ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿಗೆ ಸಹಾನುಭೂತಿ ತೋರಿದ ಸಿದ್ದರಾಮಯ್ಯ!

|
Google Oneindia Kannada News

Recommended Video

5 states election resuts 2018:ಪ್ರಧಾನಿ ಮೋದಿಗೆ ಸಹಾನುಭೂತಿ ತೋರಿದ ಸಿದ್ದರಾಮಯ್ಯ! | Oneindia Kannada

ಬೆಂಗಳೂರು, ಡಿಸೆಂಬರ್ 12: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಟ್ವೀಟ್ ಮಾಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಗೆಲುವಿನಲ್ಲಿ ಮೈಮರೆಯಬೇಡಿ, ಇದು ಹೋರಾಟದ ಕಾಲ: ಸಿದ್ದರಾಮಯ್ಯ ಎಚ್ಚರಿಕೆಗೆಲುವಿನಲ್ಲಿ ಮೈಮರೆಯಬೇಡಿ, ಇದು ಹೋರಾಟದ ಕಾಲ: ಸಿದ್ದರಾಮಯ್ಯ ಎಚ್ಚರಿಕೆ

"ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶದ ಮತದಾರರು ಸರ್ವಾಧಿಕಾರಿ, ಕೋಮುವಾದಿ ಮತ್ತು ದುರಹಂಕಾರಿ ನಾಯಕತ್ವವನ್ನು ತಿರಸ್ಕರಿಸಿ, ಪ್ರಜಾಪ್ರಭುತ್ವವಾದಿ, ಜಾತ್ಯತೀತ ಮತ್ತು ವಿನಯವಂತ ನಾಯಕತ್ವವನ್ನು ಬೆಂಬಲಿಸಿದ್ದಾರೆ.

ಸೋಲನ್ನು ವಿಧೇಯತೆಯಿಂದ ಸ್ವೀಕರಿಸಿದ ಪ್ರಧಾನಿ ಮೋದಿ ಸೋಲನ್ನು ವಿಧೇಯತೆಯಿಂದ ಸ್ವೀಕರಿಸಿದ ಪ್ರಧಾನಿ ಮೋದಿ

ಮತದಾರರಿಗೆ ಕೃತಜ್ಞತೆಗಳು, ರಾಹುಲ್‌ಜಿಗೆ ಅಭಿನಂದನೆಗಳು, ನರೇಂದ್ರ ಮೋದಿಯವರಿಗೆ ಸಹಾನುಭೂತಿಗಳು" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Siddaramaiah expresses sympathy for Modi

ಇದಕ್ಕೂ ಮುನ್ನ ಫಲಿತಾಂಶದಲ್ಲಿ ಕಾಂಗ್ರೆಸ್ಸಿಗೆ ಮುನ್ನಡೆ ವ್ಯಕ್ತವಾಗುತ್ತಿದ್ದಂತೆಯೇ, "ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ. ಇದು ಗೆದ್ದು ಬೀಗುವ ಸಮಯ ಅಲ್ಲ. ಸೈದ್ಧಾಂತಿಕವಾಗಿ ಗಟ್ಟಿಗೊಂಡು ನೆಲದಲ್ಲಿ ಕಾಲೂರಿ ಹೋರಾಟದಲ್ಲಿ ತೊಡಗಬೇಕಾದ ಕಾಲ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗಿದ್ದರೆ, ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ಮಿಜೋರಾಂ ನಲ್ಲಿ ಎಂಎನ್ ಎಫ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಐದೂ ರಾಜ್ಯಗಳಲ್ಲೂ ಬಿಜೆಪಿ ಸೋಲು ಕಂಡಿದೆ. ತಾನು ಅಧಿಕಾರದಲ್ಲಿದ್ದ ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ಮೂರೂ ರಾಜ್ಯಗಳಲ್ಲೂ ಬಿಜೆಪಿ ಸೋಲುಂಡಿದ್ದು, ಬಿಜೆಪಿ ನಾಯಕರಲ್ಲಿ ಆತಂಕ ಸೃಷ್ಟಿಸಿದೆ.

English summary
5 states assembly election resuts 2018: Former chief minister of Karnataka, Siddaramaiah convey his thanks to voters and also Congress president Rahul Gandhi. And also express sympathy about PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X