'ಶ್ರೀಕೃಷ್ಣ ಸಂಧಾನ' ನಗೆ ನಾಟಕವನ್ನು ಮಿಸ್ ಮಾಡ್ಕೊಬೇಡಿ!

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಅವಿರತ ನಾಟಕ ಮಂಡಳಿಯು 'ಶ್ರೀಕೃಷ್ಣ ಸಂಧಾನ' ಹಾಸ್ಯ ನಾಟಕವನ್ನು ಏ.14ರಂದು ಹಮ್ಮಿಕೊಂಡಿದೆ. ನಾಟಕವು ಬಸವೇಶ್ವರನಗರದಲ್ಲಿರುವ ಕೆಇಎ ಪ್ರಭಾತ್ ಕಲಾಮಂದಿರದಲ್ಲಿ ನಡೆಯಲಿದೆ.

ಸಾಕ್ಷರತೆ ಮಹತ್ವದ ಸಾರುವ ಕನ್ನಡ ನಗೆ ನಾಟಕ 'ಶ್ರೀಕೃಷ್ಣ ಸಂಧಾನ' ಈಗ ಮತ್ತೊಮ್ಮೆ ನಗರದ ರಂಗ ಮಂದಿರಕ್ಕೆ ಕಾಲಿಡುತ್ತಿದೆ. ಈಗಾಗಲೇ ಜನಪ್ರಿಯಗೊಂಡಿರುವ ಈ ನಾಟಕವನ್ನು ಅವಿರತ ಸಂಸ್ಥೆಯವರು ಪ್ರಸ್ತುತ ಪಡಿಸುತ್ತಿದ್ದಾರೆ.
ನಾಟಕವನ್ನು ಪಿ. ದೀಪಕ್‌ ನಿರ್ದೇಶಿಸಿದ್ದು, ವಿ.ಎಸ್. ಅಶ್ವತ್ ಅವರು ರಚಿಸಿದ್ದು, ವಿ. ರಾಮರಾವ್ ಪುಟಾಣಿ ಅವರು ಮೂಲ ನಿರ್ದೇಶನ ಮಾಡಿದ್ದಾರೆ.

Shri Krishna Sandhana, a laughter play perform

ಈ ನಾಟಕವನ್ನು ಯಾರಿಗೂ ಅವಹೇಳನ ಮಾಡಲು ರಚಿಸಿರುವುದಲ್ಲ, ಕೇವಲ ಹಾಸ್ಯಕ್ಕಾಗಿಯೇ ರೂಪುಗೊಂಡ ಈ ಸರ್ವಕಾಲಿಕ ನಾಟಕದುದ್ದಕ್ಕೂ ಪ್ರೇಕ್ಷಕರಿಗೆ ನಗೆಯ ರಸದೌತಣ. ಹಳ್ಳಿಯ ಕಲಾವಿದರ ಮುಗ್ದತೆಯ ಜೊತೆಗೆ, ಅವರ ನಡುವಿನ ವೈಯುಕ್ತಿಕ ದ್ವೇಷವೂ ಸೇರಿಕೊಂಡಾಗ ಎಂತಹ ಗಂಭೀರ ಸನ್ನಿವೇಶಗಳೂ ಕೂಡ ಹೇಗೆ ಹಾಸ್ಯದ ರೂಪ ಪಡೆಯತ್ತವೆ.

ಈ ಕುರಿತು ಪ್ರತಿಬಿಂಬಿಸುವ ಈ ನಾಟಕದ ಗೆಜ್ಜೆಪೂಜೆ ಅಥವಾ ರಂಗತಾಲೀಮು ಅಥವಾ ಫೈನಲ್ ರಿಹರ್ಸಲ್ ಹೇಗಿರಬಹುದು ಎಂಬುದೇ ಇದರ ಮೂಲ ಸತ್ವ. ಅವಿರತ ತಂಡದ ಕಾರ್ಯಕರ್ತರೇ ಇಲ್ಲಿ ಬಣ್ಣ ಹಚ್ಚಿ ಅಭಿನಯಿಸುತ್ತಿರುವುದು ಈ ನಾಟಕದ ಮತ್ತೊಂದು ವಿಶೇಷ. ಏಪ್ರಿಲ್ 14 ರಂದು ಬೆಳಗ್ಗೆ 11.30 ಹಾಗೂ ಸಂಜೆ 5.30ಕ್ಕೆ ಹೀಗೆ ಒಟ್ಟು ಎರಡು ಪ್ರದರ್ಶನಗಳಿರಲಿವೆ. ನೀವೂ ಬನ್ನಿ ಈ ವಿಭಿನ್ನ ಪ್ರಯತ್ನವನ್ನು ಪ್ರೋತ್ಸಾಹಿಸಿ.
ನಾಟಕ : ಶ್ರೀ ಕೃಷ್ಣ ಸಂಧಾನ ( ಹಾಸ್ಯ ನಾಟಕ)
ರಚನೆ ಮತ್ತು ಸಂಗೀತ : ವಿ.ಎನ್. ಅಶ್ವತ್ಥ
ಮೂಲ ನಿರ್ದೇಶನ : ವಿ. ರಾಮ ರಾವ್ ಪುಟಾಣಿ
ತಂಡ : ಅವಿರತ ನಾಟಕ ಮಂಡಳಿ
ದಿನಾಂಕ : 14 ಏಪ್ರಿಲ್ 2018
ಶನಿವಾರ ಬೆಳಗ್ಗೆ 11, ಮತ್ತು 5.30 ಕ್ಕೆ
ಸ್ಥಳ : ಕೆಇಎ ಪ್ರಭಾತ್ ಕಲಾಮಂದಿರ, ಬಸವೇಶ್ವರನಗರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Aviratha, drama group will perform a laughter play, Shri Krishna Sandhana on April 14 at KEA Prabhath Kalamandir in Basaveshwar nagar. Writer VS Ashwath has written this play and direction by P. Deepak.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ