ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರಂಜನ್ ಕುಟುಂಬಕ್ಕೆ ಕರ್ನಾಟಕದಿಂದ 30 ಲಕ್ಷ ರೂ ಪರಿಹಾರ

|
Google Oneindia Kannada News

ಬೆಂಗಳೂರು, ಜನವರಿ 04 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಠಾಣ್‌ಕೋಟ್‌ ವಾಯುನೆಲೆಯನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕೆ. ಕುಮಾರ್ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು.

ಸೋಮವಾರ ಬೆಳಗ್ಗೆ ಬಿಇಎಲ್ ಮೈದಾನದಲ್ಲಿ ನಿರಂಜನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ಘೋಷಣೆ ಮಾಡಿದರು. ನಿರಂಜನ್ ಅವರ ಕುಟುಂಬಕ್ಕೆ ಅಗತ್ಯ ಸಹಹಾರ ನೀಡುವುದಾಗಿ ಹೇಳಿದರು. [ಪಠಾಣ್ ಕೋಟ್ ದಾಳಿ : ಪಾಕಿಸ್ತಾನಕ್ಕೆ 3 ದಿನದ ಗಡುವು]

siddaramaiah

ಇಂದು ಮಧ್ಯಾಹ್ನದ ತನಕ ಬಿಇಎಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಕೇರಳಕ್ಕೆ ತೆಗೆದುಕೊಂಡು ಹೋಗಿ, ಮಂಗಳವಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. [ಪಠಾಣ್ ಕೋಟ್ ದಾಳಿ : ಬೆಂಗಳೂರಿನ ನಿರಂಜನ್ ಹುತಾತ್ಮ]

ಎನ್‍ಎಸ್‍ಜಿಯ ಬಾಂಬ್ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ನಿರಂಜನ್, ಭಾನುವಾರ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸತ್ತ ಉಗ್ರನ ದೇಹದಿಂದ ಗ್ರನೇಡ್ ತೆಗೆಯುವಾಗ ಅದು ಸ್ಫೋಟಗೊಂಡು ಹುತಾತ್ಮರಾಗಿದ್ದರು.

ನಿರಂಜನ್ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಭಾನುವಾರ ರಾತ್ರಿ ಬೆಂಗಳೂರಿಗೆ ತರಲಾಗಿತ್ತು. ಇಂದು ಬೆಳಗ್ಗೆ ದೊಡ್ಡ ಬೊಮ್ಮಸಂದ್ರದಲ್ಲಿರುವ ನಿವಾಸಕ್ಕೆ ತೆಗೆದುಕೊಂಡು ಹೋಗಿ, ನಂತರ ಬಿಇಎಲ್ ಮೈದಾನಕ್ಕೆ ತರಲಾಗಿದೆ.

English summary
Karnataka Chief Minister Siddaramaiah on Monday announced a compensation of Rs. 30 lakh to the NSG commando Lieutenant Colonel Niranjan Kumar who killed in the grenade blast at Pathankot air base on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X