ಒತ್ತುವರಿ ತೆರವು, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ಸಿಎಂ

Posted By:
Subscribe to Oneindia Kannada

ಬೆಂಗಳೂರು, ಸೆ. 15: ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮನೆ, ಆಸ್ಪತ್ರೆ, ಅಪಾರ್ಟ್ ಮೆಂಟ್ ಕಟ್ಟಿಸಿಕೊಂಡಿರುವವರು ಯಾರೇ ಆಗಲಿ ಯೋಚನೆ ಮಾಡಬೇಡಿ, ಯಾರ ಮುಲಾಜೂ ಇಲ್ಲದೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ರಾಜರಾಜೇಶ್ವರಿ ನಗರ ವಲಯದ ಐಡಿಯಲ್ಸ್ ಹೋಮ್ಸ್ ಬಡಾವಣೆಯಲ್ಲಿರುವ ನಟ ದರ್ಶನ್ ತೂಗುದೀಪ ಮನೆ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆ ಒತ್ತುವರಿ ತೆರವಿಗೆ ಸಿದ್ಧವಾಗಿದೆ. ದರ್ಶನ್ ಮನೆಯಿಂದ 2 ಎನ್ ಎಸ್ ಆಸ್ಪತ್ರೆಯಿಂದ 22 ಗುಂಟೆ ರಾಜಕಾಲುವೆ ಒತ್ತುವರಿಯಾಗಿದೆ ಎಂದು ವರದಿ ಬಂದಿದೆ. ಈ ಬಗ್ಗೆ ಬಿಬಿಎಂಪಿ ಏನು ಕ್ರಮ ಜರುಗಿಸಲಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ನೀಡಿದ ಉತ್ತರ ಹೀಗಿದೆ:[ರಾಜಕಾಲುವೆ ಜಾಗದಲ್ಲೇ ದರ್ಶನ್ ತೂಗುದೀಪ ಅವರ ಮನೆ!]

CM Siddaramaiah on RajaKaluve encroachment BBMP Demolition Drive

ರಾಜಕಾಲುವೆಗೆ ಅಡ್ಡಿಯಾದರೆ ಒತ್ತುವರಿ ತೆರವು: ರಾಜಕಾಲುವೆಯಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿ, ನೀರು ಹರಿಯಲು ಅಡ್ಡಿಯಾದರೆ ಒತ್ತುವರಿ ತೆರವುಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರಲ್ಲಿ ಬಡವರು-ಶ್ರೀಮಂತರು, ದುರ್ಬಲರು ಅಥವಾ ಬಲಾಢ್ಯರು ಎಂಬ ತಾರತಮ್ಯವಿಲ್ಲ. ಅಂತೆಯೇ, ಯಾರ ಮುಲಾಜೂ ಇಲ್ಲದೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದರು.
ಮನೆ ಕಳೆದು ಕೊಂಡ ಅರ್ಹ ಬಡವರಿಗೆ ಮನೆ !
ಒತ್ತುವರಿ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಅತ್ಯಂತ ಅರ್ಹ ಬಡವರಿಗೆ ಮಾನವೀಯತೆಯ ಆಧಾರದ ಮೇರೆಗೆ ಸರ್ಕಾರಿ ಸ್ವಾಮ್ಯದ ವಸತಿ ಸಮುಚ್ಛಯಗಳಲ್ಲಿ ಮನೆ ಒದಗಿಸಲು ಪರಿಶೀಲಿಸಲಾಗುತ್ತಿದೆ ಎಂಬ ಅಂಶವನ್ನು ಮುಖ್ಯಮಂತ್ರಿ ಬಹಿರಂಗಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CM Siddaramaiah said he has directed BBMP officials to not spare anybody – big builders or any commercial properties – encroaching inter-connecting channels, blocking water flow and causing floods.
Please Wait while comments are loading...