ಸಿದ್ದರಾಮಯ್ಯ ಅವರದು ಅಸಡ್ಡೆ ಸರಕಾರ: ಅನಂತ್ ಕುಮಾರ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ನವೆಂಬರ್ 4: ಸಿದ್ದರಾಮಯ್ಯ ಅವರ ಸರಕಾರವನ್ನು ಅಹಂಕಾರ, ಅಸಡ್ಡೆ, ಅಕ್ರಮ ಎಂದು ಮೂರು ಶಬ್ದಗಳಲ್ಲಿ ವಿವರಿಸಬಹುದು. ವಾಚ್ ಪ್ರಕರಣ, ಟಿಪ್ಪು ಜಯಂತಿ, ಸ್ಟೀಲ್ ಬ್ರಿಡ್ಜ್ ಇವೆಲ್ಲಾ ಅವರ ಅಹಂಕಾರಕ್ಕೆ ಕೈಗನ್ನಡಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪ್ರಶಿಕ್ಷಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾವೇರಿ, ಮಹಾದಾಯಿ ಸಮಸ್ಯೆ, ರೈತರ ಆತ್ಮಹತ್ಯೆ, ಲೋಕಾಯುಕ್ತ ಇವೆಲ್ಲಾ ಅಸಡ್ಡೆಗಳಿಗೆ ಉದಾಹರಣೆ. ಇನ್ನು ಅಕ್ರಮಗಳಂತೂ ಸಾಲು ಸಾಲೇ ಇವೆ ಎಂದು ಆರೋಪಿಸಿದರು. 14 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಈಗ ನಾವು ಮತ್ತೆ ಕರ್ನಾಟಕ ಜನತೆಯ ಮುಂದೆ ಹೋಗಬೇಕಾಗಿದೆ. ಇವತ್ತಿನಿಂದ ನಮ್ಮ ವಿಧಾನಸಭಾ ಚುನಾವಣೆಗೆ 15 ತಿಂಗಳು ಮಾತ್ರ ಬಾಕಿ ಇದೆ. 465 ದಿನಗಳ ನಂತರ ನಾವು ಚುನಾವಣೆ ಎದುರಿಸಬೇಕು ಎಂದರು.[ದೇಶ ವಿಭಜಿಸುವವರ ಪಾಲಿಗೆ ಬೆಂಗಳೂರು ಗುರಿ: ಅನಂತಕುಮಾರ್]

Siddaramaiah led government is careless in all aspects

ಪಾಕಿಸ್ತಾನದವರು ನಮ್ಮ ವಿರುದ್ದ ಪರೋಕ್ಷ ಸಮರ ಮಾಡುತ್ತಿದ್ದಾರೆ. ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಸಾರ್ಕ್ ರಾಷ್ಟ್ರಗಳು ಸಮ್ಮತಿಸಿವೆ. ನಮ್ನ ಆತ್ಮರಕ್ಷಣೆಗೆ ನಾವು ಸನ್ನದ್ಧ, ನಮ್ಮ ಸಹನೆಗೆ ಮಿತಿ ಇದೆ ಎಂದು ನಮ್ಮ ವೀರ ಯೋಧರು ಸರ್ಜಿಕಲ್ ಸ್ಟ್ರೈಕ್ ನಲ್ಲಿ ತೋರಿಸಿದ್ದಾರೆ. ಈ ದಾಳಿಯಲ್ಲಿ ನಮ್ಮ ಯಾವುದೇ ಒಬ್ಬ ಯೋಧರಿಗೂ ಏನೂ ಆಗಿಲ್ಲ. ಇಸ್ರೇಲ್ ಕಾರ್ಯಾಚರಣೆಯನ್ನು ಮೀರಿಸುವ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಅಭ್ಯಾಸ ವರ್ಗದಲ್ಲಿ ಐದು ವಿಷಯಗಳ ಚಿಂತನೆಯಾಗಬೇಕು. ಈ ದೇಶದ ಮುಂದಿರುವ ವೈಚಾರಿಕ ಸವಾಲುಗಳು, ಒಂದು ದೇಶ, ಒಂದೇ ಜನ, ಒಂದೇ ಸಂಸ್ಕೃತಿ ಅನ್ನೋದು ಬಿಜೆಪಿ ನೀತಿ. ಆಡಳಿತದ ಸವಾಲು, ಪ್ರಾಮಾಣಿಕ, ಪಾರದರ್ಶಕ ಆಡಳಿತ, ಸಂಘಟನಾತ್ಮಕ ಸವಾಲು. ಚುನಾವಣೆಗೆ ಹೋಗುವಾಗ ಏಕತೆ ಮತ್ತು ಸಕ್ರಿಯತೆ ನಮ್ಮ ಮಂತ್ರವಾಗಬೇಕು. ಬೂತ್ ಮಟ್ಟದಿಂದ ಇದು ಜಾರಿಯಾಗಬೇಕು ಎಂದರು.[ಸ್ಟೀಲ್ ಫ್ಲೈಓವರ್ ವಿರೋಧಿಸಿ ಜಾರ್ಜ್‌ಗೆ ಅನಂತ್ ಪತ್ರ]

Siddaramaiah led government is careless in all aspects

ಬದಲಾವಣೆ ಸವಾಲು-ಜಗತ್ತಿನ ಮತ್ತು ದೇಶದ ರಾಜಕಾರಣ ಬದಲಾಗುತ್ತಿದೆ. 1989ರಿಂದ ಇಲ್ಲಿಯವರೆಗೆ ಬಿಜೆಪಿಯ ಅಭಿವೃದ್ಧಿಯ ಕಾಲ, ಬಿಜೆಪಿ ಲೋಕಸಭೆಯಲ್ಲಿ ನೂರಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಈ ಬದಲಾದ ರಾಜಕಾರಣದಲ್ಲಿ ಮೂರು ಅಂಶಗಳು ಬಹು ಮುಖ್ಯ. ವಿಧಾನಸಭಾ ಚುನಾವಣೆ ಗೆಲುವಿಗೆ ಅಗತ್ಯ. ಇವತ್ತಿನ ರಾಜಕಾರಣ ಸಂವಾದದ ಮೂಲಕ ನಡೆಯುತ್ತಿದೆ.ಟಿವಿ ಚಾನಲ್ ಗಳು, ಮಾಧ್ಯಮಗಳ ಮೂಲಕ ಎಲ್ಲ ವಿಷಯಗಳ ಬಗ್ಗೆ ಸಂವಾದಕ್ಕೆ ಸಿದ್ಧರಾಗಬೇಕು. ಯಾವುದೇ ವಿಷಯದ ಬಗ್ಗೆ ತಕ್ಷಣ ಸಂವೇದಿಸಬೇಕು. ಬದಲಾವಣೆಯಲ್ಲಿ ಭಾಗಿಯಾಗಬೇಕು ಎಂದು ಸಲಹೆ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siddaramaiah led government is careless in all aspects, alleged by central minister Ananth Kumar in Bengaluru.
Please Wait while comments are loading...