ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕರ್ಕಶ ಶಬ್ದದ ಹಾರ್ನ್ ಗಳು ಐದು ಪಟ್ಟು ಹೆಚ್ಚಳ!

|
Google Oneindia Kannada News

ಬೆಂಗಳೂರು, ಮಾರ್ಚ್ 21: ನಗರದಲ್ಲಿ ಕರ್ಕಶ ಹಾರ್ನ್ ಹಾಕುವ ಪ್ರವೃತ್ತಿ ವಾಹನ ಚಾಲಕರಲ್ಲಿ ಹೆಚ್ಚಳವಾಗಿದ್ದು, ಟ್ರಾಫಿಕ್ ಪೊಲೀಸರು ಅಂತಹ ವಾಹನಗಳ ಮೇಲೆ ದಂಡ ವಿಧಿಸುವುದನ್ನೂ ಹೆಚ್ಚಿಸಿದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬೆಂಗಳೂರು ಸಂಚಾರ ಪೊಲೀಸರು 2017 ರಲ್ಲಿ 30,112ಪ್ರಕರಣವನ್ನು ದಾಖಲಿಸಿದ್ದರು. 2016ರಲ್ಲಿ 6837 ಪ್ರಕರಣಗಳು ದಾಖಲಾಗಿದ್ದವು. ಫೆಬ್ರವರಿ 28ರೊಳಗೆ ಕೇವಲ ಎರಡು ತಿಂಗಳುಗಳಲ್ಲಿ 5,560ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ಪಶ್ಚಿಮದಲ್ಲಿ ಹೆಚ್ಚಿದ ಟ್ರಾಫಿಕ್ ನಿಯಮ ಉಲ್ಲಂಘನೆ!ಬೆಂಗಳೂರು ಪಶ್ಚಿಮದಲ್ಲಿ ಹೆಚ್ಚಿದ ಟ್ರಾಫಿಕ್ ನಿಯಮ ಉಲ್ಲಂಘನೆ!

ವಿಶೇಷವಾಗಿ ಟ್ರಾಫಿಕ್ ಸಿಗ್ನಲ್ ಹಸಿರು ದೀಪ ತೋರಿದೊಡನೆ ಮುನ್ನುಗ್ಗುವ ವೇಳೆ ಈ ರೀತಿಯ ಕರ್ಕಶ ಶಬ್ದದ ಹಾರ್ನ್ ಹಾಕುವ ಪ್ರಮಾಣ ಹೆಚ್ಚುತ್ತಿದೆ. ಈ ಕರ್ಕಶ ಹಾರ್ನ್ ಹಾಕುವ ವಾಹನಗಳ ಕುರಿತು ಜಾಗೃತಿ ಮೂಡಿಸಲು ಸಾಕಷ್ಟು ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್, ಹಿತೇಂದ್ರ ತಿಳಿಸಿದ್ದಾರೆ.

Shrill horn cases increase five times

ದ್ವಿಚಕ್ರ ವಾಹನ ಸವಾರರು ಸಿಗ್ನಲ್ ಗಳಲ್ಲಿ ಹಾರ್ನ್ ಹಾಕುವುದನ್ನು ನಿಲ್ಲಿಸಬೇಕು. ಅದರಲ್ಲೂ ನೋ ಹಾಂಕಿಂಗ್ ಪ್ರದೇಶಗಳಲ್ಲಿ ಹಾರ್ನ್ ಹಾಕುವುದನ್ನು ತಡೆಗಟ್ಟಬೇಕಿದೆ. ಸತತವಾಗಿ ಕರ್ಕಶ ಶಬ್ದವು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇಷ್ಟೇ ಅಲ್ಲದೆ ಈ ಕರ್ಕಶವಾದ ಹಾರ್ನ್ ಗಳಿಂದ ರಕ್ತದೊತ್ತಡ ಹೆಚ್ಚಾಗುತ್ತಿದ್ದು, ಮಧುಮೇಹ ರೋಗವೂ ಕೂಡ ಪೊಲೀಸರಲ್ಲಿ ಹೆಚ್ಚಾಗುತ್ತಿದೆ.

ತಮ್ಮ ಆಹಾರ ಪದ್ಧತಿಯನ್ನು ಬಿಟ್ಟು ಜನರು ಹೊಸದಾಗಿ ಬಂದತಹ ಪಿಜ್ಜಾ, ಬರ್ಗರನ್ನು ತಮ್ಮ ಆಹಾರವೆಂದು ಒಪ್ಪಿಕೊಂಡು ತಿನ್ನುವ ರೀತಿಯಲ್ಲಿ, ತಮ್ಮ ಹಳೆಯ ಅಭ್ಯಾಸವನ್ನು ಬಿಟ್ಟು ಪೊಲೀಸರು ಹೇಳುವಂತಹ ಕೆಲವು ನಿಯಮಗಳನ್ನು ಅನುಸರಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಸಂಚಾರ ಪೊಲೀಸರು ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಸಮೀಕ್ಷೆ ಪ್ರಕಾರ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವೇ ಟ್ರಾಫಿಕ್ ಎಂದು ಹೇಳಲಾಗಿದೆ. ನೋ ಹಾಂಕಿಂಗ್ ಪ್ರದೇಶದಲ್ಲಿ ಹಾರ್ನ್ ಮಾಡಿದವರಿಗೆ 100ರೂ ದಂಡ ವಿಧಿಸಲಾಗುತ್ತಿತ್ತು, ಇದೀಗ 500 ರೂ ದಂಡ ವಿದಿಸಲಾಗುತ್ತಿದೆ. ಅಥವಾ ಕರ್ಕಶ ಶಬ್ದ ಮಾಡುವ ಹಾರ್ನ್ ಗಳಲ್ಲೇ ಕಿತ್ತೆಸೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Vehicle with shrill horn which disturb general public and environment worried Bengaluru traffic police since the cases have been increased five times comparing to last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X