ಟಿಪ್ಪು ದೇಶಪ್ರೇಮಿ : ಅಮಿತ್ ಶಾಗೆ ಸಿದ್ದು ದೇಶಭಕ್ತಿಯ ಪಾಠ

Posted By:
Subscribe to Oneindia Kannada
   ಟಿಪ್ಪು ಜಯಂತಿ ಆಚರಿಸಿಯೇ ಆಚರಿಸುತ್ತೇವೆ ಎಂದು ಟ್ವಿಟ್ಟರ್ ನಲ್ಲಿ ಹೇಳಿದ ಸಿದ್ದರಾಮಯ್ಯ | Oneindia Kannada

   ಬೆಂಗಳೂರು, ಅಕ್ಟೋಬರ್ 03: ಯಾರು ಎಷ್ಟೇ ವಿರೋಧಿಸಿದರೂ ಟಿಪ್ಪು ಜಯಂತಿಯನ್ನು ಆಚರಿಸದೆ ಬಿಡುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ.

   ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನವೆಂಬರ್ 10 ರಂದು ಆಚರಿಸಲು ನಿರ್ಧರಿಸಿರುವ ಟಿಪ್ಪು ಜಯಂತಿಯ ಕುರಿತು ರಾಜ್ಯದಾದ್ಯಂತ ಪರವಿರೋಧ ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರು, ದೇಶದ್ರೋಹಿ ಟಿಪ್ಪು ಜಯಂತಿ ಆಚರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್ಸಿಗರು, ದೇಶಪ್ರೇಮಿ ಟಿಪ್ಪು ಜಯಂತಿಯನ್ನು ಆಚರಿಸದೆ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಉಭಯ ಪಕ್ಷಗಳ ಈ ಹಗ್ಗಜಗ್ಗಾಟಕ್ಕೆ ಕರ್ನಾಟಕದ ಜನತೆ ಮೌನಸಾಕ್ಷಿಯಾಗಿದ್ದಾರೆ.

   ಐತಿಹಾಸಿಕ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಸ್ಮರಿಸಿದ ರಾಷ್ಟ್ರಪತಿ ಕೋವಿಂದ್

   ಈ ನಡುವೆ, "ರಾಜ್ಯೋತ್ಸವದಷ್ಟೇ ಅಭಿಮಾನದಿಂದ ಟಿಪ್ಪು ಸೇರಿದಂತೆ 26 ಮಹಾ ಪುರುಷರು ಹಾಗೂ ಮಹಾ ಮಾತೆಯರ ಜಯಂತಿಯನ್ನು ನಮ್ಮ ಸರ್ಕಾರ ಆಚರಿಸುತ್ತಿದೆ." ಎಂಬ ಸಿದ್ದರಾಮಯ್ಯ ಟ್ವೀಟ್ ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅತ್ತ ಪರಿವರ್ತನಾ ಯಾತ್ರೆಯಲ್ಲಿ ನಿರತರಾಗಿರುವ ಬಿಜೆಪಿ ನಾಯಕರು ಟಿಪ್ಪು ಜಯಂತಿ ಆಚರಣೆಯ ಸರ್ಕಾರದ ನಿರ್ಧಾರ 'ಅಲ್ಪಸಂಖ್ಯಾತರ ಓಲೈಕೆಯ ನಾಟಕ' ಎಂದಿದ್ದಾರೆ.

   ಟಿಪ್ಪು ಜಯಂತಿ ವಿವಾದ: ಹೆಗಡೆ ವಿರುದ್ಧ ಕಾನೂನು ಕ್ರಮಕ್ಕೆ ಟಿಪ್ಪು ಕುಟುಂಬ ಒತ್ತಾಯ

   #ನಮ್ಮವರುನಮ್ಮಹೆಮ್ಮೆ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಕುರಿತು ಸಾಲು ಸಾಲು ಟ್ವೀಟ್ ಮಾಡಿದ್ದಾರೆ.

   ರಾಜ್ಯೋತ್ಸವದಷ್ಟೇ ಅದ್ಧೂರಿಯಾಗಿ ಟಿಪ್ಪು ಜಯಂತಿ ಆಚರಿಸುತ್ತೇವೆ

   ರಾಜ್ಯೋತ್ಸವದಷ್ಟೇ ಅಭಿಮಾನದಿಂದ ಟಿಪ್ಪೂ ಸೇರಿದಂತೆ 26 ಮಹಾ ಪುರುಷರು ಹಾಗೂ ಮಹಾ ಮಾತೆಯರ ಜಯಂತಿಯನ್ನು ನಮ್ಮ ಸರ್ಕಾರ ಆಚರಿಸುತ್ತಿದೆ.

   ನಾವು ಇತಿಹಾಸ ಸ್ಮರಿಸುವವರು

   ನಾವು ಇತಿಹಾಸ ಪುರುಷರನ್ನು ನೆನಪು ಮಾಡಿಕೊಳ್ಳುವವರು. ಬಿಜೆಪಿಯವರು ಇತಿಹಾಸವನ್ನು ತಿರುಚಿ ಸಾಮಜಿಕ ಸಾಮರಸ್ಯವನ್ನು ಹಾಳುಮಾಡುವವರು.

   ಟಿಪ್ಪು ಒಬ್ಬ ದೇಶಪ್ರೇಮಿ

   ರಾಜ್ಯದ ಜನತೆ ಟಿಪ್ಪು ಜಯಂತಿಯನ್ನು ಒಪ್ಪಿದ್ದಾರೆ. ಟಿಪ್ಪು ಒಬ್ಬ ದೇಶಪ್ರೇಮಿ. ಆತ ಹಿಂದೂ ಅಥವಾ ಯಾವುದೇ ಜನಾಂಗದ ವಿರೋಧಿ ಆಗಿರಲಿಲ್ಲ.

   ಬಿಜೆಪಿ ನಾಯಕರು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ!

   ಟಿಪ್ಪುವೇಷ ಹಾಕಿ ಖಡ್ಗಹಿಡಿದು ಕುಣಿದಿದ್ದ ಬಿ.ಎಸ್.ಯಡಿಯೂರಪ್ಪ ಜಗದೀಶ್ ಶೆಟ್ಟರ್,ಅಶೋಕ್ ಈಗ ಟಿಪ್ಪು ಜಯಂತಿ ವಿರೋಧಿಸುತ್ತಿರುವುದು ಆತ್ಮವಂಚನೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   "Tippu Sultan is a true patriot. We will celebrate his birthday on Nov 10th" Karnataka chief minister Siddaramaiah confirmed about Tippu Jayanti celebration through his twitter statements.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ