'ಜೆ.ಪಿ.ನಗರವೋ ಮತ್ತೊಂದು ನಗರವೋ ಒತ್ತುವರಿ ತೆರವು ಖಚಿತ'

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 20 : 'ರಾಜ ಕಾಲುವೆ ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡವರು ಯಾರೇ ಆಗಿರಲಿ, ಅವರು ಎಷ್ಟೇ ಪ್ರಭಾವಿಗಳಾಗಿರಲಿ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಂಜೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಪ್ರಭಾವಿಗಳು ಕಟ್ಟಿರುವ ಮನೆಗಳನ್ನು ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕೈ ಬಿಡಲಾಗಿದೆ ಎಂಬುದು ಸುಳ್ಳು. ಅದು ಮಾಧ್ಯಮಗಳ ಸೃಷ್ಟಿ' ಎಂದು ಹೇಳಿದರು.[ಒತ್ತುವರಿ ತೆರವಿಗೆ ತೊಂದರೆ ಇಲ್ಲ ಎಂದ ದರ್ಶನ್]

raja kaluve

'ಒತ್ತುವರಿ ತೆರವು ವಿಚಾರದಲ್ಲಿ ಯಾರಿಗೂ ಸಹಾಯ ಮಾಡುವ ಪ್ರಶ್ನೆಯೇ ಇಲ್ಲ. ಸಹಾಯ ಕೇಳಿ ನಮ್ಮ ಬಳಿಗೆ ಯಾರೂ ಬರುವ ಮಾತೂ ಇಲ್ಲ. ದೊಡ್ಡವರಾಗಲಿ, ಚಿಕ್ಕವರಾಗಲಿ. ಅದು ಜೆ.ಪಿ. ನಗರವಾಗಲಿ, ಮತ್ತೊಂದು ನಗರವೇ ಆಗಿರಲಿ. ಒತ್ತುವರಿ ಆಗಿದ್ದರೆ ತೆರವು ಮಾಡಲೇಬೇಕಾಗುತ್ತದೆ' ಎಂದು ತಿಳಿಸಿದರು.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್ ಸೈಟ್ ನಲ್ಲಿ ಲಭ್ಯ]

'ರಾಜ ಕಾಲುವೆಗಳಲ್ಲಿ ನೀರು ಹರಿದು ಹೋಗಲು ಎಲ್ಲೆಲ್ಲಿ ಅಡಚಣೆ ಆಗಿದೆಯೋ, ಎಲ್ಲೆಲ್ಲಿ ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆಯೋ ಅಲ್ಲಿ ಕಾರ್ಯಾಚರಣೆ ನಡೆಯುತ್ತದೆ. ಕೆರೆಗಳಲ್ಲಿ ಬಿಡಿಎ ವತಿಯಿಂದಲೇ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಮೂಲ ಸ್ವರೂಪ ಕಳೆದುಕೊಂಡು ನಿರುಪಯುಕ್ತವಾಗಿರುವ ಕೆರೆಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗಿದೆ' ಎಂದು ಸಮರ್ಥಿಸಿಸಿಕೊಂಡರು.[ಒತ್ತುವರಿ ತೆರವು ಕಾರ್ಯಾಚರಣೆ, ಪರಿಹಾರ ಸಿಗುತ್ತಾ?]

'ಕೆಂಪಾಬುದಿ ಕೆರೆಯಲ್ಲಿ ಬಸ್ ನಿಲ್ದಾಣ ತಲೆ ಎತ್ತಿದೆ. ಮಿಲ್ಲರ್ ಕೆರೆಯಲ್ಲಿ ಕಾಂಗ್ರೆಸ್ ಕಚೇರಿ ಮತ್ತಿತರ ಕಟ್ಟಡಗಳಿವೆ. ಒಂದು ವೇಳೆ ಕಾರ್ಯಾಚರಣೆ ಕೈಗೊಂಡರೆ ಅಕ್ರಮವಾಗಿ ನಿರ್ಮಿಸಿರುವ 1 ಲಕ್ಷ ಕಟ್ಟಡಗಳನ್ನು ತೆರವು ಮಾಡಬೇಕಾಗುತ್ತದೆ. ಆ ರೀತಿ ಮಾಡಲು ಆಗುವುದಿಲ್ಲ' ಎಂದು ಮುಖ್ಯಮಂತ್ರಿಗಳು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah defended the Bruhat Bengaluru Mahanagara Palike (BBMP) rajakaluve encroachments demolition drive at Bengaluru city.
Please Wait while comments are loading...