿ ಅಕ್ಟೋಬರ್ 31ರಂದು ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಈ ಕೃತಿಯ ಲೋಕಾರ್ಪಣೆ ನೆರವೇರಿಸಿದರು.ಈ ಬಗ್ಗೆ ಇಜ್ಞಾನ ಟ್ರಸ್ಟ್ ನ ಲೇಖಕ ಟಿ.ಜಿ ಶ್ರೀನಿಧಿ ಅವರು ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದು, ಇದರ ಸಂಗ್ರಹ ಸಾರ ಇಲ್ಲಿ ನೀಡಲಾಗಿದೆ.

English -Kannada technology word reference dictionary

ಕಂಪ್ಯೂಟರ್ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ 300ಕ್ಕೂ ಹೆಚ್ಚು ಪರಿಕಲ್ಪನೆಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವ ಈ ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದೆ.

ಇಂಗ್ಲಿಷ್ ಪದದ ಕನ್ನಡ ಉಚ್ಚಾರಣೆ, ಅರ್ಥ ಹಾಗೂ ಸಂಕ್ಷಿಪ್ತ ವಿವರಣೆಯನ್ನು ನೀಡುವುದು ಈ ಪುಸ್ತಕದ ವೈಶಿಷ್ಟ್ಯ. ಈ ಪುಸ್ತಕವನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ (CC BY-NC-ND 4.0) ಪ್ರಕಟಿಸಲಾಗಿದ್ದು ವಾಣಿಜ್ಯೇತರ ಉದ್ದೇಶಗಳಿಗೆ ಇದನ್ನು ಮುಕ್ತವಾಗಿ ಬಳಸಿಕೊಳ್ಳಬಹುದಾಗಿದೆ.

ಈ ಕೋಶದ ಆನ್‌ಲೈನ್ ಆವೃತ್ತಿ ಕೂಡ www.epada.in ತಾಣದಲ್ಲಿ ಲಭ್ಯವಿದೆ. ಅಲ್ಲಿ ಈ ಪುಸ್ತಕದ ಪಿಡಿಎಫ್ ರೂಪವನ್ನೂ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಕಾರ್ಯದರ್ಶಿ ಡಾ. ಮುರಳಿಧರ ಅವರೊಡನೆ ಹಿರಿಯ ಬರಹಗಾರರಾದ ನಾಗೇಶ ಹೆಗಡೆ, ಜಗನ್ನಾಥ ಪ್ರಕಾಶ್, ಟಿ. ಎಸ್. ಗೋಪಾಲ್ ಹಾಗೂ ಉದಯ ಶಂಕರ ಪುರಾಣಿಕ ಈ ಕೃತಿಯ ಸಂಪಾದಕ ಮಂಡಲಿಯಲ್ಲಿದ್ದು ಮಾರ್ಗದರ್ಶನ ನೀಡಿದ್ದಾರೆ.

ಈ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸುವಲ್ಲಿ ಅಧ್ಯಕ್ಷರ ಆಪ್ತಕಾರ್ಯದರ್ಶಿಗಳಾಗಿದ್ದ ಡಾ. ಕೆ. ಪುಟ್ಟಸ್ವಾಮಿ, ಇಜ್ಞಾನ ಟ್ರಸ್ಟಿಗಳಾದ ಡಾ. ಎಚ್. ಆರ್. ಅಪ್ಪಣ್ಣಯ್ಯ, ಬಿ. ಎಸ್. ವಿಶ್ವನಾಥ ಹಾಗೂ ಎನ್. ಜಿ. ಚೇತನ್ ಅವರ ಬೆಂಬಲವೂ ಮಹತ್ವದ ಪಾತ್ರ ವಹಿಸಿದೆ.

352 ಪುಟಗಳ ಈ ಕೃತಿಯ ಮುಖಬೆಲೆ ರೂ. 100. ಪ್ರತಿಗಳು ಸದ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ (ವಿಧಾನಸೌಧ, ಬೆಂಗಳೂರು) ಲಭ್ಯವಿದ್ದು ಇತರೆಡೆಗಳಲ್ಲೂ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah released English -Kannada technology word reference dictionary designed by Kannada development authority and ejnana trust.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ