ಶೂಟೌಟ್: ಕಡಬಗೆರೆ ಶ್ರೀನಿವಾಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್

Written By: Ramesh
Subscribe to Oneindia Kannada
ಬೆಂಗಳೂರು, ಫೆಬ್ರವರಿ. 17 : ಯಲಹಂಕದ ಕೋಗಿಲು ಕ್ರಾಸ್ ಬಳಿ ಫೆಬ್ರವರಿ 3ರಂದು ನಡೆದ ಶೂಟೌಟ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರು ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಫೆಬ್ರವರಿ 03 ರಂದು ಕಡಬಗೆರೆ ಶ್ರೀನಿವಾಸ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಇವರು ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.[ನನ್ನ ಮೇಲಿನ ಗುಂಡಿನ ದಾಳಿಗೆ MLA ವಿಶ್ವನಾಥ್ ಕಾರಣ: ಶ್ರೀನಿವಾಸ್]

Shootout survivor kadabagere srinivas discharge from hospital

ತನ್ನ ಮೇಲೆ ನಡೆದ ಗುಂಡಿನ ದಾಳಿಗೆ ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ಸೇರಿದಂತೆ ಡಾನ್ ಸತೀಶ್ ಮತ್ತು ಬೂನ್ ಬಾಬು ಕಾರಣ ಎಂದು ಆಸ್ಪತ್ರೆಯಲ್ಲಿ ನಿನ್ನೆ ಫೆಬ್ರವರಿ 16 ರಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. [ಕಡಬಗೆರೆ ಸೀನ ಶೂಟೌಟ್: ನನ್ನ ಪಾತ್ರ ಏನಿಲ್ಲ: ಶಾಸಕ ವಿಶ್ವನಾಥ್]

ಆ ಹೇಳಿಕೆಯನ್ನು ಆಸ್ಪತ್ರೆ ಸಿಬ್ಬಂದಿಗಳು ರೆಕಾರ್ಡ್ ಮಾಡಿಕೊಂಡಿದ್ದು ಸಂಬಂಧಿಸಿದ ತಹಸೀಲ್ದಾರ್ ಹಾಗೂ ಪೊಲೀಸರಿಗೆ ನೀಡಿದ್ದಾರೆ. ಆದರೆ, ಶಾಸಕ ವಿಶ್ವನಾಥ್ ಮಾತ್ರ ಈ ಆರೋಪವನ್ನು ಹಲ್ಲೆಗಳೆದಿದ್ದು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shootout survivor Begaluru APMC president kadabagere Srinivas discharge from hebbal columbia asia hospital on February 17.
Please Wait while comments are loading...