ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಟಿಆರ್‌ನಲ್ಲಿ ದೋಸೆ, ರವಾ ಇಡ್ಲಿ, ಹಲ್ವಾ ಸವಿದ ಸಿಎಂ

|
Google Oneindia Kannada News

ಬೆಂಗಳೂರು, ಆ.22 : ಬಿಬಿಎಂಪಿ ಚುನಾವಣೆ ಪ್ರಚಾರ ಕಾರ್ಯಮುಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ಎಂಟಿಆರ್‌ಗೆ ಹೋಗಿ ಹಲ್ವಾ, ರವೆ ಇಡ್ಲಿ, ಮಸಾಲೆ ದೋಸೆ ಸವಿದಿದ್ದಾರೆ, ಕಡಿಮೆ ಸಕ್ಕರೆ ಹಾಕಿಸಿಕೊಂಡು ಫಿಲ್ಟರ್ ಕಾಫಿ ಕುಡಿದಿದ್ದಾರೆ.

ಶುಕ್ರವಾರ ಬೆಳಗ್ಗೆ 9.30ಕ್ಕೆ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಮುಂತಾದವರು ಲಾಲ್ ಬಾಗ್ ಸಮೀಪವಿರುವ ಎಂಟಿಆರ್‌ಗೆ ಆಗಮಿಸಿ ಉಪಹಾರ ಸವಿದಿದ್ದಾರೆ.

siddaramaih

ಮೊದಲು ಮೆನು ವಿಚಾರಿಸಿದ ಸಿದ್ದರಾಮಯ್ಯ ಅವರು ಬಾದಾಮಿ ಹಲ್ವಾ ತರುವಂತೆ ಸೂಚಿಸಿದರು. ಬಾದಾಮಿ ಹಲ್ವಾ ಸವಿದ ಬಳಿಕ ರವಾ ಇಡ್ಲಿ, ಚಟ್ನಿ, ಸಾಗು ಸವಿದರು. ನಂತರ ಹೋಟೆಲ್‌ನವರು ಪ್ರೀತಿಯಿಂದ ಕೊಟ್ಟ ಮಸಾಲೆ ದೋಸೆ ನೋಡಿ 'ಇವತ್ತು ಮಧ್ಯಾಹ್ನ ಊಟ ಬೇಡಪ್ಪ' ಎಂದು ದೋಸೆ ತಿಂದರು.

ಮಸಾಲೆ ದೋಸೆ ಮುರಿದ ಬಳಿಕ ಫಿಲ್ಟರ್ ಕಾಫಿ ತರುವಂತೆ ಸೂಚಿಸಿದರು. 'ಸ್ವಲ್ಪ ಸಕ್ಕರೆ ಕಡಿಮೆ ಹಾಕಪ್ಪ' ಎಂದು ಹೇಳುವುದನ್ನು ಮುಖ್ಯಮಂತ್ರಿಗಳು ಮರೆಯಲಿಲ್ಲ. 'ಉಪಹಾರಕ್ಕೆ ಹೊರಗೆ ಹೋಗೋಣ ಎಂದು ಬೆಳಗ್ಗೆ ಅಂದುಕೊಂಡಾಗ ತಕ್ಷಣ ನೆನಪಾಗಿದ್ದು ಎಂಟಿಆರ್' ಆದ್ದರಿಂದ ಇಲ್ಲಿಗೆ ಬಂದೆವು ಎಂದು ಸಿದ್ದರಾಮಯ್ಯ ಹೇಳಿದರು.

 food

2004ರಲ್ಲಿ ಬಂದಿದ್ದರು : 'ರಾಜಕಾರಣಕ್ಕೆ ಬಂದ ಮೇಲೆ ಸಮಯದ ಅಭಾವದಿಂದ ಎಂಟಿಆರ್‌ಗೆ ಬರಲು ಆಗಿರಲಿಲ್ಲ. ಹಿಂದೆ 2004ರಲ್ಲಿ ಬಂದಿದ್ದೆ. ಇವತ್ತು ಮಸಾಲೆ ದೋಸೆ, ರವಾ ಇಡ್ಲಿ, ಬಿಸಿಬೇಳೆ ಬಾತ್ ತಿಂತಿದ್ದೀನಿ' ಎಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿದ್ದರಾಮಯ್ಯ ಹೇಳಿದರು.

English summary
Karnataka Chief Minister Siddaramaiah taste breakfast at Mavalli Tiffin Room (MTR) on Friday morning. Accompanied by Cabinet colleague H.C. Mahadevappa and a MLA Dr. M.C. Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X