ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯರಿಂದ ಭಾವುಕ ಪತ್ರ

|
Google Oneindia Kannada News

Recommended Video

ಕರ್ನಾಟಕ ಜನತೆಗೆ ಸಿದ್ದರಾಮಯ್ಯ ಬರೆದ ಭಾವುಕ ಪತ್ರ | Oneindia Kannada

ಬೆಂಗಳೂರು, ಡಿಸೆಂಬರ್ 13 : 'ರಾಜ್ಯದ ರೈತರ ಸಾಲ ತೀರಿಸಿದ ನಿಮ್ಮ ಮಗನಾದ ನನ್ನನ್ನು ನೀವೆಂದಿಗೂ ಕೈಬಿಡಲಾರಿರಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಜಾಹಿರಾತಿನ ಮೂಲಕ ವಿಧಾನಸಭೆ ಚುನಾವಣೆಗೆ ಅಧಿಕೃತ ಚಾಲನೆ ನೀಡಿದ್ದಾರೆ.

ನಾಲ್ಕೂವರೆ ವರ್ಷಗಳ ಹಿಂದೆ ನಮ್ಮನ್ನು ಹರಸಿ ನಮಗೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ನಮಗೆ ನೀಡಿದ್ದೀರಿ, ನಾನು ಮುಖ್ಯಮಂತ್ರಿಯಾಗಿ ಮನಸ್ಸಿನಲ್ಲಿಯೇ ಇನ್ನೊಂದು ಪ್ರಮಾಣ ಮಾಡಿದ್ದೆ, ನುಡಿದಂತೆ ನಡೆಯುತ್ತೇನೆ ಎಂಬ ಪ್ರಮಾಣ ಮಾಡಿದ್ದೆ . ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇಡೀ ಕರ್ನಾಟಕ ನನ್ನ ದೊಡ್ಡ ಕುಟುಂಬ ಎಂದು ನಾನು ನಂಬಿದ್ದೇನೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಎಲ್ಲರ ಮನೆಯ ಮಗನಾಗಿ ಎಲ್ಲ ಕಷ್ಟ -ಕಾರ್ಪಣ್ಯ , ನೋವು-ಸಂಕಟಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ.

ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳೇನು?

ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳೇನು?

ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ, ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆಯಿಂದ ಬದುಕುವ ವಾತಾವರಣವನ್ನು ನಿರ್ಮಿಸಬೇಕು.

ಕೃಷಿ ಸಂಪತ್ತು ಬೆಳೆಯಬೇಕು. ರೈತರು ನೆಮ್ಮದಿಯಿಂದ ಬದುಕುವಂತಾಗಬೇಕು. ಉದ್ಯಮ ಕ್ಷೇತ್ರದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಹಳ್ಳಿ-ಪಟ್ಟಣ ಬೇಧವಿಲ್ಲದೆ ಮೂಲಸೌಕರ್ಯ ವೃದ್ಧಿಯಾಗಬೇಕು. ಅಧಿಕಾರ ಮತ್ತು ಅವಕಾಶ ಸಮನಾಗಿ ಎಲ್ಲರಿಗೂ ಹಂಚಿಕೆಯಾಗಬೇಕು. ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಕಂಡ ಕನಸು, ನಾಲ್ಕೂವರೆ ವರ್ಷಗಳಲ್ಲಿ ನನಸಾಗಿರುವುದಕ್ಕೆ ನಾನು ಸಾಕ್ಷಿಯಾಗಿದ್ದೇನೆ ಎಂಬ ಹೆಮ್ಮೆ ಇದೆ.

ರಾಜಕಾರವೆಂದರೆ ಜನಸೇವೆ ಮಾಡಲು ಒದಗಿಬಂದ ಅವಕಾಶ:

ರಾಜಕಾರವೆಂದರೆ ಜನಸೇವೆ ಮಾಡಲು ಒದಗಿಬಂದ ಅವಕಾಶ:

ರಾಜಕಾರಣ ಎನ್ನುವುದು ಅಧಿಕಾರ ಎಂದು ಎಂದಿಗೂ ತಿಳಿದಿಲ್ಲ. ನನ್ನ ಪಾಲಿಗೆ ಅದು ಜನರ ಸೇವೆ ಮಾಡಲು ಒದಗಿಬಂದ ಅವಕಾಶ, ನಮ್ಮದು ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡಬೇಕೆಂದು ಪ್ರಾಮಾನಿಕ ಆಶಯದ ಸರ್ಕಾರ ನಮ್ಮದಾಗಿದೆ.

ಪ್ರತಿಯೊಬ್ಬ ಪ್ರಜೆಯ ಜೀವನಮಟ್ಟ ಸುಧಾರಣೆಯನ್ನು ಗುರಿಯಾಗಿಟ್ಟುಕೊಂಡು ಸರ್ವೋದಯ ತತ್ವದ ಅಭಿವೃದ್ಧಿ ಮಾದರಿ, ಇದನ್ನು ನಾನು ಕರ್ನಾಟಕದ ಅಭಿವೃದ್ಧಿ ಮಾದರಿ ಎಂದು ಕರೆಯಲು ಹೆಮ್ಮೆ ಪಡುತ್ತೇನೆ.

ನಮ್ಮದು ಒಂದೇ ಕರ್ನಾಟಕ ಅದರಲ್ಲಿ ಭೇದವಿಲ್ಲ:

ನಮ್ಮದು ಒಂದೇ ಕರ್ನಾಟಕ ಅದರಲ್ಲಿ ಭೇದವಿಲ್ಲ:

ಉತ್ತರ, ದಕ್ಷಿಣ ಎಂಬ ಭೇದವಿಲ್ಲಲ, ನಮ್ಮದು ಒಂದೇ ಕರ್ನಾಟಕ, ಅದು ಅಖಂಡ ಕರ್ನಾಟಕ, ನಮ್ಮ ಸರ್ಕಾರ ಇಡೀ ಕರ್ನಾಟಕಕ್ಕೆ ಸೇರಿದ್ದು, ನಾನು ಇಲ್ಲಿನ ಆರೂವರೆ ಕೋಟಿ ಜನತೆಗೆ ಮುಖ್ಯಮಂತ್ರಿ, ಕೆಲವು ಚಾರಿತ್ರಿಕ ಕಾರಣದಿಂದ ರಾಜ್ಯದ ಕೆಲವು ಭಾಗಗಳು ಹಿಂದುಳಿದಿರುವುದು ನಿಜ. ಅವುಗಳ ಅಭಿವೃದ್ಧಿಗೆ ಒತ್ತು ನೀಡುವ ಸರ್ಕಾರ ನಮ್ಮದಾಗಿದೆ.

ಅಮಾಯಕರ ಮನದಲ್ಲಿ ಪ್ರಾಂತೀಯ ಭಾವನೆ ಬೀರುತ್ತಿದ್ದಾರೆ:

ಅಮಾಯಕರ ಮನದಲ್ಲಿ ಪ್ರಾಂತೀಯ ಭಾವನೆ ಬೀರುತ್ತಿದ್ದಾರೆ:

ಒಂದು ನಿರ್ದಿಷ್ಟ ಪ್ರದೇಶದ ಹಿಂದುಳಿಯುವಿಕೆಯನ್ನು ಮಾತ್ರ ಹೆಕ್ಕಿ ತೆಗೆದು ಅದರಲ್ಲಿ ರಾಜ್ಯಕೀಯ ಉದ್ದೇಶ-ದುರುದ್ದೇಶಗಳನ್ನು ಆರೋಪಿಸಿ ಅಮಾಯಕ ಜನರಲ್ಲಿ ಪ್ರಾಂತೀಯ ಭಾವನೆಯನ್ನು ಬಡಿದೆಬ್ಬಿಸುವುದು ಸರಿಯಲ್ಲ. ನಮ್ಮ ಹಿರಿಯರು ರಕ್ತ- ಬೆವರು ಹರಿಸಿ ಅಖಂಡ ಕರ್ನಾಟಕವನ್ನು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.

ಹೃದಯ ಮತ್ತು ದೃಷ್ಟಿಕೋನ ವಿಶಾಲವಾಗಿರಬೇಕು:

ಹೃದಯ ಮತ್ತು ದೃಷ್ಟಿಕೋನ ವಿಶಾಲವಾಗಿರಬೇಕು:

ನಾವು ವಿಶಾಲ ಕರ್ನಾಟಕದ ಬಗ್ಗೆ ಮಾತನಾಡುತ್ತೇವೆ. ಮಾತು ಮಾತ್ರವಲ್ಲ ನಮ್ಮ ಹೃದಯ ಮತ್ತು ದೃಷ್ಟಿಕೂಡ ವಿಶಾಲವಾಗಿರಬೇಕು. ಹಾಗಿದ್ದಾಗ ಮಾತ್ರ ನಮ್ಮ ಕರ್ನಾಟಕ ಅಖಂಡ ಕರ್ನಾಟಕವಾಗಿಯೇ ಉಳಿಯುತ್ತದೆ.

ಯಾವುದೇ ಕಾರಣಕ್ಕೂ ಒಡೆಯುವ ಪ್ರಯತ್ನ ಯಶಸ್ಸು ಕಾಣಲು ಬಿಡುವುದಿಲ್ಲ. ಕರ್ನಾಟಕದ ಜನ, ಅನ್ನಕೊಟ್ಟವರನ್ನು, ಹಾಲು ಕೊಟ್ಟವರನ್ನು, ನೀರುಕೊಟ್ಟವರನ್ನು, ಮನೆ ಕೊಟ್ಟವರನ್ನು, ಔಷಧ ಕೊಟ್ಟವರನ್ನು, ಸಾಲ ತೀರಿಸಿದವರನ್ನು ಎಂದಿಗೂ ಮರೆಯುದಿಲ್ಲ ಎನನ್ಉವ ವಿಶ್ವಾಸವಿದೆ ಎಂದು

ಪತ್ರದಲ್ಲಿ ಬರೆದಿದ್ದಾರೆ.

ಗುಂಡಿ ಮುಚ್ಚುತ್ತೇವೆ ಎಂದವರು ಎಲ್ಲಿದ್ದಾರೆ:

15 ದಿನಗಳಲ್ಲಿ ಗುಂಡಿ ಮುಚ್ಚುತ್ತೇವೆ ಅಂತ ಇನ್ನುಮುಚ್ಚದ ಬನಶಂಕರಿ, ರಘುವನಹಳ್ಳಿ ಕನಕಪುರ ರಸ್ತೆಯನ್ನು ನೋಡಿದರೆ ಅಭಿವೃದ್ಧಿ ತಿಳಿಯುತ್ತದೆ ಎಂದಿದ್ದಾರೆ.

ಹಲವಾರು ಪ್ರಕರಣಗಳನ್ನು ಮುಚ್ಚಿದ ಸರ್ಕಾರ:

ಲೋಕಾಯುಕ್ತ ಸಂಸ್ಥೆಯನ್ನು ಬಂದು ಮಾಡಿದ್ದು, ಡಿವೈಎಸ್ ಪಿ ಆತ್ಮಹತ್ಯೆ ಪ್ರಕರಣವನ್ನು ಹಳ್ಳ ಹಿಡಿಸಿದ್ದು, ಸಚಿವರ ಮೇಲೆ ಐಟಿ ದಾಳಿಯಾಗಿದೆ, ಆದರೂ ಯಾವುದೇ ಸಚಿವರು ರಾಜೀನಾಮೆ ನೀಡಿಲ್ಲ ಇದು ಸರ್ಕಾರದ ಅಭಿವೃದ್ಧಿಯೇ ಎಂದು ಪ್ರಶಸ್ನಿಸಿದ್ದಾರೆ.

English summary
Siddaramaiah emotional appeal to people: Chief minister Siddaramaiah has made an emotional appeal to the people and remind that he had waived debt of the farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X