ದ್ವಿಚಕ್ರ ವಾಹನ, ಸಾರಿಗೆಯೇತರ ವಾಹನಗಳಿಗೂ ಸ್ಪೀಡ್ ಗವರ್ನರ್

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 10: ಸಾರಿಗೆ ವಾಹನಗಳ ಮಾದರಿಯಲ್ಲಿ ಸಾರಿಗೆಯೇತರ ವಾಹನಗಳು ಹಾಗೂ ದ್ವಿಚಕ್ರ ವಾಹನಗಳಿಗೂ ವೇಗ ನಿಯಂತ್ರಕ ಅಳವಡಿಕೆಗೆ ದಕ್ಷಿಣ ಭಾರತದ ಸಾರಿಗೆ ಪರಿಷತ್ತು ನಿರ್ಧರಿಸಿದೆ.

ಈ ಸಂಬಂಧದ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ. ಶುಕ್ರವಾರ ನಡೆದ 22ನೇ ದಕ್ಷಿಣ ಭಾರತ ಸಾರಿಗೆ ಪರಿಷತ್ತಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಇನ್ನೇನು ಬೆಂಗಳೂರಲ್ಲಿ ವಾಹನಗಳ ಸಂಖ್ಯೆ 75ಲಕ್ಷ ದಾಟಲಿದೆ!

ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ದ್ವಿಚಕ್ರ ವಾಹನಗಳು, ಸರ್ಕರೇತರ ವಾಹನಗಳ ವೇಗಕ್ಕೆ ತಡೆ ಹಾಕುವ ಉದ್ದೇಶದಿಂದ ವಿವಿಧ ರಾಜ್ಯಗಳ ಸಾರಿಗೆ ಸಚಿವರು ಸಹಮತ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಖಾಸಗಿ ವಾಹನಗಳಿಗೂ ಸ್ಪೀಡ್ ಗವರ್ನರ್ ಅಥವಾ ವಾಹನಗಳ ತಯಾರಿಕೆ ಹಂತದಲ್ಲೇ ವೇಗ ನಿಯಂತ್ರಕಗಳನ್ನು ಅಳವಡಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.

SICT decides speed governor for non transport vehicles also

ಈ ಸಂಬಂಧ 1988ರ ಮೋಟಾರು ವಾಹನ ಕಾಯ್ದೆ ಕಲಂ 118ಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಸಾರಿಗೆಯೇತರ ವಾಹನಗಳ ವೇಗ ಮಿತಿ ಗಂಟೆಗೆ 100ಕಿ.ಮೀ ಗಿಂತ ಹೆಚ್ಚಿದೆ. ಕೆಲವು ಹೈಟೆಕ್ ಬೈಕ್ ಗಳ ವೇಗ 150-200ಕಿ.ಮೀ ಇದೆ. ಮೂಲಗಳ ಪ್ರಕಾರ ಇದನ್ನು 80 ಕಿ.ಮೀ ತಗ್ಗಿಸುವ ಚಿಂತನೆ ಇದೆ. ಆದರೆ, ಇದನ್ನು ಅಂತಿಮವಾಗಿ ಕೇಂದ್ರ ಸರ್ಕಾರ ನಿರ್ಧರಿಸಲಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South India Transport Concil has decided to compolsory adoption of speed governor for non transport vehicles like, car, bike and other to curb fatal accidents.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ