ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಪರಮಾಪ್ತರಿಂದ ವೋಟರ್ ಐಡಿ ಗೋಲ್ ಮಾಲ್ ?

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 13: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಕೆ. ಆರ್. ಪುರಂ ಕ್ಷೇತ್ರದಲ್ಲಿ ಭರ್ಜರಿ ವೋಟರ್ ಐಡಿ ಗೋಲ್ ಮಾಲ್ ನಡೆದಿದೆಯಾ? ಹೀಗೊಂದು ಅನುಮಾನಗಳು ಕಾಡುತ್ತಿವೆ.

ಮತದಾರರ ಪಟ್ಟಿಯಲ್ಲಿ ಒಂದೇ ವಿಳಾಸ ಹೊಂದಿರುವ 39 ಮತದಾರರ ಗುರುತಿನ ಚೀಟಿಗಳು ಕೆ. ಆರ್. ಪುರಂನಲ್ಲಿ ಪತ್ತೆಯಾಗಿದ್ದು ಇವುಗಳು ನಕಲಿ ಎನ್ನಲಾಗಿದೆ. ಈ ವೋಟರ್ ಐಡಿಗಳನ್ನು ಕೆ. ಆರ್. ಪುರಂ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 58ರಲ್ಲಿ ನೋಂದಣಿ ಮಾಡಲಾಗಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಎಲ್ಲಾ ಮತದಾರರ ವಿಳಾಸವನ್ನೂ, "ನಂಬರ್ 20/2, ಸತ್ಯಸಾಯಿ ಆಸ್ಪತ್ರೆ, ಹಳೆ ಆರ್.ಟಿ.ಒ ಕಚೇರಿ ಸಮೀಪ, ಭಟ್ಟರಹಳ್ಳಿ" ಎಂದು ನೀಡಲಾಗಿದೆ. ಅಂದಹಾಗೆ ಇದು ದೇವಸಂದ್ರ ವಾರ್ಡ್ ನಂ.55ರ ಕಾರ್ಪೋರೇಟರ್ ಶ್ರೀಕಾಂತ್ ಒಡೆತನದ ಆಸ್ಪತ್ರೆಯಾಗಿದೆ.

Siddaramaiah close associates created fake voters in KR Puram?

ಶ್ರೀಕಾಂತ್ ಸಿದ್ದರಾಮಯ್ಯನವರ ಪರಮಾಪ್ತ ಕೆ.ಆರ್. ಪುರಂ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ್ ಬಲಗೈ ಬಂಟರಾಗಿದ್ದಾರೆ.

ಮತದಾರರ ಪಟ್ಟಿ: 39 ಸಾವಿರ ಅರ್ಜಿಗಳು ಬಾಕಿಮತದಾರರ ಪಟ್ಟಿ: 39 ಸಾವಿರ ಅರ್ಜಿಗಳು ಬಾಕಿ

ಈ ಕುರಿತು ದೃಶ್ಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀಕಾಂತ್, "ಇದಕ್ಕೂ ನನಗೂ ಸಂಬಂಧವಿಲ್ಲ. ನನ್ನ ಹೆಸರು ಕೆಡಿಸಲು ಆಸ್ಪತ್ರೆಯ ವಿಳಾಸ ನೀಡಲಾಗಿದೆ. ಇದು ನನ್ನ ವಾರ್ಡ್ ವ್ಯಾಪ್ತಿಯಲ್ಲಿ ನೋಂದಣಿಯಾದ ಮತದಾರರ ಗುರುತಿನ ಚೀಟಿಗಳಲ್ಲ," ಎಂದು ಹೇಳಿದ್ದಾರೆ.

Siddaramaiah close associates created fake voters in KR Puram?

ಇತ್ತೀಚೆಗಷ್ಟೇ ಬೈರತಿ ಬಂಟ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದು ಸುದ್ದಿಯಾಗಿದ್ದರು. ಇದೀಗ ಅವರ ಕ್ಷೇತ್ರದಲ್ಲೇ ಮತದಾರರ ಪಟ್ಟಿಗೆ ನಕಲಿ ಮತದಾರರು ಸೇರ್ಪಡೆಯಾಗಿರುವ ಅನುಮಾನಗಳು ಎದ್ದಿವೆ.

English summary
Karnataka assembly elections 2018: Are there fake voters included in the voters list in KR Puram? There are doubts about this. Here is the some documents regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X