ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆ ಆಗದಿರಲಿ: ಸಿದ್ದರಾಮಯ್ಯ ಟ್ವೀಟ್

|
Google Oneindia Kannada News

Recommended Video

ಸಿದ್ದರಾಮಯ್ಯ ತಮ್ಮ ಮಗನ ಸಾವಿನ ಬಗ್ಗೆ ಜನಾರ್ಧನ ರೆಡ್ಡಿ ಕೊಟ್ಟ ಹೇಳಿಕೆಗೆ ಹೇಳಿದ್ದು ಹೀಗೆ | Oneindia Kannada

ಬೆಂಗಳೂರು, ಅಕ್ಟೋಬರ್ 30: ಮಾಜಿ ಸಚಿವ ಜನಾರ್ದನರೆಡ್ಡಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ವಯಕ್ತಿಕ ವಾಗ್ದಾಳಿ ತಾರಕಕ್ಕೇರಿದ್ದು, ಪರಸ್ಪರ ವಯಕ್ತಿಕ ದೋಷಾರೋಪಣೆ ನಂತರ ಇದೀಗ ಸಿದ್ದರಾಮಯ್ಯ ತಮ್ಮ ಪುತ್ರನ ಸಾವಿನ ಬಗೆಗೆ ನೀಡಿದ್ದ ಹೇಳಿಕೆ ಕುರಿತಂತೆ ಜನಾರ್ದನ ರೆಡ್ಡಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲು ಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲು

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ನನ್ನ ಮಗನ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ಮಾತನಾಡಿದ್ದಾರೆ, ನಾನು ಮಾಡಿದ ಪಾಪದಿಂದಲೇ ನನ್ನ ಮಗನ ಸಾವಾಯಿತು ಎಂದಿದ್ದಾರೆ, ಆದರೆ ಜನಾರ್ದನ ರೆಡ್ಡಿ ಪಾಪಗಳಿಗೆ ದೇವರು ಅವರ ಮಕ್ಕಳಿಗೆ ಶಿಕ್ಷೆ ನೀಡದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಮೂಲಕ ಜನಾರ್ದನ ರೆಡ್ಡಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.

ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್! ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್!

ಕಳೆದ ಮೂರು ದಿನಗಳಿಂದ ಸಿದ್ದರಾಮಯ್ಯ ಹಾಅಗೂ ಜನಾರ್ದನ ರೆಡ್ಡಿ ನಡುವೆ ಪರಸ್ಪರ ವಾದ-ಪ್ರತಿವಾದ ನಡೆದಿದ್ದು ಮಂಗಳವಾರ ಬೆಳಗ್ಗೆಯಷ್ಟೇ ಚಿತ್ರದುರ್ಗ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿ ಜನಾರ್ದನ ರೆಡ್ಡಿಯವರು ಸಿದ್ದರಾಮಯ್ಯ ಮಾಡಿದ ಪಾಪಕೃತ್ಯಗಳಿಂದಲೇ ಅವರ ಪುತ್ರನ ಸಾವು ಸಂಭವಿಸಿತ್ತು ಎಂದು ಅವರು ಟೀಕಿಸಿದ್ದರು.

ನಿಮ್ಮ ಬಗ್ಗೆ ನಿಮ್ಮ ಸಂಸದರೇ ಬರೆದ ಪುಸ್ತಕ ಓದಿ ಜನಾರ್ದನ ರೆಡ್ಡಿ: ಸಿದ್ದರಾಮಯ್ಯ ಬಿಟ್ಟ ಬಾಣ ನಿಮ್ಮ ಬಗ್ಗೆ ನಿಮ್ಮ ಸಂಸದರೇ ಬರೆದ ಪುಸ್ತಕ ಓದಿ ಜನಾರ್ದನ ರೆಡ್ಡಿ: ಸಿದ್ದರಾಮಯ್ಯ ಬಿಟ್ಟ ಬಾಣ

Siddaramaiah prays God dont punish Reddys child for his sins

ಹೀಗಾಗಿ ಅದಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ, ಜನಾರ್ದನ ರೆಡ್ಡಿ ಮಾಡಿರುವ ಪಾಪಗಳಿಗೆ ಮಕ್ಕಳಿಗೆ ಶಿಕ್ಷೆಯಾಗದಿರಲಿ ಎಂದು ಪ್ರಾರ್ಥಿಸುವ ಮೂಲಕ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಆದರೆ ಇದಕ್ಕೆ ಜನಾರ್ದನ ರೆಡ್ಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

English summary
Former chief minister Siddaramaiah has tweeted that he would wish to pray god shouldn't be punished Janardhan Reddy's children for latter's sins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X