ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ 3 ಎಲಿವೇಟೆಡ್ ರಸ್ತೆ ಕೊಡುಗೆ ನೀಡಿದ ಸಿಎಂ

|
Google Oneindia Kannada News

ಬೆಂಗಳೂರು, ಮೇ 09 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಮಹಾನಗರಕ್ಕೆ ಮೂರು ಎಲಿವೇಟೆಡ್ ರಸ್ತೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ನಷ್ಟದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 1000 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು ಈ ವಿಷಯವನ್ನು ತಿಳಿಸಿದರು. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ಸಮಯ ಮತ್ತು ಇಂಧನ ವ್ಯರ್ಥವಾಗುತ್ತಿದೆ. ಆದ್ದರಿಂದ 3 ಎಲಿವೇಟೆಡ್ ಕಾರಿಡಾರ್ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

siddaramaiah

* ಕಾರಿಡಾರ್ 1 : ಉತ್ತರ-ದಕ್ಷಿಣದ ಈ ಕಾರಿಡಾರ್ ರಸ್ತೆ 16 ಕಿ.ಮೀ ಇರಲಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಆರಂಭವಾಗಿ ಹೆಬ್ಬಾಳದಲ್ಲಿ ಕೊನೆಗೊಳ್ಳಲಿದೆ. [ಅಭಿವೃದ್ಧಿಯಾಗಲಿರುವ ರಾಜ್ಯ ಹೆದ್ದಾರಿಗಳ ಪಟ್ಟಿ]

* ಕಾರಿಡಾರ್ 2 : ಪೂರ್ವ-ಪಶ್ಚಿಮದ ಈ ಕಾರಿಡಾರ್ 21 ಕಿ.ಮೀ. ಇರಲಿದ್ದು, ಕೆ.ಆರ್.ಪುರಂನಿಂದ ಗೊರಗುಂಟೆಪಾಳ್ಯದಲ್ಲಿ ಮುಕ್ತಾಯವಾಗಲಿದೆ. [ಶಿರಾಡಿ ಘಾಟ್ ಕಾಂಕ್ರಿಟ್ ರಸ್ತೆ ಕಾಮಗಾರಿ ಚಿತ್ರಗಳು]

* ಕಾರಿಡಾರ್ 3 : ಪೂರ್ವ-ಪಶ್ಚಿಮದ ಈ ಕಾರಿಡಾರ್ 27 ಕಿ.ಮೀ.ಇರಲಿದ್ದು, ಜ್ಞಾನ ಭಾರತಿಯಿಂದ ವೈಟ್‌ಫೀಲ್ಡ್ ವರೆಗೆ ನಿರ್ಮಾಣವಾಗಲಿದೆ.

ಜಾಗತಿಕ ಟೆಂಡರ್ : ಈ ಮೂರು ಯೋಜನೆಗಳಿಗೆ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯಲಾಗುವುದು. ರಸ್ತೆ ಮುಕ್ತಾಯಗೊಂಡ ಬಳಿಕ ಟೋಲ್ ಸಂಗ್ರಹ ಮಾಡಲಾಗುತ್ತದೆ. ಈ ರಸ್ತೆಗಳು ನಿರ್ಮಾಣವಾದರೆ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳಕ್ಕೆ 20 ನಿಮಿಷ, ಕೆ.ಆರ್.ಪುರಂನಿಂದ ಗೊರಗುಂಟೆಪಾಳ್ಯಕ್ಕೆ 21 ನಿಮಿಷ ಹಾಗೂ ಜ್ಞಾನ ಭಾರತಿಯಿಂದ ವೈಟ್‌ಫೀಲ್ಡ್‌ಗೆ 40 ನಿಮಿಷದಲ್ಲಿ ಪ್ರಯಾಣಿಸಬಹುದು ಎಂದು ಸಿಎಂ ವಿವರಣೆ ನೀಡಿದರು.

English summary
Karnataka Chief Minister Siddaramaiah announced three elevated roads to Bengaluru (Bangalore). The proposed project includes a North-South corridor from Central Silk Board to Hebbal and two East-West corridors — between Jnanabharathi and Whitefield,K.R.Puram and Goraguntepalya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X