ನನ್ನ ಮೇಲಿನ ಗುಂಡಿನ ದಾಳಿಗೆ MLA ವಿಶ್ವನಾಥ್ ಕಾರಣ: ಶ್ರೀನಿವಾಸ್

Written By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ. 16 : ಬೆಂಗಳೂರಿನಲ್ಲಿ ನಡೆದ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಸೇರಿದಂತೆ ಡಾನ್ ಸತೀಶ್ ಮತ್ತು ಬೂನ್ ಬಾಬು ಅವರು ಶೂಟ್ ಮಾಡಿದ್ದಾರೆ ಎಂದು ಸ್ವತಃ ಗುಂಡಿನ ದಾಳಿಗೊಳಗಾಗಿದ್ದ ಶ್ರೀನಿವಾಸ್ ಆಸ್ಪತ್ರೆಯಿಂದಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಶ್ರೀನಿವಾಸ್ ನೀಡಿರುವ ಹೇಳಿಕೆಯನ್ನು ಆಸ್ಪತ್ರೆಯ ಸಿಬ್ಬಂದಿಗಳು ರೆಕಾರ್ಡ್ ಮಾಡಿಕೊಂಡಿದ್ದು. ಇದನ್ನು ಪೊಲೀಸ್ ಮತ್ತು ತಹಸೀಲ್ದಾರ್ ಅವರಿಗೆ ನೀಡಲಾಗಿದೆ.[ಶ್ರೀನಿವಾಸ ಶೂಟೌಟ್ ಕೇಸ್ : ಇನ್ನಿಬ್ಬರು ರೌಡಿ ಶೀಟರ್ ಗಳ ಬಂಧನ]

Shootout survivor kadabagere srinivas alleged on yelahanka mla sr vishwanath

ಫೆಬ್ರವರಿ 3 ರಂದು ಕಡಬಗೆರೆ ಶ್ರೀನಿವಾಸ್ ಮೇಲೆ ಗನ್ ನಿಂದ ಶೂಟ್ ಮಾಡಿ ಹತ್ಯೆಗೆ ಯತ್ನಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿರುವ ಶ್ರೀನಿವಾಸ್ ಬೆಂಗಳೂರಿನ ಹೆಬ್ಬಾಳ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಕಡಬಗೆರೆ ಸೀನ ಶೂಟೌಟ್: ನನ್ನ ಪಾತ್ರ ಏನಿಲ್ಲ: ಶಾಸಕ ವಿಶ್ವನಾಥ್]

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೊತ್ತನೂರು ಪೊಲೀಸರು ಇಬ್ಬರು ರೌಡಿ ಶೀಟರ್ ಗಳನ್ನು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shootout survivor Kadabagere Srinivas alleged on yelahanka BJP MLA SR Vishwanath in hospital on February 16.
Please Wait while comments are loading...