ಮುಸ್ಲಿಂ ವಿದ್ವಾಂಸ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ ನಿಧನಕ್ಕೆ ಸಿಎಂ ಸಂತಾಪ

Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 8: ಅಮೀರೆ ಶರಿಯತ್ ಹಝ್ರತ್ ಮೌಲಾನಾ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ(80) ಇಂದು ಮುಂಜಾನೆ 2.30ರ ಸುಮಾರಿಗೆ ನಿಧರಾಗಿದ್ದಾರೆ.

ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಜ್ಯದ ಪ್ರಖ್ಯಾತ ಇಸ್ಲಾಮಿ ವಿದ್ವಾಂಸರಾಗಿದ್ದ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ, ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿದ್ದರು. ಬೆಂಗಳೂರಿನ ಗೋವಿಂದಪುರದಲ್ಲಿರುವ ಪ್ರತಿಷ್ಟಿತ ಇಸ್ಲಾಮೀ ಶರೀಯತ್ ಕಾಲೇಜ್, 'ದಾರುಲ್ ಉಲೂಂ ಸಬೀಲುರ್ರಷಾದ್' ಇದರ ಪ್ರಾಂಶುಪಾಲರು ಆಗಿದ್ದರು.

ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಕಾರ್ಯಕಾರಿ ಸಮಿತಿ ಸದಸ್ಯ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಉಪಾಧ್ಯಕ್ಷ, ಇಸ್ಲಾಮಿ ಫಿಖಾ ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು.

Siddaramaiah condolences to death of Muslim scholar Moulana Mufti Ashraf Ali Saheb

ಮೃತರ ನಮಾಝೆ ಜನಾಝವನ್ನು ಸೆಪ್ಟೆಂಬರ್ 9ರಂದು ಬೆಳಗ್ಗೆ 10 ಗಂಟೆಗೆ ಸಬೀಲುರ್ರಷಾದ್ ನಲ್ಲಿ ನೆರವೇರಿಸಲಿದ್ದು, ಅವರ ಪಾರ್ಥಿವ ಶರೀರವನ್ನು ಕಾಲೇಜಿನ ಆವರಣದಲ್ಲಿ ದಫನ್ ಮಾಡಲಾಗುತ್ತದೆ.

ಮೃತಪಟ್ಟ ಮೌಲಾನ ಅಶ್ರಫ್ ಅಲಿಯವರು ಪತ್ನಿ, ನಾಲ್ಕು ಜನ ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

Siddaramaiah condolences to death of Muslim scholar Moulana Mufti Ashraf Ali Saheb

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಗೃಹ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಜಮೀರ್ ಅಹಮದ್, ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಸೇರಿ ಹಲವು ರಾಜಕೀಯ ಮುಖಂಡರು ಮೌಲಾನ ಅಶ್ರಫ್ ಅಲಿಯವರ ಪಾರ್ಥಿವ ಶರೀರಕ್ಕೆ ಇಂದು ಅಂತಿಮ ನಮನ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief minister Siddaramaiah condolences on the demise of Amer-A-Shariat Karnataka Moulana Mufti Ashraf Ali Saheb.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ