ನಾನಾ ಇಲಾಖೆಗಳ ಆರು ಸಾವಿರ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಒಪ್ಪಿಗೆ

Posted By:
Subscribe to Oneindia Kannada

ಬೆಂಗಳೂರು, ಮೇ 20: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗ, ಸಮಾಜ ಕಲ್ಯಾಣ ಇಲಾಖೆಗಳ ವೃಂದ ನೇಮಕಾತಿ ಹಾಗೂ ಡಿ ಗ್ರೂಪ್ ನೌಕರರ ನೇರ ನೇಮಕಾತಿಗೆ ಸರ್ಕಾರ ಮುಂದಾಗಿದೆ.

ಈ ಇಲಾಖೆಗಳಲ್ಲಿ ಅನೇಕರು ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಬಹಳಷ್ಟು ಹುದ್ದೆಗಳು ಖಾಲಿ ಉಳಿದಿದ್ದು ಕಾರ್ಯ ಚಟುವಟಿಕೆ ಅನುಷ್ಠಾನಕ್ಕೆ ಅಡಚಣೆಯಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೃಂದ ನೇಮಕಾತಿ ಮತ್ತು ಡಿ ಗ್ರೂಪ್ ನೇಮಕಾತಿಗೆ ಅನುಮೋದನೆ ನೀಡಲಾಗಿದೆ.

ಅಡುಗೆಯವರು, ಅಡುಗೆ ಸಹಾಯಕರು ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಐದು ಸಾವಿರ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ.[5 ಸಾವಿರ ಡಿ ಗ್ರೂಪ್ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್]

Siddaramaiah gives green signal to fill-up D group vacancies in social welfare department

ಮುಖ್ಯಮಂತ್ರಿಗಳು ನೇರ ನೇಮಕ ಮೂಲಕ ಖಾಲಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನಸೌಧದಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆ ಆಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಯವರು ಈ ಸೂಚನೆ ನೀಡಿದರು.

ಖಾಲಿ ಇರುವ ಹುದ್ದೆಗಳು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರು (3291), ಅಡುಗೆ ಸಹಾಯಕರು (2577 ), ರಾತ್ರಿ ಕಾವಲುಗಾರರು (716 ) ಹಾಗೂ ಜವಾನರು (29 ) ಸೇರಿದಂತೆ 6613 ಹುದ್ದೆಗಳು ಖಾಲಿ ಇವೆ.[ಶೀಘ್ರವೇ 5 ಸಾವಿರ ಸರ್ವೆಯರ್ ಗಳ ನೇಮಕ: ಕಾಗೋಡು]

ವಿದ್ಯಾರ್ಹತೆ: ಈ ಪೈಕಿ ೫ ಸಾವಿರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಗ್ರೂಪ್ ಡಿ ಹುದ್ದೆಗೆ ಎಸ್ಎಸ್ಎಲ್ ಸಿ ವಿದ್ಯಾರ್ಹತೆ ನಿಗಧಿಪಡಿಸಲಾಗಿದೆ. ಎಸ್ಎಸ್ಎಲ್ ಸಿ ವಿದ್ಯಾರ್ಹತೆ ನಿಗಧಿ ಮಾಡಿರುವುದರ ಬಗ್ಗೆ ವಿಧಾನ ಮಂಡಲದ ಉಭಯ ಸದನದಲ್ಲಿ ಚರ್ಚೆ ನಡೆದಿತ್ತು. ಅಂತಿಮವಾಗಿ ಎಸ್ಎಸ್ಎಲ್ ಸಿ ವಿದ್ಯಾರ್ಹತೆ ಆಧಾರದ ಮೇಲೆಯೇ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಸಭೆ ನಿರ್ಧರಿಸಿತು.

ಸಚಿವರಾದ ಆಂಜನೇಯ, ಮಹದೇವಪ್ಪ, ಜಯಚಂದ್ರ ಸೇರಿದಂತೆ ಸಮಾಜ ಕಲ್ಯಾಣ, ಹಣಕಾಸು ಮತ್ತು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah gives green signal to fill-up of over 6000 D group vacancies in Social Welfare, Backward development and Minorities development departments on May 19, 2017.
Please Wait while comments are loading...